ಜಿಲ್ಲೆಗಳು

ಚಿತ್ರನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ 89ನೇ ಜನ್ಮದಿನೋತ್ಸವ ಆಚರಣೆ

ಮೈಸೂರು : ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಆರ್ ಪುಟ್ಟಣ್ಣ ಕಣಗಾಲ್ ರವರ 89ನೇ ಜನ್ಮದಿನೋತ್ಸವದ ಅಂಗವಾಗಿ ಇಂದು ನಗರದ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಯರ ರಾಮಚಂದ್ರ ರಾವ್ ಉದ್ಯಾನವನದಲ್ಲಿ  ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಪುಟ್ಟಣ್ಣ ಕಣಗಾಲ್ ಅಭಿಮಾನಿ ಬಳಗ ವತಿಯಿಂದ ಚಿತ್ರ ಬ್ರಹ್ಮನ ನೆನಪು ಕಾರ್ಯಕ್ರಮವನ್ನುಆಯೋಜನೆ ಮಾಡಲಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ರವರು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಪೌರಾಣಿಕ ಮತ್ತು ಧಾರ್ಮಿಕ ಕತೆಗಳ ಆಧಾರಿತ ಚಿತ್ರಗಳನ್ನ ನೋಡುತ್ತಿದ್ದ ಪ್ರೇಕ್ಷಕರನ್ನ ಸಾಮಾಜಿಕ ಚಿತ್ರಮಂದಿರಗಳ ಬಳಿ ಸಾಲುಗಟ್ಟಿ ಟಿಕೆಟ್ ಪಡೆಯಲು ನಿಲ್ಲುವಂತೆ ಮಾಡಿದವರೇ ಪುಟ್ಟಣ್ಣ ಕಣಗಾಲ್ ರವರು, ಅಂದು ಬಿ.ಆರ್ ಪಂತಲು ಅವರ ಬಳಿ ಮೆಕ್ಯಾನಿಕ್ ಕಮ್ ಡೈರೆಕ್ಟರ್ ಆಗಿ ಕೆಲಸಕ್ಕೆ ಸೇರಿ ನಂತರ ಡೈಲಾಗ್ ಡೆಲಿವೆರಿ ಸಹನಿರ್ದೇಶಕನಾಗಿ ಮುಂದುವರೆದು ಇಡೀ ದೇಶವೇ ಚಪ್ಪಾಳೆ ಹೊಡೆಯುವ ಹಾಗೇ ಮಾಡಿ ಅತ್ಯುತ್ತಮ ಚಿತ್ರನಿರ್ದೇಶಕರಾಗಿ ಬೆಳೆದು ನಿಂತರು, ಕಣಗಾಲ್ ಪ್ರಭಾಕರ್ ಶಾಸ್ತ್ರಿ ಮತ್ತು ಪುಟ್ಟಣ್ಣ ಕಣಗಾಲ್ ಎಂದರೆ ಡಾ. ರಾಜಕುಮರ್ ರವರಿಗೆ ಎಲ್ಲಿಲ್ಲದ ಪ್ರೀತಿ ಗುರುಗಳ ಸ್ಥಾನದಲ್ಲಿ ಭಕ್ತಿಯಿಂದ ಕಾಣುತ್ತಿದ್ದರು, ಪುಟ್ಟಣ್ಣ ನವರ ಗರಡಿಯಲ್ಲಿ ಬೆಳೆದ ಅನೇಕರು ಕಿಂಗ್ ಆಗಿ ಚಿತ್ರರಂಗದಲ್ಲಿ ಮುನ್ನಡೆದರು ಆದರೆ ಕಿಂಗ್ ಮೇಕರ್ ಆದ ಪುಟ್ಟನವರನ್ನ ಇಂದಿಗೆ ಮರೆತಿದ್ದಾರೆ, ಕೇವಲ ಮೈಕ್ ನಲ್ಲಿ ಪುಟ್ಟಣ್ಣ ಬೆಳೆಸಿದರು ಎನ್ನುತ್ತಾರೆ ಆದರೆ ಅವರ ಹೆಸರನ್ನು ಉಳಿಸಿ ಬೆಳಸಿ ಯುವನಿರ್ದೇಶಕರಿಗೆ ಮಾದರಿಯನ್ನಾಗಿಸಲು ಎಲ್ಲೂ ಮುಂದಾಗದಿರುವುದು ಬೇಸರದ ಸಂಗತಿ ಎಂದರು.

ನಂತರ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ರವರು ಮಾತನಾಡಿ ಕಲಾವಿದರ ತವರೂರು ಮೈಸೂರು ಚಿತ್ರರಂಗಕ್ಷೇತ್ರದಲ್ಲಿ ಉತ್ತಂಗಕ್ಕೆ ಏರಲು ಪುಟ್ಟಣ್ಣ ಕಣಗಾಲ್ ರವರ ಪಾತ್ರ ಪ್ರಮುಖವಾದದ್ದು, ಪುಟ್ಟಣ್ಣನವರ ಚಿತ್ರದಲ್ಲಿ ಪಾತ್ರಗಳ ನಟನೆಯಲ್ಲಿ ಪರಿಪೂರ್ಣತೆ ಸಿಗುವ ವರೆಗೂ ಕಲಾವಿದರು ಭಯದ ವಾತವರಣದಲ್ಲೇ ನಟಿಸುತ್ತಿದ್ದ ಕಾರಣ ಇಂದಿಗೆ ವಿಷ್ಣುವರ್ಧನ್ ಅಂಬರೀಶ್ ಶ್ರೀನಾಥ್ ಸೇರಿದಂತೆ ಅತ್ಯುತ್ತಮ ನಟರಾಗಿ ಹೊಮ್ಮಿದರು, ಪುಟ್ಟಣ್ಣನವರ ಚಿತ್ರವು ಸಮಾಜಕ್ಕೆ ಸಂದೇಶ ಮತ್ತು ಕುಟುಂಬ ಪ್ರಧಾನವಾಗಿದ್ದವು, ಚಾಮಯ್ಯ ಮೇಷ್ಟ್ರು ಅಶ್ವಥ್ ರವರ ಪಾತ್ರ ಇವತ್ತಿಗೂ ಸಂಸ್ಕಾರದ ಸಂದೇಶ ತೋರಿಸುತ್ತದೆ ಎಂದರು,

ನಂತರ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್ ಗೌಡ ಮಾತನಾಡಿ ನಾಯಕರ ಕಾಲ್ಷೀಟ್ ಮತ್ತು ಬ್ಯಾನರ್ ಪ್ರಭಾವದ ಮೇಲೆ ಚಿತ್ರಗಳ ಪ್ರದರ್ಶನ ನಿರ್ಮಾಣ ಕಾಣುತ್ತಿದ್ದ ಸಂಧರ್ಭದಲ್ಲಿ ಒಬ್ಬ ನಿರ್ದೇಶಕನ ಮೇಲೆಯೇ ಅವಲಂಬಿತವಾಗಿ ಚಿತ್ರಗಳು ಶತದಿನಗಳ ಪ್ರದರ್ಶನ ಕಾಣುತ್ತಿತ್ತು ಎಂದರೆ ಪುಟ್ಟಣ್ಣ ಕಣಗಾಲ್ ರವರ ವಿಶೇಷತೆ, ಮೈಸೂರು ದಸರ ನವರಾತ್ರಿ ವಿಶೇಷವನ್ನ ಚಿತ್ರದಲ್ಲಿ ಸಾರಿದರು, ಮೆಲೆನಾಡು ಚಿತ್ರದುರ್ಗದ ಬೆಟ್ಟದಿಂದ ಕನ್ಯಾಕುಮಾರಿ ಮಾನಸ ಸರೋವರದೊರೆಗೂ ಸ್ಥಳಗಳು ಪುಟ್ಟಣ್ಣನವರ ಚಿತ್ರಿಸಿದ ಪರಿಣಾಮ ಪ್ರವಾಸಿ ಕ್ಷೇತ್ರವಾಗಿ ಜನಸಾಮನ್ಯರನ್ನು ಆಕರ್ಷಿಸಲು ಕಾರಣವಾಯಿತು ಎಂದರು.

ನಂತರ ಮಾತನಾಡಿದ ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್ ರವರು ಕನ್ನಡ ಚಿತ್ರರಂಗವು ಬಹುಭಾಷ ಚಿತ್ರಗಳ ಮುಂದೆ ಅಸ್ಥಿತ್ವಕ್ಕಾಗಿ ಸ್ಪರ್ಧಿಯಲಿದ್ದಾಗ ಒಬ್ಬ ಚಿತ್ರನಿರ್ದೇಶಕ ಭಾರತಚಿತ್ರರಂಗವೇ ಕನ್ನಡ ಭಷೆಯತ್ತ ಬೆರಳು ಇಟ್ಟು ನೋಡುವತ್ತ ಮಾಡಿ ರಾಷ್ಟ್ರ ಪ್ರಶಸ್ತಿಗಳ ವಿಜೇತರಾಗಿ ನೂರಾರು ಕಲಾವಿದರನ್ನ ಮುಖ್ಯವಾಹಿನಿಗೆ ತರಲು ಶ್ರಮಿಸಿದವರು ಪುಟ್ಟಣ್ಣ ಕಣಗಾಲ್ ರವರು, ಅವರ ಹೆಸರಲ್ಲಿ ರಾಜ್ಯಸರ್ಕಾರ ಪ್ರತಿವರ್ಷ ಪ್ರಶಸ್ತಿ ಮತ್ತು ಗೌರವಧನ ಅತ್ಯುತ್ತಮ ಪ್ರಶಸ್ತಿ ಆಯ್ಕೆಯಾದವರಿಗೆ ಕೊಡುತ್ತಾರೆ ಆದರೆ ಪಿರಿಯಾಪಟ್ಟಣ್ಣ ಕಣಗಾಲ್ ನಲ್ಲಿರುವ ಅವರ ಮನೆಯನ್ನ ಸ್ಮಾರಕವಾಗಿ ಕಾಪಾಡುವುದರ ಬಗ್ಗೆಯಾಗಲಿ ಅಥವ ಅವರ ಕುಟುಂಬದವರು ನಡೆಸುತ್ತಿರುವ ಕಣಗಾಲ್ ನೃತ್ಯಾಲಯಕ್ಕೆ ಸಹಕಾರ ನೀಡುವುದರ ಬಗ್ಗೆ ಮುಂದಾಗದಿರುವುದು ವಿಪರ್ಯಾಸ ಇತ್ತ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡಿಕೆರೆ ಗೋಪಾಲ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ ವಾಜಪೇಯಿ, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ ಗೌಡ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾನಂದೀಶ್ ,ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್, ನಗರಪಾಲಿಕ ಸದಸ್ಯರಾದ ಮ ವಿ ರಾಮಪ್ರಸಾದ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ವಿನಯ್ ಕಣಗಾಲ್, ಅಜಯ್ ಶಾಸ್ತ್ರಿ, ಮಿರ್ಲೆ ಪನೀಶ್, ಎಸ್ ಎನ್ ರಾಜೇಶ್, ಚಾಮುಂಡೇಶ್ವರಿ ಯುವ ಬಳಗದ ಅಧ್ಯಕ್ಷರಾದ ರಾಕೇಶ್, ಯೋಗೇಶ್, ಸುಚೇಂದ್ರ, ಅಪೂರ್ವ ಸುರೇಶ್ ಸೇರಿದಂಎತ ಹಲವರು ಹಾಜರಿದ್ದರು.

andolanait

Recent Posts

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

9 mins ago

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

2 hours ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

3 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

4 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

4 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

4 hours ago