ಜಿಲ್ಲೆಗಳು

‘ಸರ್ಕಾರದ ಸೌಲಭ್ಯಗಳು ಮನೆಯ ಬಾಗಿಲಿಗೆ’

ಕೇಂದ್ರ ಸರ್ಕಾರದ ಯೋಜನೆ ಅನುಷ್ಠಾನಕ್ಕೆ ಎನ್‌ಎಸ್‌ಎಸ್ ಬಳಕೆ: ತಹಸಿಲ್ದಾರ್ ರೂಪಾ

ಕೆ.ಆರ್.ಪೇಟೆ: ಸರ್ಕಾರಗಳ ಕಾರ್ಯ ನಿರ್ವಹಣೆಯ ಶೈಲಿಯು ಬದಲಾಗಿದ್ದು, ಜನರ ಮನೆಯ ಬಾಗಿಲಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ವ್ಯವಸ್ಥೆ ರೂಪಿಸಲಾಗಿದೆ. ಇಂತಹ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳನ್ನು ಬಳಸಿಕೊಳ್ಳುತ್ತಿದೆ ಎಂದು ತಹಸಿಲ್ದಾರ್ ಎಂ.ವಿ.ರೂಪಾ ಹೇಳಿದರು.

ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಹಳೆಅತ್ತಿಗುಪ್ಪೆ ಗ್ರಾಮದಲ್ಲಿ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆೋಂಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯವು ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗದಿದ್ದರೆ ಅಭಿವೃದ್ಧಿಯನ್ನು ಹೇಗೆ ತಾನೇ ಸಾಧಿಸಲು ಸಾಧ್ಯ ಎಂಬುದನ್ನು ಅರಿತ ಕೇಂದ್ರ ಸರ್ಕಾರವು, ಭಾರತವು ತನ್ನ ಸ್ವಾತಂತ್ರ್ತ್ಯ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ನೆನಪಿಗಾಗಿ ಅಮೃತ ಸಮುದಾಯ ಯೋಜನೆಯನ್ನು ರೂಪಿಸಿದೆ. ಸರ್ಕಾರಿ ಇಲಾಖೆಗಳು ಎಷ್ಟೇ ಪ್ರಾವಾಣಿಕವಾಗಿ ಕಾರ್ಯಕ್ರಮಗಳ ಅನುಷ್ಠಾನವನ್ನು ಮಾಡಿದರೂ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಸೌಲಭ್ಯಗಳು ತಲುಪಿರುವುದಿಲ್ಲ. ಅಂತಹ ಕುಟುಂಬಗಳನ್ನು ಸಂಪರ್ಕಿಸಿ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸಲು ಶಿಬಿರಾರ್ಥಿಗಳು ಗ್ರಾಮದ ಮನೆ ಮನೆಗಳ ಬಾಗಿಲಿಗೆ ಬರುತ್ತಿದ್ದು, ಇದರ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ರೂಪಾ ಮನವಿ ಮಾಡಿದರು.

ಕಂದಾಯ ಇಲಾಖೆಯು ಪ್ರತಿಯೊಂದು ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿಯನ್ನು ಹೊತ್ತಿದೆ. ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಆಧಾರ್ ಹೇಗೆ ಬೇಕಾಗುತ್ತದೋ ಹಾಗೆೆಯೇ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಫಲಾನುಭವಿಯಾಗಲು ಆರ್‌ಟಿಸಿ ಕಡ್ಡಾಯವಾಗಿದೆ. ತಾಲ್ಲೂಕಿನಲ್ಲಿ ಬಹುತೇಕ ಪೌತಿ ಖಾತೆಗಳದ್ದೇ ಸಮಸ್ಯೆಯಾಗಿದೆ. ಕಂದಾಯ ಇಲಾಖೆಯ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಈ ಶಿಬಿರವು ಮುಗಿಯುವುದರೊಳಗೆ ಇಲಾಖೆಯ ಉಪ ತಹಸಿಲ್ದಾರ್, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಇಲ್ಲಿಯೇ ಮೊಕ್ಕಾಂ ಹೂಡಲಿದ್ದಾರೆ. ಎಲ್ಲರೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸತೀಶ್ ಮಹಾತ್ಮ ಗಾಂಧಿ ಮತ್ತು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪ್ರಾಂಶುಪಾಲ ಡಾ. ಟಿ.ಎಂ.ದೇವರಾಜ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಶಿವಕುಮಾರ್, ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ.ಮಂಜುನಾಥ್, ಅಘಲಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಕಾತಿ, ಸಂತೆಬಾಚಹಳ್ಳಿ ಹೋಬಳಿ ಉಪ ತಹಸಿಲ್ದಾರ್ ಗೌರಮ್ಮ, ರಾಜಸ್ವ ನಿರೀಕ್ಷಕ ರಮೇಶ್, ಕಿಕ್ಕೇರಿ ಹೋಬಳಿ ಉಪ ತಹಸಿಲ್ದಾರ್ ಲಕ್ಷ್ಮೀಕಾಂತ್, ಗ್ರಾಮದ ಮುಖಂಡರು ಭಾಗವಹಿಸಿದ್ದರು.

 

 

 

andolana

Recent Posts

ಕಾರ್ಕಹಳ್ಳಿ ಬಸವೇಶ್ವರ ಜಾತ್ರೆ: ಇಂದು ಕೊಂಡೋತ್ಸವ

ಅಣ್ಣೂರು ಸತೀಶ್ ನಾಳೆ ಸಂಜೆ ವಿಜೃಂಭಣೆಯ ರಥೋತ್ಸವ,ಅನ್ನಸಂತರ್ಪಣೆ  ಭಾರತೀನಗರ: ಕಾರ್ಕಹಳ್ಳಿ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.೩ರ…

2 hours ago

‘ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಶಾಲೆಗಳಲ್ಲಿ ರಂಗಶಿಕ್ಷಣ ನೀಡಿ’

ಗಿರೀಶ್ ಹುಣಸೂರು ಕೆಪಿಎಸ್, ಪಿಎಂಶ್ರೀ ಶಾಲೆಗಳಲ್ಲಿ ರಂಗಶಿಕ್ಷಕರ ನೇಮಕಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು ಮೈಸೂರು: ಇಂದಿನ ಮಕ್ಕಳಲ್ಲಿ…

2 hours ago

1000 ಕೋಟಿ ರೂ. ಸಂಪನ್ಮೂಲ ಕ್ರೋಢೀಕರಣಕ್ಕೆ ಎಂಡಿಎ ಪ್ಲಾನ್!

ಕೆ.ಬಿ.ರಮೇಶನಾಯಕ ಮೈಸೂರು: ಹಲವು ಅವ್ಯವಹಾರಗಳಿಂದಾಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿ ಯಾಗಿದ್ದ ಹಿಂದಿನ ಮುಡಾ, ಎಂಡಿಎ ಆಗಿ ಪರಿವರ್ತನೆಯಾದ…

2 hours ago

ಮಾನವತೆಯ ಸಂದೇಶ ಸಾರಿದ ಯತೀಂದ್ರ

ಡಾ.ಎಸ್‌. ಕೃಷ್ಣಪ್ಪ ಕಿತ್ತೂರು  ಇಂದು ಕೈವಾರ ತಾತಯ್ಯ ಅವರ ಜಯಂತಿ ‘ಉತ್ತಮ ಕುಲವೆಂದು ಹೇಳುವ ಮಾತು ಯುಕ್ತವಲ್ಲಣ್ಣ’... ೧೮ನೇ ಶತಮಾ…

2 hours ago

ಪ್ರಮುಖ ತಂತ್ರಜ್ಞಾನ ಸ್ಟಾರ್ಟ್ ಅಪ್‌ಗಳ ಹೋರಾಟ

ವಿಶ್ವಪ್ರಸಾದ್ ಆಳ್ವ ಒಂದೆರಡು ವರ್ಷಗಳ ಹಿಂದೆ ದೇಶದ ಹಣಕಾಸು ಸಚಿವರು ಮೂಲ ತಂತ್ರಜ್ಞಾನ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್…

2 hours ago

ಇರಾನ್ ಸಂಘರ್ಷದ ಪೂರ್ವಾಪರ

ಪ್ರೊ.ಪ್ರೇಮ ಶೇಖರ ಒಂದೂವರೆ ತಿಂಗಳಿನಿಂದ ಜಗತ್ತು ಆತಂಕದಿಂದ ಎದುರು ನೋಡುತ್ತಿದ್ದಂತಹ ಯುದ್ಧ ಪಶ್ಚಿಮ ಏಷ್ಯಾದಲ್ಲಿ ಪ್ರಾರಂಭವಾಗಿದೆ. ಜನವರಿ ಮೊದಲ ಭಾಗದಲ್ಲಿ…

2 hours ago