ಹನೂರು: ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ನಡೆದ 14 ವರ್ಷದೊಳಗಿನ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಜಯಗಳಿಸಿದ್ದಾರೆ.
ಬಾಲಕರ ವಾಲಿಬಾಲ್ ಪಂದ್ಯದಲ್ಲಿ ಸಂದನಪಾಳ್ಯ ಸಂತ ಅಂತೋಣಿ ಶಾಲೆ ಪ್ರಥಮ, ಹನೂರಿನ ವಿವೇಕಾನಂದ ಶಾಲೆ ದ್ವಿತೀಯ ಸ್ವಾನ ಪಡೆದುಕೊಂಡಿದೆ. ಕಬಡ್ಡಿಯಲ್ಲಿ ರಾಮಾಪುರದ ಇಂದಿರಾಗಾಂಧಿ ವಸತಿ ಶಾಲೆ ಪ್ರಥಮ, ಹೂಗ್ಯಂನ ಮೊರಾರ್ಜಿ ಶಾಲೆ ದ್ವಿತೀಯ ಸ್ಥಾನ, ಖೋ-ಖೋ ಪಂದ್ಯದಲ್ಲಿ ಕಣ್ಣೂರು ಸರ್ಕಾರಿ ಶಾಲೆ ಪ್ರಥಮ, ಕೆಂಪಯ್ಯನಹಟ್ಟಿ ಶಾಲೆ ದ್ವಿತೀಯ, ಥ್ರೋ ಬಾಲ್‍ನಲ್ಲಿ ಹನೂರಿನ ಕ್ರಿಸ್ತರಾಜ ಪ್ರಥಮ, ಹಳೇ ಮಾರ್ಟಳ್ಳಿ ಸರ್ಕರಿ ಶಾಲೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರೆ 4*100 ಮೀಟರ್ ರಿಲೆಯಲ್ಲಿ ಹನೂರಿನ ಕ್ರಿಸ್ತರಾಜ ಶಾಲೆ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಹಳೆ ಮಾರ್ಟಳ್ಳಿ ಸರ್ಕಾರಿ ಶಾಲೆ ಪಡೆದುಕೊಂಡಿದೆ.
ಗುಂಡು ಎಸೆತದಲ್ಲಿ ಸಂದನಪಾಳ್ಯ ಸಂತ ಅತೋಣಿ ಶಾಲೆಯ ಹ್ಯಾರಿಸ್ ಸ್ಯಾಮುವೇಲ್ ಪ್ರಥಮ, ಹನೂರಿನ ಕ್ರಿಸ್ತರಾಜ ಶಾಲೆಯ ಗೌರವ್ ದ್ವಿತೀಯ ಹಾಗೂ ರಾಮಾಪುರ ಜೆಎಸ್‍ಎಸ್ ಶಾಲೆಯ ವಿಷ್ಣುಕುಮಾರ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ತಟ್ಟೆ ಎಸೆತದಲ್ಲಿ ಸಂತ ಅಂತೋಣಿ ಶಾಲೆಯ ಹ್ಯಾರಿಸ್ ಸ್ಯಾಮುವೆಲ್ (ಪ್ರ), ಇದೇ ಶಾಲೆಯ ಜೈಸನ್ (ದ್ವಿ), ವಡಕೆಹಳ್ಳ ಸರ್ಕಾರಿ ಶಾಲೆಯ ಶ್ರೀನಿವಾಸ್ (ತೃ), ಉದ್ದ ಜಿಗಿತದಲ್ಲಿ ಕ್ರಿಸ್ತರಾಜ ಶಾಲೆಯ ನಿರಂಜನ್ (ಪ್ರ), ಚನ್ನಾಲಿಂಗನಹಳ್ಳಿ ಶಾಲೆಯ ಮಧು (ದ್ವಿ), ಕೌದಳ್ಳಿ ಅಂತೋಣಿ ಶಾಲೆಯ ಸಂಜಯ್ (ತೃ), ಎತ್ತರ ಜಿಗಿತದಲ್ಲಿ ಬೈಲೂರು ಶಾಲೆಯ ನಾಗೇಶ್, ಮಾರ್ಟಳ್ಳಿ ಸಂತ ತೆರೆಸಾ ಶಾಲೆಯ ಜೆಸ್ಟಿನ್ ಲಿಯೋ ಹಾಗೂ ರಾಮಾಪುರ ಜೆಎಸ್‍ಎಸ್‍ನ ವಸಂತ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಗುಂಡು ಎಸೆತದಲ್ಲಿ ಪಿ.ಜಿ ಪಾಳ್ಯ ನಿರ್ಮಲ ಶಾಲೆಯ ಸಂಧ್ಯಾ (ಪ್ರ), ಇದೇ ಶಾಲೆಯ ಸಲೋನಿ ದಿಟಲಿತ (ದ್ವಿ), ತಟ್ಟೆ ಎಸೆತದಲ್ಲಿ ಮಾರ್ಟಳ್ಳಿ ಸಂತ ತೆರೆಸಾ ಶಾಲೆಯ ಶ್ರೇಯ ಜೋಸಿತ್ (ಪ್ರ), ರಾಮಾಪುರ ಜೆಎಸ್‍ಎಸ್ ಶಾಲೆಯ ಸಂಧ್ಯಾ (ದ್ವಿ), ಉದ್ದ ಜಿಗಿತದಲ್ಲಿ ಮ.ಬೆಟ್ಟ ಶ್ರೀ ಶಾಂತಮಲ್ಲಿಕಾರ್ಜುನ ಶಾಲೆಯ ಕೌಶಲ್ಯ (ಪ್ರ), ಪಿ.ಜಿ ಪಾಳ್ಯ ನಿರ್ಮಲ ಶಾಲೆಯ ನಾಗರತ್ನ (ದ್ವಿ), ಹಾಗೂ ಎತ್ತರ ಜಿಗಿತದಲ್ಲಿ ಮಾರ್ಟಳ್ಳಿ ಸಂತ ತೆರೆಸಾ ಶಾಲೆಯ ಪೆಲ್ಸಿ (ಪ್ರ), ರಾಮಾಪುರ ಜೆಎಸ್‍ಎಸ್ ಶಾಲೆಯ ಗಂಗೋತ್ರಿ ದ್ವಿತೀಯ ಸ್ಥಾನ ಪಡೆದಿದಾರೆ.
ವಾಲಿಬಾಲ್‍ನಲ್ಲಿ ಹೂಗ್ಯಂ ಸರ್ಕಾರಿ ಶಾಲೆ ಪ್ರಥಮ, ತೊಮಿಯಾರ್‍ಪಾಳ್ಯ ಸಂತ ಥಾಮಸ್ ದ್ವಿತೀಯ, ಕಬಡ್ಡಿಯಲ್ಲಿ ಮ.ಬೆಟ್ಟ ಶ್ರೀ ಶಾಂತಮಲ್ಲಿಕಾರ್ಜುನ ಶಾಲೆ ಪ್ರಥಮ, ಲೊಕ್ಕನಹಳಿ ಮಾನಸ ಶಾಲೆ ದ್ವಿತೀಯ ಹಾಗೂ ಖೋ-ಖೋದಲ್ಲಿ ಮ.ಬೆಟ್ಟ ಶಾಂತಮಲ್ಲಿಕಾರ್ಜುನ ಶಾಲೆ ಪ್ರಥಮ, ಹನೂರಿನ ವಿವೇಕಾನಂದ ಶಾಲೆ ದ್ವಿತೀಯ ಹಾಗೂ ಥ್ರೋ ಬಾಲ್‍ನಲ್ಲಿ ಹಳೆ ಮಾರ್ಟಳ್ಳಿ ಸರ್ಕಾರಿ ಶಾಲೆ ಪ್ರಥಮ, ಹನೂರಿನ ವಿವೇಕಾನಂದ ಶಾಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಹನೂರು : ತಾಲೂಕಿನ ಹೊಗೇನಕಲ್ ಫಾಲ್ಸ್‌ನ ನೀರಿನಲ್ಲಿ ಈಜಾಡುತ್ತಿದ್ದ ವೇಳೆ ವ್ಯಕ್ತಿಯೋರ್ವ ನೀರಿನ ಸುಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಭಾನುವಾರ…
ಬೆಂಗಳೂರು : ಪ್ರಯೋಗ ಶಾಲಾ ತಾಂತ್ರಿಕ ವಲಯದಲ್ಲಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ…
ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ನಾಲ್ಕೂವರೆ ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದು, ಈ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ.…
ವಾಷಿಂಗ್ಟನ್ : ಅಮೆರಿಕ ತನ್ನ ಮೇಲೆ ಮಾಡುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್, ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿನ ಅಮೆರಿಕದ ಮಿಲಿಟರಿ…
ಬೆಂಗಳೂರು : ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ. ಮಹಿಳೆ ಸ್ವಾಭಿಮಾನದಿಂದ ಬದುಕಲಿ ಎಂಬ ಉದ್ದೇಶದಿಂದ…
ಗುಂಡ್ಲುಪೇಟೆ : ತಾಲ್ಲೂಕಿನ ಮಂಚಹಳ್ಳಿ ಗ್ರಾಮದ ಮಂಜುನಾಥ ಎಂಬವರ ಜಮೀನಿಗೆ ಶನಿವಾರ ರಾತ್ರಿ ಕಾಡಾನೆ ನುಗ್ಗಿ ಕಟಾವು ಮಾಡಿ ಜಮೀನಿನ…