ಮೈಸೂರು: ಹುಡಾ ತಿನ್ನುತ್ತಿರುವ ಕಾಳಿಂಗ ಸರ್ಪ, ಬೇಟೆಯಾಡಲು ಹೊಂಚು ಹಾಕುತ್ತಿರುವ ವ್ಯಾಘ್ರ, ಜಿಂಕೆಗಳ ಗುಂಪಿನಲ್ಲಿ ರಾಜ ಗಾಂಭೀರ್ಯದಲ್ಲಿ ಸಾಗುತ್ತಿರುವ ಗಜರಾಜ, ತನ್ನ ಮರಿಗೆ ಗುಟುಕು ನೀಡುತ್ತಿರುವ ತಾಯಿ…
ಇದು ವನ್ಯಮೃಗಗಳ ದಿನನಿತ್ಯದ ಜೀವನ ಶೈಲಿಯಾದರೂ ಛಾಯಾಚಿತ್ರಗಾರ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ದೃಶ್ಯಗಳ ಒಂದು ತುಣುಕು.
ನಗರದ ಖಾಸಗಿ ಹೋಟೆಲ್‌ನಲ್ಲಿ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನದ ಲ್ಲಿ ಬಂಡೀಪುರ, ನಾಗರಹೊಳೆ, ಮಧ್ಯಪ್ರದೇಶ, ರಾಜಸ್ಥಾನದ ರಾಯ್ ತಂಬೂರ್, ಮಧುಗಿರಿ, ಹಿಮಾಚಲ ಪ್ರದೇಶ ತಡೋಬಾ, ಪಿಂಕ್ ಟ್ರೈಗರ್ ರಿಸರ್ವ್ ಹಾಗೂ ತಮಿಳುನಾಡಿನ ಮಧು ಮಲೈ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ತೆಗೆದಿರುವ ಹುಲಿ, ಚಿರತೆ, ಆನೆ, ಕಾಡು ನಾಯಿ, ರಣ ಹದ್ದುಗಳ ಚಿತ್ರಗಳನ್ನು ವನ್ಯಜೀವಿ ಪ್ರಿಯರು ತದೇಕ ಚಿತ್ತದಿಂದ ವೀಕ್ಷಿಸಿ ವ್ಹಾವ್ ಎಂದು ಹುಬ್ಬೇರಿಸಿದರು.
ಸುಮಾರು ೧೦೯ ಮಂದಿಯ ೩೫೦ ಛಾಯಾಚಿತ್ರಗಳು ಪ್ರದರ್ಶನಗೊಂಡಿದ್ದವು.
ಬೆಂಗಳೂರಿನ ಎ.ಪಿ.ಸುರೇಶ್ ರಾವ್ ಸೆರೆ ಹಿಡಿದಿರುವ ‘ವಾಮನ್ ಹಾಕ್ ತಬು ಪಕ್ಷಿಗೆ ಎಲ್ಲೋ ಬಿಡ್ ಬ್ಯಾಬ್ಲರ್ ಪಕ್ಷಿ ಆಹಾರ ತಿನ್ನಿಸು ತ್ತಿರುವ ಚಿತ್ರಕ್ಕೆ ಪ್ರಥಮ ಬಹುಮಾನ ದೊರೆಯಿತು. ಮೈಸೂರಿನ ವಿ.ಶೇಷಾದ್ರಿ ಅವರ ‘ಯೂರೇಷಿನ್ ಈಗಲ್ ಹೌಲ್’ ಗರಿ ಬಿಚ್ಚಿ ಹಾರುವ ಚಿತ್ರಕ್ಕೆ ದ್ವಿತೀಯ ಬಹುಮಾನ, ‘ಕಾಡು ಹಸು’ ಒಂದು ಕಣ್ಣನ್ನು ಕೆಕ್ಕರಿಸುವ ನೋಡುವ ದೃಶ್ಯಕ್ಕೆ ತೃತೀಯ ಸ್ಥಾನ ಲಭಿಸಿತು. ಪ್ರಥಮ ಸ್ಥಾನಕ್ಕೆ ೫ ಸಾವಿರ ರೂ., ದ್ವಿತೀಯ ಸ್ಥಾನಕ್ಕೆ ೩ ಸಾವಿರ ರೂ. ಮತ್ತು ತೃತೀಯ ಸ್ಥಾನಕ್ಕೆ ೧ ಸಾವಿರ ರೂ. ನಗದು ಮತ್ತು ಪರಿತೋಷಕ ನೀಡಲಾಯಿತು.
ವನ್ಯಜೀವಿ ಛಾಯಾಚಿತ್ರ ಪ್ರದರ್ಶನಕ್ಕೆ ಗೋಪಾಲಗೌಡ ಶಾಂತವೇರಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಸಂತೃಪ್ತ್ ಚಾಲನೆ ನೀಡಿದರು. ಉರಗ ತಜ್ಞ ಸ್ನೇಕ್ ಶ್ಯಾಮ್, ಉರಗ ಸಂರಕ್ಷಕ ಬಿ.ಶಿವಕುಮಾರ್, ಪ್ರೀತಿ ಗ್ರೂಪ್ಸ್‌ನ ನಿರ್ದೇಶಕ ಪ್ರಜ್ವಲ್ ರಾಜಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…