ಮೈಸೂರು: ಪ್ರಕೃತಿ ಆಹಾರ ಬಳಗವು ಇನ್ನು ಮುಂದೆ ಪ್ರತಿ ವಾರಾಂತ್ಯದಲ್ಲಿ ಖಾದಿ ನೂಲನ್ನು ತೆಗೆಯುವ ಕಾರ್ಯಾಗಾರವನ್ನು ಪ್ರಾರಂಭಿಸುತ್ತಿದ್ದು, ನ.೫, ೬ರಂದು ‘ಬನ್ನಿ ನೂಲುವ!’ ಎಂಬ ವಾರಾಂತ್ಯದ ಚರಕ ಕಾರ್ಯಾಗಾರವನ್ನು ಆಯೋಜಿಸಿದೆ.
ಚಾಮರಾಜಪುರಂನ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿರುವ ಪ್ರಕೃತಿ ಫುಡ್‌ನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ೧೪೦೦ ರೂ. ಪ್ರವೇಶ ಶುಲ್ಕವಿದ್ದು, ಮೊದಲ ೧೫ ಜನರಿಗೆ ಮಾತ್ರ ಪ್ರವೇಶ ಇರಲಿದೆ. ಖಾದಿ ನೂಲನ್ನು ತೆಗೆಯುವುದು ಒಂದು ಕಲೆಯಾಗಿದೆ. ಪೆಟ್ಟಿಗೆ ಚರಕವನ್ನು ಬಳಸಿ ನೂಲುವುದನ್ನು ಕಲಿಸಿಕೊಡಲಾಗುವುದು. ಒಟ್ಟು ೮ ಗಂಟೆಗಳ ಕಾಲ (೨ ದಿನ ತಲಾ ೪ ಗಂಟೆಯ ಹಾಗೆ) ತರಬೇತಿ ನೀಡಲಾಗುವುದು. ಕೆ.ಜೆ.ಸಚ್ಚು, ಮತ್ತು ಅಭಿಲಾಷ್ ತರಬೇತಿ ನೀಡುವರು. ೧೦ ವರ್ಷ ಮೇಲ್ಪಟ್ಟವರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಎರಡು ದಿನವು ಊಟದ ವ್ಯವಸ್ಥೆ ಇರುತ್ತದೆ. ಕಾರ್ಯಾಗಾರದಲ್ಲಿ ಸುಸ್ಥಿರ ಬದಿಕಿನ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸಂವಾದ ಇರುತ್ತದೆ. ನೋಂದಣಿಗೆ ಮೊ.ಸಂ.೯೦೦೮೪೮೪೮೮೦ ಸಂಪರ್ಕಿಸಬಹುದು.
ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…
ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ…
ಬೆಂಗಳೂರು: ದೇಶಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‍ಐಆರ್) ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‍ಕುಮಾರ್ ವಜಾ ಮತ್ತು…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ಮತ್ತಷ್ಟು ಬಿಗಿಯಾಗುತ್ತಿವೆ.…
ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…
ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…