ಮೈಸೂರು ವಿಭಾಗದ ಸ್ವಚ್ಛ ಭಾರತ್ ಮಿಷನ್ ಕಾರ್ಯಾಗಾರ, ಪ್ರಗತಿ ಪರಿಶೀಲನಾ ಸಭೆ
ಮೈಸೂರು: ಗ್ರಾಮೀಣ ಪ್ರದೇಶದಲ್ಲಿ ಬಯಲು ಮಲ-ಮೂತ್ರ ವಿಸರ್ಜನೆ ತಪ್ಪಿಸುವ ಜತೆಗೆ ಘನತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರಾಮಸಭೆಗಳಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ), ಜಲಜೀವನ್ ಮಿಷನ್ ಯೋಜನೆಯ ಮೈಸೂರು ವಿಭಾಗ ಮಟ್ಟದ ಕಾರ್ಯಾಗಾರ ಹಾಗೂ ಪ್ರಗತಿಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸ್ವಚ್ಛ ಭಾರತ್ ಅಭಿಯಾನ ಶುರುವಾದ ಮೇಲೆ ನಾಲ್ಕು ವರ್ಷಗಳಲ್ಲಿ ವಿವಿಧ ಹಂತದ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸುಮಾರು ೪೫ ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ನಂತರದಲ್ಲಿ ಶೌಚಾಲಯ ರಹಿತ ಕುಟುಂಬಗಳನ್ನು ಗುರುತಿಸಿ ಒಂದು ಲಕ್ಷ ಜನರಿಗೆ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಈಗ ಜನಸಂಖ್ಯೆ ಹೆಚ್ಚಳ, ಕುಟುಂಬ ವಿಭಜನೆ, ಹೊಸ ಮನೆಗಳ ನಿರ್ಮಾಣ ಆಗುತ್ತಿರುವುದರಿಂದ ಮತ್ತೊಮ್ಮೆ ಸಮೀಕ್ಷೆ ಕಾರ್ಯ ನಡೆಸಿ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಹೇಳಿದರು.
೨೦೧೯ರ ಮೊದಲು ಶೌಚಾಲಯದ ಕಡೆಗೆ ಗಮನಹರಿಸಿದ್ದರಿಂದ ಈಗ ಕರ್ನಾಟಕ ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿದೆ. ಈಗ ಕಸ ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿರುವ ಕಾರಣ ಅದನ್ನು ಎದುರಿಸಲು ಗ್ರಾಪಂ ಅಧ್ಯಕ್ಷರು, ಪಿಡಿಒಗಳಿಗೆ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಮಾರ್ಗದರ್ಶನ ನೀಡಬೇಕು. ಗ್ರಾಮಸಭೆಗಳಲ್ಲಿ ಕ್ರಿಯಾಯೋಜನೆಗಳನ್ನು ಮಂಡಿಸುವ ಮೊದಲು ಸ್ವಚ್ಛತೆಯ ವಿಚಾರವನ್ನು ಪ್ರಸ್ತಾಪಿಸಿ ವ್ಯಾಪಕ ಚರ್ಚೆ ಆಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಲವಾರು ವರ್ಷಗಳಿಂದ ನಿರ್ಮಿಸಿರುವ ಗುಂಡಿಗಳು ವೈಜ್ಞಾನಿಕವಾಗಿ ಇಲ್ಲ. ಹೊಸದಾಗಿ ಕಟ್ಟುವ ಬಗ್ಗೆ ಇಲಾಖೆಯು ನೀಡಿರುವ ಮಾರ್ಗಗಳನ್ನು ಅನುಸರಿಸಬೇಕು. ಮಲದ ಗುಂಡಿ ತುಂಬಿದಾಗ ಅದನ್ನು ಖಾಲಿ ಮಾಡುವಾಗ ಅನುಸರಿಸಬೇಕಾದ ಕ್ರಮಗಳು ಮುಖ್ಯವಾಗಿದೆ. ಜೆಟ್ಟಿಂಗ್ ಮೆಷಿನ್, ಸಕ್ಕಿಂಗ್ ಮೆಷಿನ್‌ಗಳಲ್ಲಿ ಸೆಫ್ಟಿಕ್‌ಫಿಟ್‌ಗಳನ್ನು ಖಾಲಿ ಮಾಡಿದ ಮೇಲೆ ಅದನ್ನು ಇಂಗುವಂತೆ ಮಾಡಬೇಕು. ಆದರೆ, ಹಳ್ಳಿಗಳಲ್ಲಿ ಕೆರೆ, ನಾಲೆ ಮೊದಲಾದ ಕಡೆಗಳಲ್ಲಿ ಸುರಿದು ಬರಲಾಗುತ್ತಿದೆ. ಇದನ್ನು ಕೂಡಲೇ ತಪ್ಪಿಸಬೇಕು ಎಂದರು. ಹಳ್ಳಿಗಳಲ್ಲಿ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲು ಸಣ್ಣ ಘಟಕಗಳನ್ನು ತೆರೆಯಬೇಕು. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಗ್ರಾಪಂಗೆ ಹೆಚ್ಚಿನ ಅವಕಾಶ ನೀಡಿರುವುದರಿಂದ ಸಮುದಾಯದ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ಹೇಳಿದರು.
ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ಕೆ.ಎಂ.ಗಾಯತ್ರಿ, ಉಪ ಕಾರ್ಯದರ್ಶಿಗಳು, ತಾಪಂ ಇಒಗಳು ಉಪಸ್ಥಿತರಿದ್ದರು.
ಒಂದು ಹಳ್ಳಿಯಲ್ಲಿ ಎಷ್ಟು ಶೌಚಾಲಯವಿದೆ, ಮನೆ ಮನೆಯಿಂದ ಕಸ ಸಂಗ್ರಹಿಸಲಾಗುತ್ತಿದೆಯೇ? ಬಯಲು ಮಲವಿಸರ್ಜನೆ ಇದೆಯೇ? ಸ್ವಚ್ಛತೆಗೆ ಕೊಟ್ಟಿರುವ ವಾಹನ ಬಳಕೆ ಆಗುತ್ತಿದೆಯೇ ಅಥವಾ ತುಕ್ಕು ಹಿಡಿಯುತ್ತಿದೆಯೇ ಎಂಬುದರ ಮಾಹಿತಿ ಗೊತ್ತಿರುತ್ತದೆ. ಸ್ವಂತ ಶೌಚಾಲಯ ಇದ್ದರೂ ಬಳಸದೆ ಬಯಲಿಗೆ ಹೋಗುವವರ ನಡವಳಿಕೆಯನ್ನು ಬದಲಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಗ್ರಾಪಂ ಸಭೆಗಳಲ್ಲಿ ವಿಸ್ತೃತ ಚರ್ಚೆಯಾಗುವಂತೆ ನೋಡಿಕೊಳ್ಳುವುದು ಅನಿವಾರ್ಯ.
–ಎಲ್.ಕೆ.ಅತೀಕ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ ಅಪರ ಮುಖ್ಯಕಾರ್ಯದರ್ಶಿ
ರಾಜೇಶ್ ಬೆಂಡರವಾಡಿ ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿ ಗ್ರಾಮದ ಬಳಿ ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮಂಗಳವಾರ ರಾತ್ರಿ ಮುಖಾಮುಖಿ…
ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ದಿ.ಬಿ.ರಾಚಯ್ಯ ಅವರು ಸಚಿವರಾಗಿದ್ದಾಗ ಹರದನಹಳ್ಳಿ ಡಿಸ್ಟ್ರಿಕ್ಟ್ ಫಾರೆಸ್ಟ್ ಸರ್ವೆ ನಂ.೩ರಲ್ಲಿ…
ಮೈಸೂರಿನ ರೈಲು ನಿಲ್ದಾಣ ಸೇರಿದಂತೆ, ರಾಜ್ಯದ ಯಾವುದೇ ರೈಲು ನಿಲ್ದಾಣ ಮತ್ತು ರೈಲು ಗಾಡಿಗಳಲ್ಲಿ ಕುಡಿಯುವ ನೀರಿನ ಅರ್ಧ ಲೀಟರ್…
ಮೈಸೂರು ಮಹಾ ನಗರ ಪಾಲಿಕೆ ಚುನಾಯಿತ ಸದಸ್ಯರ ಅವಧಿ ಮುಗಿದು ಎರಡು ವರ್ಷಗಳೆ ಕಳೆದಿದೆ. ಆದರೆ ಸರ್ಕಾರ ಚುನಾವಣೆ ನಡೆಸಲು ಮುಂದಾಗುತ್ತಿಲ್ಲ.…
ಮೈಸೂರಿನ ಶಿವರಾಮ್ ಪೇಟೆ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರ ಹಾಗೂ ರಾಜ್ ಕಮಲ್ ಥಿಯೇಟರ್ ನಡುವೆ ಬರುವ ವೃತ್ತದಲ್ಲಿ ದಿನನಿತ್ಯ…
ಪಂಜುಗಂಗೊಳ್ಳಿ ಊಟವಿಲ್ಲದೆ ಪರದಾಡಿದ ಘಟನೆಯೇ ನಿರಂತರ ದಾಸೋಹಕ್ಕೆ ಪ್ರೇರಣೆ ಇತ್ತೀಚಿನ ದಿನಗಳಲ್ಲಿ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಉಚಿತ…