ಸೈನಿಕರಿಗೆ ಶೇ. 50 ರಷ್ಟು ತೆರಿಗೆ ವಿನಾಯಿತಿ : ಎಚ್.ವಿ. ರಾಜೀವ್

ಮೈಸೂರು : ಮಾಜಿ ಮತ್ತು ಹಾಲಿ ಸೈನಿಕರಿಗೆ ತೆರಿಗೆಯಲ್ಲಿ ಶೇಕಡ 50 ರಷ್ಟು ವಿನಾಯಿತಿ ನೀಡಲು ಮೂಡಾದಿಂದ ಮಂಜೂರು ಮಾಡಲಾದ ನಿವೇಶನಗಳ ಮಾಲೀಕರಿಗೆ ನಿವೇಶನದ ಗುತ್ತಿಗೆ ಅವಧಿ ಮುಗಿದಿದ್ದರೂ ವಿವಿಧ ಬ್ಯಾಂಕುಗಳಿಂದ ಸಾಲ ಪಡೆಯಲು ನಿರಾಕ್ಷೇಪಣಾ ಪತ್ರ ನೀಡಲು ತೀರ್ಮಾನಿಸಲಾಗಿದೆ.

ಮುಡಾದಿಂದ ಅನುಮೋದನೆಗೊಂಡಿರುವ ಖಾಸಗಿ ಬಡಾವಣೆಗಳಿಗೆ ಕುಡಿಯುವ ನೀರನ್ನು ಕಬಿನಿ ಮೂಲದಿಂದ ಒದಗಿಸಲು ಅಗತ್ಯವಿರುವ 150 ಕೋಟಿ ರೂಗಳನ್ನು ಪ್ರಾಧಿಕಾರದಿಂದಲೇ ಬರಿಸಲು ನಿರ್ಧರಿಸಲಾಗಿದೆ ಈ ನಿರ್ಧಾರದಿಂದ ಮುಂದಿನ 50 ವರ್ಷಗಳವರೆಗೆ ನಗರದ 50000 ಮನೆಗಳಿಗೆ ವಾರದ ಏಳು ದಿನವೂ ಕೂಡ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತದೆ ಎಂದರು.