ಜಿಲ್ಲೆಗಳು

“ಮುಂದಿಲ್ಲ ಮೋದಿ-2024 ಅಭಿಯಾನಕ್ಕೆ ಮಾಜಿ ಶಾಸಕ ಎಂಕೆ.ಸೋಮಶೇಖರ್ ಚಾಲನೆ !

ಮೈಸೂರು :  “ಮುಂದಿಲ್ಲ ಮೋದಿ 2024″ಎಂಬ ಧ್ಯೇಯದೊಂದಿಗೆ ರಾಮಸ್ವಾಮಿ ವೃತ್ತದಲ್ಲಿ  ಹಮ್ಮಿಕೊಳ್ಳಲಾಗಿದ್ದ ಅಭಿಯಾನಕ್ಕೆ  ಮಾಜಿ ಶಾಸಕರಾದ ಎಂಕೆ.ಸೋಮಶೇಖರ್ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ನೆನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಮೈಸೂರಿನಿಂದಲೇ ಮತ್ತೊಮ್ಮೆ ಮೋದಿ-2024 ಎಂಬ ಗೋಡೆ ಬರಹಕ್ಕೆ ಚಾಲನೆ ನೀಡಲಾಯಿತು. ಈ ಮೂಲಕ ಮತ್ತೊಮ್ಮೆ ದೇಶವನ್ನು ಕೋಮು ಗಲಭೆಯ,ಆರ್ಥಿಕ ಸುಭದ್ರವಿಲ್ಲದ, ಬಡ ಮಧ್ಯಮ ಮತ್ತು ಎಲ್ಲಾ ವರ್ಗದ ವಿರೋಧಿ ನಾಯಕನನ್ನು ಬೆಂಬಲಿಸಲು ಅಭಿವೃದ್ಧಿ ಹೊರತಾಗಿ ರಾಮ ರಾಜಕೀಯ, ಧರ್ಮ ರಾಜಕೀಯ, ಭಾವನಾತ್ಮಕ ರಾಜಕೀಯದ ಮೂಲಕ ಆಡಳಿತಕ್ಕೇರುವ ಮತ್ತು ಏಕಾಧಿಪತಿ ಆಡಳಿತ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.
ಇಂತಹ ವ್ಯಕ್ತಿ ಮತ್ತೊಮ್ಮೆ ದೇಶದ ಅಗ್ರಮಾನ್ಯ ಪದವಿಯಾದ ಪ್ರಧಾನಿ ಹುದ್ದೆಗೆ ಏರಬಾರದು,ಹಿಟ್ಲರ್ ಆಡಳಿತ ಇಲ್ಲಿಗೆ ಕೊನೆಯಾಗಲಿ ಎಂಬ ಗುರಿಯೊಂದಿಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ದೇಶದ ಪ್ರಧಾನಿ ಸರ್ವಾಧಿಕಾರಿ ಹಿಟ್ಲರ್ ಮನಸ್ಥಿತಿಯನ್ನು ಹೊಂದಿರುವಂತವರು.ಕಳೆದ ಹತ್ತು ವರ್ಷಗಳಿಂದ ಒಂದು ಮೀಡಿಯಾದ ಜೊತೆ ಆಗಲಿ ಮಾಧ್ಯಮದ ಜೊತೆಯಾಗಲಿ ಅಥವಾ ಸಾರ್ವಜನಿಕ ಸಂವಾದದಲ್ಲಿ ಭಾಗವಹಿಸಿಲ್ಲ.
ಕೇವಲ ಏಕಮುಖ ಭಾಷಣದಿಂದಲೇ ಕಾಲ ಕಳೆಯುತ್ತಿದ್ದಾರೆ. ದೇಶದಲ್ಲಿ ಹಸಿವು ಬಡತನ ನಿರುದ್ಯೋಗ ತಾಂಡವಡುತ್ತಿದೆ.ಹಸಿವಿನ ಸೂಚ್ಯಂಕದಲ್ಲಿ ಬಾಂಗ್ಲಾದೇಶಕ್ಕಿಂತಲೂ ಕಡೆಯಾಗಿದೆ.
ಈ ಹಸಿವನ್ನು ತಾಳಲಾರದೆ ನಮ್ಮ ದೇಶದ ಬಡಜನ 20,000 ಕಾರ್ಮಿಕರು ಇಲ್ಲಿ ಹಸಿವಿನಿಂದ ಸಾಯುವ ಬದಲು ಇಸ್ರೇಲಿನ ಯುದ್ಧ ಭೂಮಿಯಲ್ಲಿ ಸತ್ತರೂ ಸಾಯೋಣ ಎಂದು ಕೆಲಸವನ್ನು ಹರಸಿ 20,000 ಜನ ಭಾರತದಿಂದ ಇಸ್ರೇಲಿಗೆ ಹೊರಟಿದ್ದಾರೆ.
ಇದನ್ನು ನೋಡಿದಾಗ ದೇಶದ ಪರಿಸ್ಥಿತಿ ಏನೆಂದು ಎಲ್ಲರಿಗೂ ಅರ್ಥವಾಗುತ್ತದೆ.ಇವರು ಮೋದಿ ಮೋದಿ ಎಂದು ಭ್ರಮೆಯನ್ನ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.ಆದರೆ ನೈಜ ಪರಿಸ್ಥಿತಿಯೇ ಬೇರೆಯಾಗಿದೆ.
ಚುನಾವಣೆ ಎಷ್ಟು ಬೇಗ ಬರುತ್ತದೆಯೋ ಮೋದಿಯವರನ್ನು ಅಧಿಕಾರದಿಂದ  ಕಿತ್ತೊಗೆಯಲು ಚುನಾವಣೆಗಾಗಿ ಜನ ತುದಿಗಾಲದಲ್ಲಿ ನಿಂತಿದ್ದಾರೆ.ಒಬ್ಬ ಪ್ರಧಾನಿಯಾದವರನ್ನ ಗೋಡೆಯಲ್ಲಿ ಬರೆದು ಜನರಿಗೆ ತೋರಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದು ಇದು ಬಿಜೆಪಿಗೆ ಬಂದಿರುವ ದುಸ್ಥಿತಿಯನ್ನು ಸೂಚಿಸುತ್ತದೆ.
ಮೋದಿ ಮತ್ತೊಮ್ಮೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಹೊರತು ಈ ದೇಶದ ಜನರು ಹೇಳುತ್ತಿಲ್ಲ. ಆಗಾಗೀ ನಾವು ಜನರ ಭಾವನೆಯಾದ “ಮುಂದಿಲ್ಲ ಮೋದಿ 2024″ಅಭಿಯಾನವನ್ನೂ ಮೈಸೂರಿನಿಂದಲೇ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ನಂತರ ಕೆಪಿಸಿಸಿ ವಕ್ತಾರರಾದ ಹೆಚ್.ಎ ವೆಂಕಟೇಶ್ ರವರು ಮಾತನಾಡಿ ಸನ್ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಆಟ ನಡೆಯದು.ಸನ್ಮಾನ್ಯ ಯಡಿಯೂರಪ್ಪನವರು ಈ ನಾಡಿನ ಮುಖ್ಯಮಂತ್ರಿಗಳಾಗಿದ್ದವರು ಅಂಥವರು ಇಂತಹ ಅಭಿಯಾನ ಮಾಡುತ್ತಿರುವುದು ನಿಜಕ್ಕೂ ಅತ್ಯಂತ  ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿದರು.
ಈ ದೇಶದ ಈ ರಾಜ್ಯದ ಜನರ ಮನಸ್ಸಿನಲ್ಲಿ ಮೋದಿಯವರು ಅಳಿಸಿ ಹೋಗಿದ್ದಾರೆ.ಹಾಗಾಗಿ ಬಿಜೆಪಿಯವರು ಮೋದಿಯವರ ಹೆಸರನ್ನು ಗೋಡೆ ಮೇಲೆ ಬರೆಯುವ ಮೂಲಕ ಮೋದಿಯವರನ್ನು ನೆನಪಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇದು ಮೋದಿ ಅವರಿಗೆ ಬಂದಿರುವ ದು‌ಸ್ಥಿತಿಯನ್ನು ಸೂಚಿಸುತ್ತದೆ ಎಂದು ವ್ಯಂಗ್ಯವಾಡಿದರು.‌
ಈ ವೇಳೆ ಕೆಪಿಸಿಸಿ ವಕ್ತಾರರಾದ ಎಚ್.ಎ.ವೆಂಕಟೇಶ್,ಬ್ಲಾಕ್ ಅಧ್ಯಕ್ಷರುಗಳಾದ ಜಿ.ಸೋಮಶೇಖರ್,ಶ್ರೀಧರ್,ಮಾಜಿ ಮಹಾಪೌರರುಗಳಾದ ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಪಾಲಿಕೆ ಸದಸ್ಯರಾದ ಜೆ.ಗೋಪಿ,ಜೋಗಿ ಮಹೇಶ್,ಮಂಜು, ವಿಜಯ್ ಕುಮಾರ್, ರವಿಶಂಕರ್, ಪರಶಿವಮೂರ್ತಿ, ಗುಣಶೇಖರ್, ವಿಶ್ವ ನಾಥ್, ರಮೇಶ್ ರಾಮಪ್ಪ,ಮಹ್ಮದ್ ಫಾರೂಖ್,ಮಧುರಾಜ್,ಇಂದಿರಾ,ಎನ್ ಎಸ್ ಯು ಐ ಅಧ್ಯಕ್ಷ ಮನೋಜ್,ವಿನಯ್, ಕುಮಾರ್, ಲೋಕೇಶ್ ಕುಮಾರ್, ನಾಗರತ್ನ ಮಂಜುನಾಥ್, ಉತ್ತನಹಳ್ಳಿ ಶಿವಣ್ಣ ಮತ್ತಿತರು ಉಪಸ್ಥಿತರಿದ್ದರು.
andolanait

Recent Posts

ಶಾರುಖ್‌ ಖಾನ್‌ ಪುತ್ರನಿಂದ ದುರ್ವತನೆ ಪ್ರಕರಣ: ಡಿಜಿ & ಡಿಜಿಪಿಗೆ ದೂರು ಸಲ್ಲಿಕೆ

ಬೆಂಗಳೂರು: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬೆಂಗಳೂರಿನ ಪಬ್‌ನಲ್ಲಿ ಮಿಡಲ್‌ ಫಿಂಗಲ್‌ ತೋರಿಸಿ ದುರ್ವತನೆ ಮೆರೆದಿದ್ದು,…

16 mins ago

1000ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು: ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಪ್ರಯಾಣಿಕರು

ನವದೆಹಲಿ: ಶನಿವಾರ ಐದನೇ ದಿನವೂ ಇಂಡಿಗೋ ವಿಮಾನ ಹಾರಾಟ ಅಡಚಣೆಗಳು ಮುಂದುವರೆದಿದ್ದು, ದೇಶಾದ್ಯಂತ ಹಲವಾರು ವಿಮಾನಗಳು ರದ್ದಾಗಿವೆ. ಕಳೆದ ನಾಲ್ಕು…

37 mins ago

9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಕಾಮುಕನನ್ನು ಹಿಡಿದು ಥಳಿಸಿದ ಗ್ರಾಮಸ್ಥರು

ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…

1 hour ago

ಓದುಗರ ಪತ್ರ: ಕೆ.ಕೆ.ಮಹಮದ್ ಅವರ ಹೇಳಿಕೆ ಪ್ರಬುದ್ಧ ನಡೆ

ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…

2 hours ago

ಓದುಗರ ಪತ್ರ: ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ನಾಗರಿಕ ಸ್ನೇಹಿ

ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…

2 hours ago

ಓದುಗರ ಪತ್ರ: ದ್ವೇಷ ಭಾಷಣಕ್ಕೆ  ಕಾನೂನು ಕಡಿವಾಣ ಸಾಗತಾರ್ಹ

ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…

2 hours ago