ಕೆಲಸಕ್ಕೆ ಮರಳಿದ ಕಸ ಸಂಗ್ರಹ ವಾಹನ ಚಾಲಕರು
ಎಚ್.ಡಿ.ಕೋಟೆ: ಅಧಿಕಾರಿಗಳು ಮತ್ತು ಚಾಲಕರ ನಡುವೆ ನಡೆಯುತ್ತಿದ್ದ ಮುಸುಕಿನ ಗುದ್ದಾಟಕ್ಕೆ ಪುರಸಭೆ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಅಂತ್ಯ ಹಾಡಿದ್ದು, ೩ ದಿನಗಳಿಂದ ಸ್ಥಗಿತಗೊಂಡಿದ್ದ ಮನೆಮನೆ ಕಸ ಸಂಗ್ರಹಿಸುವ ವಾಹನಗಳನ್ನು ಚಾಲನೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುರಸಭೆಯಲ್ಲಿ ಟೆಂಡರ್ ಮೂಲಕ ಕೆಲಸ ನಿರ್ವಹಿಸುವ ಚಾಲಕರಿಗೆ ಕೆಲ ಅಧಿಕಾರಿಗಳು ನಿಂದಿಸುತ್ತಾರೆ ಎಂದು ಆರೋಪಿಸಿ ವಾಹನಗಳ ಕೀಗಳನ್ನು ಹಿಂತಿರುಗಿಸಿ ಕಳೆದ ಮೂರು ದಿನಗಳಿಂದ ಕೆಲಸಕ್ಕೆ ಹಾಜರಾಗಿರಲಿಲ್ಲ. ಇದರಿಂದ ಮನೆಗಳಲ್ಲಿ ಕಸ ವಿಲೇವಾರಿಯಾಗದೆ ಸಮಸ್ಯೆ ಉಂಟಾಗಿತ್ತು. ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್, ಸದಸ್ಯರಾದ ಮಿಲ್ ನಾಗರಾಜು, ಲೋಕೇಶ್ ಅವರು ಸ್ವತಃ ವಾಹನಗಳನ್ನು ಚಾಲನೆ ಮಾಡಿ ಮನೆಗಳಲ್ಲಿ ಕಸವನ್ನು ಸಂಗ್ರಹಿಸಿದ್ದರು.
ಪರಿಸ್ಥಿತಿ ಹದಗೆಟ್ಟಿದ್ದರಿಂದ ಪುರಸಭಾ ಅಧ್ಯಕ್ಷರಾದ ಅನಿತಾ ನಿಂಗನಾಯಕ, ಮುಖ್ಯಾಧಿಕಾರಿ ಸುರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್ ಸೇರಿದಂತೆ ಇನ್ನಿತರ ಸದಸ್ಯರು ಅಧಿಕಾರಿಗಳು ಮತ್ತು ಚಾಲಕರ ಜತೆ ಚರ್ಚೆ ನಡೆಸಿದರಲ್ಲದೆ, ಅಧಿಕಾರಿಗಳು ಏನೇ ತಪ್ಪು ಮಾಡಿದರೂ ನಮ್ಮ ಗಮನಕ್ಕೆ ತನ್ನಿ. ಏಕಾಏಕಿ ಈ ರೀತಿ ನಿರ್ಧಾರ ಕೈಗೊಂಡರೆ ಸಮಸ್ಯೆಯಾಗುತ್ತದೆ. ಏನೇ ಸಮಸ್ಯೆಗಳಿದ್ದರೂ ಬಗೆಹರಿಸೋಣ. ಅಧಿಕಾರಿಗಳ ವರ್ತನೆ ವಿಚಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಹಾಗಾಗಿ ಎಲ್ಲ ಚಾಲಕರು ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ.
* ಅಧಿಕಾರಿಗಳು ವಿನಾಕಾರಣ ನಿಂದಿಸುತ್ತಾರೆಂದು ಆರೋಪಿಸಿ ೩ ದಿನಗಳಿಂದ ಕಸ ಸಂಗ್ರಹ ಕಾರ್ಯ ಸ್ಥಗಿತಗೊಳಿಸಿದ್ದ ಚಾಲಕರು
* ಭಾನುವಾರ ಪುರಸಭೆ ಸದಸ್ಯರೇ ವಾಹನ ಚಲಾಯಿಸಿ ಕಸ ಸಂಗ್ರಹಿಸಿದ್ದರು
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ಶೋ ರೂಂ ತೆರೆಯುದಾಗಿ ವಿದ್ಯುತ್ ಚಾಲಿತ ಕಾರು ತಯಾರಿಕಾ ಕಂಪನಿ ʼಟೆಸ್ಲಾʼ…
ಚೆನ್ನೈ : ತಮಿಳ್ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ಹಾಗೂ ನಟ ವಿಜಯ್ ಅಭಿನಯದ ಜನ ನಾಯಗನ್ ಚಿತ್ರಕ್ಕೆ ಸಂಬಂಧಿಸಿದ…
ಮೈಸೂರು : ಸ್ವಚ್ಛ ನಗರಿ ಮೈಸೂರಿನ ರಮಣೀಯ ಸ್ಥಳವಾದ ಕುಕ್ಕರಹಳ್ಳಿ ಕೆರೆಯ ಸ್ವಚ್ಛತೆಗಾಗಿ, ಸ್ವಚ್ಛ ಸರ್ವೇಕ್ಷಣ ಅಭಿಯಾನದ ಭಾಗವಾಗಿ ಮೈಸೂರು…
ಬೆಂಗಳೂರು : ಸಿದ್ದರಾಮಯ್ಯ ಲೀಸ್ ಬೇಸ್ಡ್ ಮುಖ್ಯಮಂತ್ರಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಅಧಿಕಾರವಧಿಯಲ್ಲಿ…
ಬೆಂಗಳೂರು : ವಿದ್ಯಾರ್ಥಿ ಜೀವನದ ಅತಿ ಮಹತ್ವದ ಘಟ್ಟ ಎಂದೇ ಪರಿಗಣಿಸಲಾದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ…
ಮೈಸೂರು : ಸ್ಪಾಮ್ ಕರೆಗಳ ಮೂಲಕ ಡಿಜಿಟಲ್ ಅರೆಸ್ಟ್ ಹಾಗೂ ಡಿಜಿಟಲ್ ವಂಚನೆ ಮಾಡುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಫೋನಿನ ಕಾಲಿಂಗ್…