ಹೆಚ್.ಡಿ.ಕೋಟೆ ಹಾಡಿಯ ಮಕ್ಕಳೊಂದಿಗೆ ಹಂಸಲೇಖ ಹುಟ್ಟುಹಬ್ಬ ಆಚರಣೆ
ಮೈಸೂರು : ನಾದಬ್ರಹ್ಮ ಹಂಸಲೇಖ ಅವ ರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ ಈ ಸಂಭ್ರಮವನ್ನು ಆವರು ಹೆಚ್. ಡಿ.,ಕೋಟೆಯ ಹಾಡಿಯ ಮಕ್ಕಳೊಂದಿಗೆ ಆಚರಿಸಿಕೊಂಡಿದ್ದಾರೆ.
ಹೆಚ್. ಡಿ.ಕೋಟೆ ತಾಲ್ಲೂಕ್ಕಿನ ಬೊಮ್ಮಾಲಾಪುರ ಗ್ರಾಮದಲ್ಲಿ ರುವ ಹಾಡಿಯ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ, ಹಾಗೂ ಹಾಡಿಯ ಮಕ್ಕಳಲ್ಲಿರುವ ಸಂಗೀತ ಆಸಕ್ತಿಯನ್ನು ಮತ್ತಷ್ಟು ಹೆಚ್ಚು ಮಾಡುವ ಸಲುವಾಗಿ ಹಾರ್ಮೋನಿಯಂ ಮೂಲಕ ಅಲ್ಲಿದ್ದ ಮಕ್ಕಳ ಸ್ವರ ಮತ್ತು ಧ್ವನಿಯನ್ನು ಪರೀಕ್ಷೆ ಮಾಡಿ ಮಕ್ಕಳಿಗೆ ರಂಜಿಸಿದರು. ಆದಿವಾಸಿ ಜನರುಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಚರ್ಚಿಸಿದರು.ಪತ್ನಿ ಲತಾ ಹಂಸಲೇಖ ಕೂಡ ಜೊತೆಗಿದ್ದರು.