ಮೈಸೂರು : ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಮಾರಂಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ರವರಿಗೆ ಅಶೋಕಾಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸರ್ಕಾರದ ಸವಲತ್ತುಗಳು ಬ್ರಾಹ್ಮಣ ಸಮುದಾಯಕ್ಕೆ ತಲುಪುವಂತೆ ಮಾಡಲು ಮೈಸೂರು ಬ್ರಾಹ್ಮಣ ಯುವ ವೇದಿಕೆಯ ಪದಾಧಿಕಾರಿಗಳು ಜನಪ್ರತಿನಿಧಿಗಳು ವಿಪ್ರ ಮುಖಂಡರು ಮತ್ತು ಕಾನೂನು ತಜ್ಞರ ವಿಪ್ರ ನಿಯೋಗ ರಚಿಸಬೇಕೆಂದು ಮನವಿ ಸಲ್ಲಿಸಿದರು.
ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಅವರು ಮಾತನಾಡಿ ಕೇಂದ್ರ ಸರ್ಕಾರದ ಯೋಜನೆ ಮೇಲ್ವರ್ಗದ ಬಡವರಿಗೆ 10% ಮೀಸಲಾತಿ ಇನ್ನೂ ಕರ್ನಾಟಕದಲ್ಲಿ ಜಾರಿಗೆ ಬಂದಿಲ್ಲ, ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರವೇ ಸಿಗುತ್ತಿಲ್ಲ, ಆರ್ಥಿಕವಾಗಿ ಹಿಂದುಳಿದವರು ಎಂದು ಪ್ರಮಾಣಪತ್ರ ನೀಡಲಾಗುತ್ತಿದ್ದರೂ ಕೂಡ ಅದು ಕರ್ನಾಟಕ ಬ್ರಾಹ್ಮಣ ಮಂಡಳಿ ಯೋಜನೆಗೆ ಮಾತ್ರ ಸೀಮಿತವಾಗಿದೆ ಸಮುದಾಯದ ಬಡವರಿಗೆ ಬ್ರಾಹ್ಮಣ ಮಂಡಳಿ ಯೋಜನೆಯೂ ಸಹ ತಲುಪುತ್ತಿಲ್ಲ ಕಾರಣ ಕೆಲವು ಅವೈಜ್ಞಾನಿಕ ಕಾನೂನಾತ್ಮಕ ತೊಡಕಿದೆ ಜಾತಿ ಪ್ರಮಾಣ ಪತ್ರ ಪಡೆಯಲು ಶಾಲಾ ವ್ಯಾಸಾಂಗದ ವರ್ಗಾವಣೆ ಪತ್ರ ಕಡ್ಡಾಯವಾಗಿದೆ, 50ವರ್ಷ ಮೇಲ್ಪಟ್ಟವರಿಗೆ ಯಾವುದೇ ವೈದ್ಯಕೀಯ ಸಂಭಂಧ ಯೋಜನೆಗಳಿಲ್ಲ, EWS certificate ವಾಯಿದೆ ಕೇವಲ ಒಂದು ವರ್ಷ ಮಾತ್ರವಿದೆ ಅದನ್ನ ಪಡೆಯಲು ವಾಸವಿರುವ ಸ್ವಂತ ಮನೆ ಸಾವಿರ ಚದರ ದೊಳಗಿರಬೇಕು ಎನ್ನುವ ಅವೈಜ್ಞಾನಿಕತೆ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇದರಿಂದ ಮಧ್ಯಮ ವರ್ಗದ ಸಮುದಾಯದವರು ವಂಚಿತರಾಗುತ್ತಾರೆ, ಬ್ರಾಹ್ಮಣ ಸಮುದಾಯಕ್ಕೆ ಜೀವಿತಾವಧಿ ಜಾತಿಪ್ರಮಾಣ ಪತ್ರ ನೀಡಲು ಸರ್ಕಾರ ಮುಂದಾಗಬೇಕಿದೆ ಇದರಿಂದ ಶಿಕ್ಷಣ ಆರೋಗ್ಯ ಉದ್ಯೋಗ ವಿಚಾರವಾಗಿ ಬ್ರಾಹ್ಮಣರಿಗೆ ಉಪಯುಕ್ತವಾಗುತ್ತದೆ ಹಾಗಾಗಿ ವಿಪ್ರ ಸಮುದಾಯದ ಜನಪ್ರತಿನಿಧಿಗಳು ಕಾನೂನು ತಜ್ಞರು ಸಮುದಾಯದ ಮುಖಂಡರು ಒಳಗೊಂಡ ವಿಪ್ರನಿಯೋಗ ರಚಿಸಿ ಸರ್ಕಾರದ ಗಮನ ಸೆಳೆದು ಸಮುದಾಯಕ್ಕೆ ಸವಲತ್ತು ತಲುಪಿಸಲು ಶ್ರಮಿಸಬೇಕಿದೆ ಎಂದು ಮನವಿ ಸಲ್ಲಿಸಿದರು.
ಸಂಸದರಾದ ಪ್ರತಾಪ್ ಸಿಂಹ, ಮೂಡ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್, ಹೊಯ್ಸಳ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಕೆ.ಆರ್ ಸತ್ಯನಾರಾಯಣ್, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್, ನಗರಪಾಲಿಕೆ ಸದಸ್ಯ ಮಾವಿ. ರಾಂಪ್ರಸಾದ್, ಮೈಸೂರು ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಜಯಸಿಂಹ ಶ್ರೀಧರ್, ರಂಗನಾಥ್, ವಿಜಯ್ ಕುಮಾರ್, ಜಗದೀಶ್, ಪ್ರಶಾಂತ್, ಸುಚೀಂದ್ರ ಚಕ್ರಪಾಣಿ ಮುಂತಾದವರು ಇದ್ದರು .
ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…
ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…
ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ…
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…