ಯಳಂದೂರು: ಸಮೀಪದ ಗೂಳಿಪುರದಲ್ಲಿ ಉರ್ಕಾತೇಶ್ವರಿ ವಿಗ್ರಹ ಪ್ರತಿಷ್ಠಾಪನೆ ಸಮಾರಂಭವು ಸಂಭ್ರಮದಿಂದ ನಡೆಯಿತು.
ಗ್ರಾಮದ ಹೊರ ವಲಯದಲ್ಲಿರುವ ಬಿಸಿಲು ಮಾರಮ್ಮ ದೇವಸ್ಥಾನದಿಂದ ಉರ್ಕಾತೇಶ್ವರಿ ವಿಗ್ರಹವನ್ನು ಪೂಜೆ ಕೈಂಕಾರ್ಯಗಳನ್ನು ಹಾಗೂ ಸತ್ತಿಗೆ, ಸೂರಪಾನಿಗಳ ಮೂಲಕ ಗುರುವಾರ ಸಂಜೆ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು.
ಶುಕ್ರವಾರ ಬೆಳಗ್ಗೆ ಗ್ರಾಮದ ಮಂಟೇಸ್ವಾಮಿ ದೇಗುಲದಿಂದ ಉರ್ಕಾತಮ್ಮ ದೇವಸ್ಥಾನವರೆಗೆ ಹಾಲರುವೆ ಉತ್ಸವ ನಡೆಯಿತು. ನಂತರ ಗ್ರಾಮಸ್ಥರ ಸಮ್ಮುಖದಲ್ಲಿ ವಿಗ್ರಹ ಪ್ರತಿಷ್ಠಾಪಿಸಲಾಯಿತು. ನಂತರ ರಾಮಮಂದಿರದಲ್ಲಿ ಜನರಿಗೆ ಪ್ರಸಾದ ವಿನಿಯೋಗಗ ಮಾಡಲಾಯಿತು. ಚಾಮರಾಜನಗರ ಗ್ರಾಮಸ್ಥರಾದ ರವೀಶ್, ದೇವರಗುಡ್ಡಪ್ಪ ಜಯಣ್ಣರವರು ಮಾತನಾಡಿದರು. ಗ್ರಾಮಸ್ಥರಾದ ಮಹಾದೇವನಾಯಕ, ದೊರೆಸ್ವಾಮಿನಾುಂಕ, ರವೀಶ್, ಜುಂಶೇಖರ್, ರಾಮು, ಅರ್ಚಕ ನಂಜುಂಡನಾುಂಕ, ಪುಟ್ಟಸ್ವಾಮಿ, ಮಹೇಶ್, ಮಹದೇವಸ್ವಾಮಿ, ನಾಗನಾಯಕ, ಗೋವಿಂದನಾಯಕ, ರಾಚಯ್ಯ, ಬಿಳಿಗಿರಿರಂಗನಾಯಕ, ರಂಗಸ್ವಾಮಿ, ಮದಕರಿ ಹಾಗೂ ವಾಲ್ಮೀಕಿ ಯುವಕರ ಸಂಘದ ಪದಾಧಿಕಾರಿಗಳು ಹಾಗೂ ಭಕ್ತರು ಹಾಜರಿದ್ದರು.
ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…
ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…
ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…
ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…
ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…