ಜಿಲ್ಲೆಗಳು

ಹನೂರು : ತಾ. ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದ ದೈಹಿಕ ಶಿಕ್ಷಣ ಸಂಯೋಜಕ ಮಹದೇವ್

ಹನೂರು: ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ 14 ವರ್ಷದೊಳಗಿನ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಜಯಗಳಿಸಿದ್ದಾರೆ.
ಬಾಲಕರ ವಾಲಿಬಾಲ್ ಪಂದ್ಯದಲ್ಲಿ ಸಂದನಪಾಳ್ಯ ಸಂತ ಅಂತೋಣಿ ಶಾಲೆ ಪ್ರಥಮ, ಹನೂರಿನ ವಿವೇಕಾನಂದ ಶಾಲೆ ದ್ವಿತೀಯ ಸ್ವಾನ ಪಡೆದುಕೊಂಡಿದೆ. ಕಬಡ್ಡಿಯಲ್ಲಿ ರಾಮಾಪುರದ ಇಂದಿರಾಗಾಂಧಿ ವಸತಿ ಶಾಲೆ ಪ್ರಥಮ, ಹೂಗ್ಯಂನ ಮೊರಾರ್ಜಿ ಶಾಲೆ ದ್ವಿತೀಯ ಸ್ಥಾನ, ಖೋ-ಖೋ ಪಂದ್ಯದಲ್ಲಿ ಕಣ್ಣೂರು ಸರ್ಕಾರಿ ಶಾಲೆ ಪ್ರಥಮ, ಕೆಂಪಯ್ಯನಹಟ್ಟಿ ಶಾಲೆ ದ್ವಿತೀಯ, ಥ್ರೋ ಬಾಲ್‍ನಲ್ಲಿ ಹನೂರಿನ ಕ್ರಿಸ್ತರಾಜ ಪ್ರಥಮ, ಹಳೇ ಮಾರ್ಟಳ್ಳಿ ಸರ್ಕರಿ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರೆ 4*100 ಮೀಟರ್ ರಿಲೆಯಲ್ಲಿ ಹನೂರಿನ ಕ್ರಿಸ್ತರಾಜ ಶಾಲೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಹಳೆ ಮಾರ್ಟಳ್ಳಿ ಸರ್ಕಾರಿ ಶಾಲೆ ಪಡೆದುಕೊಂಡಿದೆ.

ಗುಂಡು ಎಸೆತದಲ್ಲಿ ಸಂದನಪಾಳ್ಯ ಸಂತ ಅತೋಣಿ ಶಾಲೆಯ ಹ್ಯಾರಿಸ್ ಸ್ಯಾಮುವೇಲ್ ಪ್ರಥಮ, ಹನೂರಿನ ಕ್ರಿಸ್ತರಾಜ ಶಾಲೆಯ ಗೌರವ್ ದ್ವಿತೀಯ ಹಾಗೂ ರಾಮಾಪುರ ಜೆಎಸ್‍ಎಸ್ ಶಾಲೆಯ ವಿಷ್ಣುಕುಮಾರ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತಟ್ಟೆ ಎಸೆತದಲ್ಲಿ ಸಂತ ಅಂತೋಣಿ ಶಾಲೆಯ ಹ್ಯಾರಿಸ್ ಸ್ಯಾಮುವೆಲ್ (ಪ್ರ), ಇದೇ ಶಾಲೆಯ ಜೈಸನ್ (ದ್ವಿ), ವಡಕೆಹಳ್ಳ ಸರ್ಕಾರಿ ಶಾಲೆಯ ಶ್ರೀನಿವಾಸ್ (ತೃ), ಉದ್ದ ಜಿಗಿತದಲ್ಲಿ ಕ್ರಿಸ್ತರಾಜ ಶಾಲೆಯ ನಿರಂಜನ್ (ಪ್ರ), ಚನ್ನಾಲಿಂಗನಹಳ್ಳಿ ಶಾಲೆಯ ಮಧು (ದ್ವಿ), ಕೌದಳ್ಳಿ ಅಂತೋಣಿ ಶಾಲೆಯ ಸಂಜಯ್ (ತೃ), ಎತ್ತರ ಜಿಗಿತದಲ್ಲಿ ಬೈಲೂರು ಶಾಲೆಯ ನಾಗೇಶ್, ಮಾರ್ಟಳ್ಳಿ ಸಂತ ತೆರೆಸಾ ಶಾಲೆಯ ಜೆಸ್ಟಿನ್ ಲಿಯೋ ಹಾಗೂ ರಾಮಾಪುರ ಜೆಎಸ್‍ಎಸ್‍ನ ವಸಂತ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಗುಂಡು ಎಸೆತದಲ್ಲಿ ಪಿ.ಜಿ ಪಾಳ್ಯ ನಿರ್ಮಲ ಶಾಲೆಯ ಸಂಧ್ಯಾ (ಪ್ರ), ಇದೇ ಶಾಲೆಯ ಸಲೋನಿ ದಿಟಲಿತ (ದ್ವಿ), ತಟ್ಟೆ ಎಸೆತದಲ್ಲಿ ಮಾರ್ಟಳ್ಳಿ ಸಂತ ತೆರೆಸಾ ಶಾಲೆಯ ಶ್ರೇಯ ಜೋಸಿತ್ (ಪ್ರ), ರಾಮಾಪುರ ಜೆಎಸ್‍ಎಸ್ ಶಾಲೆಯ ಸಂಧ್ಯಾ (ದ್ವಿ), ಉದ್ದ ಜಿಗಿತದಲ್ಲಿ ಮ.ಬೆಟ್ಟ ಶ್ರೀ ಶಾಂತಮಲ್ಲಿಕಾರ್ಜುನ ಶಾಲೆಯ ಕೌಶಲ್ಯ (ಪ್ರ), ಪಿ.ಜಿ ಪಾಳ್ಯ ನಿರ್ಮಲ ಶಾಲೆಯ ನಾಗರತ್ನ (ದ್ವಿ), ಹಾಗೂ ಎತ್ತರ ಜಿಗಿತದಲ್ಲಿ ಮಾರ್ಟಳ್ಳಿ ಸಂತ ತೆರೆಸಾ ಶಾಲೆಯ ಪೆಲ್ಸಿ (ಪ್ರ), ರಾಮಾಪುರ ಜೆಎಸ್‍ಎಸ್ ಶಾಲೆಯ ಗಂಗೋತ್ರಿ ದ್ವಿತೀಯ ಸ್ಥಾನ ಪಡೆದಿದಾರೆ.

ವಾಲಿಬಾಲ್‍ನಲ್ಲಿ ಹೂಗ್ಯಂ ಸರ್ಕಾರಿ ಶಾಲೆ ಪ್ರಥಮ, ತೊಮಿಯಾರ್‍ಪಾಳ್ಯ ಸಂತ ಥಾಮಸ್ ದ್ವಿತೀಯ, ಕಬಡ್ಡಿಯಲ್ಲಿ ಮ.ಬೆಟ್ಟ ಶ್ರೀ ಶಾಂತಮಲ್ಲಿಕಾರ್ಜುನ ಶಾಲೆ ಪ್ರಥಮ, ಲೊಕ್ಕನಹಳಿ ಮಾನಸ ಶಾಲೆ ದ್ವಿತೀಯ ಹಾಗೂ ಖೋ-ಖೋದಲ್ಲಿ ಮ.ಬೆಟ್ಟ ಶಾಂತಮಲ್ಲಿಕಾರ್ಜುನ ಶಾಲೆ ಪ್ರಥಮ, ಹನೂರಿನ ವಿವೇಕಾನಂದ ಶಾಲೆ ದ್ವಿತೀಯ ಹಾಗೂ ಥ್ರೋ ಬಾಲ್‍ನಲ್ಲಿ ಹಳೆ ಮಾರ್ಟಳ್ಳಿ ಸರ್ಕಾರಿ ಶಾಲೆ ಪ್ರಥಮ, ಹನೂರಿನ ವಿವೇಕಾನಂದ ಶಾಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

andolanait

Recent Posts

ರಾಜ್ಯದಲ್ಲಿ ಮಳೆ ಕೊರತೆ: ತಾಪಮಾನ ಏರಿಕೆ: ಹವಾಮಾನ ಇಲಾಖೆ ಮಹತ್ವದ ಮುನ್ಸೂಚನೆ

ಬೆಂಗಳೂರು: ರಾಜ್ಯದ ಬಹುತೇಕ ಕಡೆ ಮಳೆ ಕೊರತೆ ಮುಂದುವರಿದಿದ್ದು, ತಾಪಮಾನ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಾರಿ ಮುಂಗಾರು ಕೊರತೆ…

2 hours ago

ಕೊಡಗು: ಪತ್ನಿಗೆ ಗುಂಡಿಕ್ಕಿ ಕೊಂದು ತಾನೂ ಗುಂಡು ಹಾರಿಸಿಕೊಂಡು ವೃದ್ಧ ಆತ್ಮಹತ್ಯೆ

ಸೋಮವಾರಪೇಟೆ: ತಾಲೂಕಿನ ಮಾದಾಪುರ ಹೋಬಳಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ಕೌಟುಂಬಿಕ ಕಲಹ ಶಂಕೆಯಡಿ ವೃದ್ಧ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಕನ್ನಿಕಂಡ…

2 hours ago

ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್: ಆಸ್ಪತ್ರೆಗೆ ದಾಖಲು..!!

ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿ ಇದ್ದ ಓಂ ಪ್ರಕಾಶ್ ರಾವ್ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಅಪಘಾತವೊಂದರಲ್ಲಿ ಓಂ ಪ್ರಕಾಶ್…

2 hours ago

2,000 ರೂ. ವರೆಗಿನ ಯುಪಿಐ ಪಾವತಿಗಳಿಗೆ ಶುಲ್ಕವಿಲ್ಲ: ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ

ನವದೆಹಲಿ: 2,000 ರೂ. ವರೆಗೆ ನಡೆಯುವ ಎಲ್ಲಾ UPI ವಹಿವಾಟುಗಳಿಗೆ ಶುಲ್ಕವಿಲ್ಲ. ಅಷ್ಟೇ ಅಲ್ಲ, RuPay ಡೆಬಿಟ್ ಕಾರ್ಡ್ ಮೂಲಕ…

2 hours ago

ಶತಕ ಬಾರಿಸಿದ ಸಿಎಂ ಎದುರು ಸವಾಲುಗಳೂ ಇವೆ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…

24 hours ago

ಎಐ; ಮನುಕುಲದ ವಿನಾಶಕ್ಕೆ ಕಾರಣವಾಗಲಿದೆಯೇ?

ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…

24 hours ago