ಜಿಲ್ಲೆಗಳು

ಮೈಸೂರು : ಚಿರತೆ ಕಾರ್ಯಾಚರಣೆಯ ಕಾರ್ಯತಂತ್ರ ಬದಲಾಯಿಸಿದ ಅರಣ್ಯ ಇಲಾಖೆ

ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ  ಯುವತಿಯನ್ನು ಬಲಿ ಪಡೆದ ಚಿರತೆ ಪತ್ತೆಗೆ ಐದು ದಿನಗಳ ಹಿಂದಷ್ಟೇ ಆರಂಭಿಸಿದ ವಿಶೇಷ ಕಾರ್ಯಾಚರಣೆ ಯಾವುದೇ ಫಲ ನೀಡದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಚಿರತೆ ಪತ್ತೆ ಕಾರ್ಯತಂತ್ರ ಬದಲಿಸಿದ್ದಾರೆ. ಅರಣ್ಯದ ಹೆಚ್ಚುವರಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅವರು ಬುಧವಾರ ಮಧ್ಯಾಹ್ನ ಕಾರ್ಯಾಚರಣೆಗಾಗಿ ಉತ್ತಮ ಗುಣಮಟ್ಟದ ಥರ್ಮಲ್ ಕ್ಯಾಮೆರಾ ಮತ್ತು ಡ್ರೋನ್‌ನೊಂದಿಗೆ ಕಾರ್ಯಾಚರಣೆ ಸ್ಥಳಕ್ಕೆ ಆಗಮಿಸಿದರು. ಹೊಸ ಡ್ರೋನ್​ನೊಂದಿಗೆ ವಿಶೇಷ ತಂಡಗಳು ಸೋಮವಾರ ಬೆಳಿಗ್ಗೆ ಚಿರತೆ ಒಂದು ಬಾರಿ ಶನಿವಾರ ರಾತ್ರಿ ಒಂದು ಬಾರಿ ಕಾಣಿಸಿಕೊಂಡಿದ್ದು, ಚಿರತೆ ಮಲ ಸಹ ಕಂಡುಬಂದಿದೆ. ಹೀಗಾಗಿ ಒಟ್ಟು ಎರಡು ಬಾರಿ ಚಿರತೆ ಕಾಣಿಸಿಕೊಂಡ ಮಲ್ಲಿಕಾರ್ಜುನಸ್ವಾಮಿ ಬೆಟ್ಟದ ಸುತ್ತಲೂ ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ನಿರ್ಧರಿಸಿವೆ ಎಂದು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆ ಈ ರೀತಿಯ ಕ್ಯಾಮೆರಾವನ್ನು ಪ್ರಾಯೋಗಿಕವಾಗಿ ಬಳಸುತ್ತಿದೆ. ಈ ಕಾರ್ಯಾಚರಣೆ ಯಶಸ್ವಿಯಾದರೆ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಇರುವ ಇತರೆ ಪ್ರದೇಶಗಳಲ್ಲಿ ಸಂಘರ್ಷ ನಿಭಾಯಿಸಲು ಬಳಸಲಾಗುತ್ತದೆ ಎಂದು ಕುಮಾರ್ ಪುಷ್ಕರ್ ಅವರು ಡೆಕ್ಕನ್​ ಹೆರಾಲ್ಡ್​ಗೆ ಮಾಹಿತಿ ನೀಡಿದ್ದಾರೆ.

“ನಾವು ಈಗಾಗಲೇ ಹೊಂದಿರುವ ಸಾಮಾನ್ಯ ಕ್ಯಾಮೆರಾ ಒಳಗೊಂಡ ಡ್ರೋನ್​ಗಳು ಬೆಳಕಿನ ಸಂಕೇತಗಳನ್ನು ಸ್ವೀಕರಿಸಿ ಅದರ ಆಧಾರದ ಮೇಲೆ ಅದು ಚಿತ್ರಗಳನ್ನು ರಚಿಸುತ್ತದೆ. ಆದರೆ ಥರ್ಮಲ್ ಕ್ಯಾಮೆರಾದ ವಿಷಯದಲ್ಲಿ ಅದು ಜೀವಂತ ವಸ್ತುವಿನ ಚಲನೆ ಇದ್ದಾಗಲೆಲ್ಲಾ ಅದು ಪ್ರಾಣಿಯಾಗಿರಲಿ ಅಥವಾ ಮನುಷ್ಯನಾಗಿರಲಿ, ತಾಪಮಾನದಲ್ಲಿನ ವ್ಯತ್ಯಾಸವನ್ನು ಗುರುತಿಸುತ್ತದೆ. ಅದರ ಆಧಾರದ ಮೇಲೆ ಕ್ಯಾಮೆರಾಗಳು ಅವುಗಳ ಆಕಾರವನ್ನು ಸರಿಯಾಗಿ ತೆಗೆದುಕೊಳ್ಳುತ್ತದೆ. ಇದನ್ನು ಪೊಲೀಸರು ಮತ್ತು ರಕ್ಷಣಾ ಪಡೆಗಳು ಕಣ್ಗಾವಲು ಉದ್ದೇಶಗಳಿಗಾಗಿ ಬಳಸುತ್ತವೆ. ಚಿರತೆ ಪತ್ತೆಗೆ ಇದೇ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಯೋಚಿಸಿದ್ದೇವೆ. ಇದು ಪರಿಣಾಮಕಾರಿಯಾದರೆ ಮಾನವ-ಪ್ರಾಣಿ ಸಂಘರ್ಷವನ್ನು ನಿಭಾಯಿಸಲು ನಾವು ಅದನ್ನು ಬಳಸಬಹುದು. ಶುಕ್ರವಾರದವರೆಗೆ ಇದನ್ನು ಇಲ್ಲಿ ಬಳಸಲಾಗುತ್ತದೆ” ಎಂದರು.

andolana

Recent Posts

ಓದುಗರ ಪತ್ರ; ವಯೋಮಿತಿ ಸಡಿಲಿಕೆ ಸ್ವಾಗತಾರ್ಹ

ರಾಜ್ಯ ಸರ್ಕಾರ ಕೆಲ ತಿಂಗಳುಗಳ ಹಿಂದೆ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷಗಳ ವಯೋಮಿತಿ ನಿಗದಿ ಮಾಡಿದ ಬಗ್ಗೆ ಕೈಗೊಂಡ…

2 hours ago

ಓದುಗರ ಪತ್ರ: ಸರ್ಕಾರದ ನಡೆ ಖಂಡನೀಯ

ಹೆಚ್.ಡಿ.ಕೋಟೆ ತಾಲ್ಲೂಕಿನ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಹಂಪಾಪುರ ಮತ್ತು ಜಿನ್ನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಹೊರಟಿರುವ ಸರ್ಕಾರದ…

2 hours ago

ಓದುಗರ ಪತ್ರ: ಐಪಿಎಲ್ ಬೇಕಿತ್ತೇ?

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ೨೭ ನೇದಿನಕ್ಕೆ ಕಾಲಿಟ್ಟಿದೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅಮೆರಿಕ ತನ್ನ…

2 hours ago

ಅಭಿವೃದ್ಧಿ ಮತ್ತು ಸಂರಕ್ಷಣೆಯ ನಡುವೆ ಸಮತೋಲನ ಅವಶ್ಯ

ಬಿಆರ್‌ಟಿ ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲೊಂದು ಬಿಳಿಗಿರಿ ರಂಗನ ಬೆಟ್ಟ (ಬಿಆರ್‌ಟಿ) ಅರಣ್ಯವು ಕರ್ನಾಟಕದ ಪ್ರಮುಖ ಜೀವವೈವಿಧ್ಯ ಪ್ರದೇಶಗಳಲ್ಲಿ…

2 hours ago

ಮನುಷ್ಯನ ಮುಖವಾಡ ಕಳಚುವ ನಾಟಕ ‘ಪಾರ್ಟಿ’

ಮಹೇಶ ಎಲಕುಂಚವಾರ್ ಅವರ ಪ್ರಸಿದ್ಧ ಮರಾಠಿ ನಾಟಕವನ್ನು ರಂಗಕರ್ಮಿ ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿದ್ದಾರೆ ಮರಾಠಿಯ ಮಹೇಶ ಎಲಕುಂಚವಾರ ಅವರ…

2 hours ago

ತಣ್ಣಗೆ ಕಾಣುವ ಬಣ್ಣದ ಮಡಕೆ: ಆರೋಗ್ಯಕ್ಕೆ ಹಿತವೆ? ಅಹಿತವೇ?

‘ಆಂದೋಲನ’ ತಂಡದಿಂದ ರಿಯಾಲಿಟಿ ಚೆಕ್ ಮೈಸೂರು: ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಬೇಸಿಗೆಯ ತಾಪ ಏರುತ್ತಿದ್ದಂತೆ, ದಾಹ ತಣಿಸಿಕೊಳ್ಳಲು ಜನರು…

2 hours ago