ಜಿಲ್ಲೆಗಳು

ಹನೂರಿಗೂ ಸಂಚಾರಿ ಕೃಷಿ ಚಿಕಿತ್ಸಾ ವಾಹನ

ಜಿಲ್ಲೆಗೆ ಇದು 3ನೇ ಸಂಚಾರಿ ಘಟಕ; ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ

ಚಾಮರಾಜನಗರ: ಬೆಳೆಗಳಲ್ಲಿ ರೋಗ, ಕಳೆ- ಕೀಟಬಾಧೆ ಕಂಡುಬಂದರೆ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಉಂಟಾದರೆ ಮತ್ತು ರಸಗೊಬ್ಬರ ಕಳಪೆಯಿಂದ ಕೂಡಿದ್ದರೆ ಅದರ ತಡೆಗೆ ‘ಸಂಚಾರಿ ಕೃಷಿ ಚಿಕಿತ್ಸಾ’ ವಾಹನ ಇನ್ನು ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿಯೂ ಸಂಚಾರ ಮಾಡಲಿದೆ!
ಮೊದಲಿಗೆ ಚಾಮರಾಜನಗರ,ನಂತರ ಗುಂಡ್ಲುಪೇಟೆಗೆ ಈ ಅನುಕೂಲವಿತ್ತು. ಬುಧವಾರ(ಫೆ. 1)ವಷ್ಟೇಸಂಚಾರಿ ವಾಹನ ಹನೂರು ತಾಲ್ಲೂಕಿಗೂ ಬಂದಿದ್ದು ಹೊಸ ವಾಹನ ಅಣಿಯಾಗಿ ನಿಂತಿದೆ. ಇದರೊಂದಿಗೆ, ಜಿಲ್ಲೆ ಇದುವರೆಗೆ
ಮೂರು ಸಂಚಾರಿ ವಾಹನಗಳನ್ನು ಕಂಡಂತಾಗಿದೆ.

ವಾಸ್ತವವಾಗಿ ಹೋಬಳಿಗೊಂದು ವಾಹನ ಸೇವೆ ಒದಗಿಸುವುದು ಸರ್ಕಾರದ ಆಶಯ. ಅಲ್ಲಿಯವರೆಗೆ ಒಂದೊಂದು ವಾಹನವನ್ನೂ ಆಯಾ ತಾಲ್ಲೂಕಿನಾದ್ಯಂತ ಬಳಸಿಕೊಳ್ಳುವ ಪ್ರಯತ್ನದಲ್ಲಿ ಕೃಷಿ ಇಲಾಖೆ ತೊಡಗಿದೆ.

ಏನಿದು ಸಂಚಾರಿ ವಾಹನ?: ಧ್ವನಿವರ್ಧಕ, ಮೈಕ್ರೋ ಸ್ಕೋಪ್, ಮಣ್ಣು-ಗೊಬ್ಬರ ಗುಣಮಟ್ಟ ಪರೀಕ್ಷಿಸುವ ಲ್ಯಾಬ್ ಮತ್ತು ರೈತರಿಗೆ ವಿಡಿಯೋ ಮೂಲಕ ಸಂದೇಶ ನೀಡಲು ಡಿಜಿಟಲ್ ಬೋರ್ಡ್ ಇತ್ಯಾದಿ ಸೌಲಭ್ಯಗಳುಳ್ಳ ಸಂಚಾರಿ ವಾಹನದಲ್ಲಿ ಕೃಷಿ ತಾಂತ್ರಿಕ ಸಹಾಯಕ ಮತ್ತು ಚಾಲಕ ಇರಲಿದ್ದಾರೆ.
155313 ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಗೆ ಅಥವಾ ನಿಯೋಜಿತ ತಾಂತ್ರಿಕ ಸಹಾಯಕರ ಮೊಬೈಲ್‌ಗೆ ಕರೆ ಮಾಡಿದ ರೈತರ ಹೆಸರನ್ನು ನೋಂದಾಯಿಸಿಕೊಂಡು ಸಾಮಾನ್ಯ ಸಮಸ್ಯೆಯಾಗಿದ್ದರೆ ವಾಟ್ಸಾಪ್ ಸಂದೇಶದ ಮೂಲಕವೇ ಪರಿಹರಿಸಲಾಗುತ್ತದೆ. ಸಮಸ್ಯೆ ಕಠಿಣವಾಗಿದ್ದರೆ ಅಥವಾ ರೈತ ಅಷ್ಟೊಂದು ತಿಳುವಳಿಕೆ ಹೊಂದಿಲ್ಲದವರಾದರೆ ಸಂಚಾರಿ ವಾಹನದಲ್ಲೇ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗುತ್ತದೆ.
ಬೆಳೆ ,ಮಣ್ಣಿನ ಸಮಸ್ಯೆ ಯಾವತರ ಇದೆ ಎನ್ನುವುದರ ಮೇಲೆ ಕೃಷಿ ಅಧಿಕಾರಿಗಳನ್ನು ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ವಾಹನದಲ್ಲಿ ಕರೆದೊಯ್ದು ಪರಿಶೀಲಿಸಿ ಅವರು ನೀಡುವ ಶಿಫಾರಸುಗಳನ್ನು ಪಾಲನೆ ಮಾಡುವಂತೆ ಹೇಳಲಾಗುತ್ತದೆ. ಇಲ್ಲದಿದ್ದಲ್ಲಿ ಬೆಳೆ ಮತ್ತು ಮಣ್ಣಿನ ಮೇಲೆ ಆಗುವ ಪರಿಣಾಮಗಳನ್ನು ಸ್ಥೂಲವಾಗಿ ತಿಳಿಸುವ ಕೆಲಸವನ್ನು ಸಂಚಾರಿ ತಾಂತ್ರಿಕ ಸಹಾಯಕರು ಮಾಡುತ್ತಾರೆ.
ಇದಲ್ಲದೇ, ಬೆಳೆವಿಮೆ, ಕಿಸಾನ್ ಸಮ್ಮಾನ್‌ ಸಹಿತ ಕೃಷಿ ಇಲಾಖೆ ಯೋಜನೆ ಮತ್ತು ಪ್ರಯೋಜನಗಳ ಬಗ್ಗೆಯೂ ಜಪದಟ್ಟಣೆ ಇರುವ ಸ್ಥಳಗಳಲ್ಲಿ ವಿಡಿಯೋ ಮತ್ತು ಧ್ವನಿವರ್ಧಕ ಮುಖಾಂತರ ಈ ವಾಹನದಲ್ಲಿ ತಿಳಿಸಲಾಗುತ್ತದೆ.
ಒಳ್ಳೆಯಯ ಬೆಳೆ ಬೆಳೆಯಬೇಕಾದರೆ ಸಾವಯವ ಇಂಗಾಲ,ರಸಸಾರ ಬಹಳ ಮುಖ್ಯ.ಇದು ಕನಿಷ್ಠ 1ಯೂನಿಟ್ ಆದರೂ ಇರಲೇ ಬೇಕು.ಅತಿಯಾ ದ ರಾಸಾಯನಿಕ ಗೊಬ್ಬರ, ಔಷಧಿ ಬಳಕೆಯಿಂದ ಇದರ ಪ್ರಮಾಣ ಅನೇಕ ಕಡೆ 0.5 ಯೂನಿಟ್ ಗೆ ಕುಸಿದಿದ್ದು ಇದರ ಮಟ್ಟವನ್ನು ಪರೀಕ್ಷೆ ಮೂಲಕ ಸ್ಥಳದಲ್ಲಿಯೇ ತಿಳಿಸಲಾಗುತ್ತದೆಮತ್ತು ಮಣ್ಣಿನ ಮಟ್ಟ ಸುಧಾರಿಸುವ ಮಾರ್ಗೋಪಾಯಗಳನ್ನು ಸಂಚಾರಿ ಘಟಕ ಸಿಬ್ಬಂದಿ ತಿಳಿಸಿಕೊಡಲಿದ್ದಾರೆ.
ಮಣ್ಣಿನ ಪಿಎಚ್ ಮಟ್ಟ ಕಡಿಮೆಯಾಗಿ ಭೂಮಿ ಕರಳಾಗುವ ಅಪಾಯವಿದೆ. ಈ ಬಗ್ಗೆಯೂ ಪರೀಕ್ಷೆ ನಡೆಸಿ ಜಿಪ್ಸಂ ಇತ್ಯಾದಿ ಶಿಫಾರಸು ಮಾಡಲಾಗುತ್ತದೆ.
ಬೆಳೆಮತ್ತು ಭೂಮಿಗೆ ಏನೇನು ಲಘು ಪೋಷಕಾಂಶಗಳ ಅಗತ್ಯ ಇದೆ ಎಂಬುದನ್ನು ಪರೀಕ್ಷೆ ನಡೆಸಿದ ನಂತರ ರೈತರಿಗೆ ತಿಳಿಸಿಕೊಡಲಾಗುತ್ತದೆ.
ಒಟ್ಟಾರೆ ಮಣ್ಣು, ಬೆಳೆಗಳ ಆರೋಗ್ಯ ಪರೀಕ್ಷೆ ನಡೆಸಿ ಉತ್ಪಾದನೆ ಹೆಚ್ಚಿಸುವ ರೈತ ಸ್ನೇಹಿಯಾಗಿ ಸಂಚಾರಿ ಘಟಕ ಕಾರ್ಯ ನಿರ್ವಹಿಸಲಿದೆ.
ಪ್ರಕೃತಿ ವಿಕೋಪ ಸಂದರ್ಭದಲ್ಲೂ ಇದರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ. ವಾಹನ ಜಿಪಿಎಸ್ ತಂತ್ರಜ್ಞಾನ ಹೊಂದಿದ್ದು ಅದರ ಇರುವಿಕೆಯನ್ನು ಕೇಂದ್ರ ಕಚೇರಿಯಲ್ಲಿಯೇ ಕುಳಿತು ಪತ್ತೆ ಮಾಡಬಹುದಾಗಿದೆ.


ಸಂಚಾರಿ ಕೃಷಿ ಚಿಕಿತ್ಸಾ ವಾಹನ ಹನೂರು ತಾಲ್ಲೂಕಿಗೆ ಬಂದಿದ್ದು ಚಾಲಕ ಹಾಗೂ ತಾಂತ್ರಿಕ ಸಹಾಯಕರ ನೇಮಕಾತಿ ಪ್ರಕ್ರಿಯೆ ಪೂರ್ಣ ಆದ ಕೂಡಲೇ ಸೇವೆಗೆ ತೊಡಗಿಸಿಕೊಳ್ಳಲಿದೆ.
ಸಂತೋಷ್ ಕುಮಾರ್, ಸ.ಕೃಷಿ ನಿರ್ದೇಶಕರು(ವಿಷಯ ತಜ್ಞ) ಜೆಡಿಎ ಕಚೇರಿ,ಚಾ.ನಗರ.


ಸಂಚಾರಿ ಕೃಷಿ ಚಿಕಿತ್ಸಾ ವಾಹನ ಸೇವೆ ಪಡೆಯಲು ಸಹಾಯವಾಣಿಗಾಗಲಿ ಅಥವಾ ಚಾ.ನಗರದ ತಾಂತ್ರಿಕ ಸಹಾಯಕರಿಗಾಗಲಿ 9972120069ಕರೆ ಮಾಡಬಹುದು. ಹಾಗೆೆಯೇ ಗುಂಡ್ಲುಪೇಟೆ ವಾಹನ ಸೇವೆಗಾಗಿ 8277930780ಗೆ ಕರೆ ಮಾಡಬೇಕಿದೆ. ನೇಮಕಾತಿ ನಂತರ ಹನೂರು ವಾಹನದ ತಾಂತ್ರಿಕ ಸಹಾಯಕರ ಮೊಬೈಲ್ ಸಂಖ್ಯೆ ತಿಳಿಸಲಾಗುವುದು. ಇಷ್ಟರಲ್ಲೇ ಈ ನೇಮಕಾತಿ ಪೂರ್ಣ ಗೊಳ್ಳಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

andolanait

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

2 hours ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

2 hours ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

2 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

4 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

12 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

12 hours ago