ಜಿಲ್ಲೆಗಳು

ಹೆಚ್‌ಡಿ ಕೋಟೆ: ಮರಗಳ ಹನನ ನಡೆದ ಸ್ಥಳಕ್ಕೆ ಪರಿಸರವಾದಿ ಭಾನುಮೋಹನ್ ಭೇಟಿ, ಪರಿಶೀಲನೆ

ಹೆಚ್.ಡಿ.ಕೋಟೆ: ಸಮೀಪದ ಮುಳ್ಳೂರು ಗ್ರಾಮದಲ್ಲಿರುವ ಸುಮಾರು 800 ವರ್ಷಗಳ ಇತಿಹಾಸವಿರುವ ಲಕ್ಷ್ಮೀ ಕಾಂತಸ್ವಾಮಿ ದೇವಾಲಯದ ಆವರಣದಲ್ಲಿದ್ದ ಅನೇಕ ಮರಗಳನ್ನು ಹನನ ಮಾಡಿರುವ ಸ್ಥಳಕ್ಕೆ ಖ್ಯಾತ ಪರಿಸರವಾದಿ ಭಾನುಮೋಹನ್ ಭೇಟಿ ನೀಡಿ ಪರಿಶೀಲಿಸಿದರು.

ದೇವಾಲಯದಲ್ಲಿ ಗಾರ್ಡನ್ ಕೆಲಸಕ್ಕೆ‌ ಪುರಾತತ್ವ ಇಲಾಖೆಯಿಂದ ನೇಮಕಗೊಂಡಿರುವ ಗೋಪಾಲಸ್ವಾಮಿ ಅರಣ್ಯ, ಪುರಾತ್ವ ಇಲಾಖೆ, ಸ್ಥಳೀಯ ಗ್ರಾಮಪಂಚಾಯ್ತಿಗೂ ಮಾಹಿತಿ ನೀಡದೇ ಕಳೆದವಾರ ಅಕ್ರಮವಾಗಿ
ಮರಗಳನ್ನು ಕಡಿದು ಸಾಗಿಸುವ ವೇಳೆ ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದ.

ಗ್ರಾಮಸ್ಥರೆಲ್ಲರೂ ಒಗ್ಗೂಡಿ ಅರಣ್ಯ ಇಲಾಖೆಗೆ ದೂರು ನೀಡಿದ ನಂತರ ಪ್ರಕರಣ ದಾಖಲಾಗಿರುವುದಷ್ಟೇ ಬಿಟ್ಟರೇ ಮುಂದಿನ ಕ್ರಮ ಕೈಗೊಂಡಿಲ್ಲ, ಈ ಬಗ್ಗೆ ಅರಣ್ಯ ಇಲಾಖೆಯಾಗಲಿ, ಬೆಂಗಳೂರಿನ‌ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಖುದ್ದು ಭೇಟಿ ನೀಡಿ, ದೂರು ನೀಡಿದರೂ ಸಹ ತಪ್ಪಿತಸ್ಥನ ವಿರುದ್ಧ ಇಲಾಖೆಗಳು ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಇದೇ ತಪ್ಪನ್ನು ಸಾರ್ವಜನಿಕರು ಮಾಡಿದ್ದರೆ ಅಧಿಕಾರಿಗಳು ಕ್ಷಣಾರ್ಧದಲ್ಲಿ ಬಂಧಿಸುತ್ತಿದ್ದರು. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಈ 2 ಇಲಾಖೆಗಳೇ ಆತನನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅನುಮಾನ ಮೂಡುತ್ತಿದೆ ಎಂದು ಅವಲತ್ತುಕೊಂಡರು.

ಕೇಂದ್ರ ಸರ್ಕಾರಿ ನೌಕರರು ಪ್ರತಿ 5 ವರ್ಷಗಳಿಗೊಮ್ಮೆ ವರ್ಗಾವಣೆಯಾಗಬೇಕೆಂಬ ನಿಯಮವಿದ್ದರೂ ಸಹ ಗೋಪಾಲಸ್ವಾಮಿ ಕಳೆದ 15 ವರ್ಷಗಳಿಂದಲೂ ನಮ್ಮೂರಿನಲ್ಲೇ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ದೇವಾಲಯದಲ್ಲಿರುವ ನಿಧಿ, ನಿಕ್ಷೇಪಗಳ ಜತೆಗೆ, ಈ‌ ಹಿಂದೆ ಶ್ರೀಗಂಧ, ಸಾಗುವಾನೆ ಮರಗಳನ್ನು ಕಡಿದು, ಕಳ್ಳತನ ಮಾಡಿರಬಹುದು ಆದ್ದರಿಂದ ಈತನನ್ನು ಈ ಕೂಡಲೆ ಬಂಧಿಸಿ, ವಿಚಾರಣೆಗೊಳಪಡಿಸಿದರೆ ಇನ್ನಷ್ಟು ಸತ್ಯ ಹೊರಬರುತ್ತದೆ ಎಂದು ತಿಳಿಸಿದರು.

ಪರಿಸರವಾದಿ ಭಾನುಮೋಹನ್ ಮಾತನಾಡಿ, ಉಸಿರಾಡಲು ಪ್ರತಿಯೊಬ್ಬರಿಗೂ ಮರಗಳ ಅವಶ್ಯಕತೆಯಿದೆ, ಮರಗಳನ್ನೇ ಬೆಳೆಸದಿರುವ ಪ್ರಸ್ತುತ ದಿನಗಳಲ್ಲಿ ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿರುವುದರ ಜತಗೆ ಮುಂದಿನ ಪೀಳಿಗೆಗೆ ಅವಶ್ಯವಿರುವುದರಿಂದ ಪರಿಸರವನನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಈ ಕೃತ್ಯ ಎಸಗಿರುವವರು ಯಾರೇ ಆಗಿದ್ದರೂ ಅವರ ವಿರುದ್ಧ ಇಲಾಖೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಇಲಾಖೆಗಳ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮದ ಮುಖಂಡರಾದ ಸಿದ್ದನಾಯಕ, ಮಹೇಶ್, ಚಿನ್ನಸ್ವಾಮಿ, ಗೋವಿಂದನಾಯಕ ಸೇರಿದಂತೆ ಅನೇಕರಿದ್ದರು

andolana

Recent Posts

ಓದುಗರ ಪತ್ರ: ಮಾನಸ ಗಂಗೋತ್ರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯೂ ಇದೆ. ಸ್ಥಳೀಯ…

12 mins ago

ಓದುಗರ ಪತ್ರ: ಶಾಂತಿ, ಸೌಹಾರ್ದ ಸಭೆಗಳು ಹೆಚ್ಚು ಹೆಚ್ಚು ನಡೆಯಲಿ

ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’…

14 mins ago

ಓದುಗರ ಪತ್ರ: ಶ್ರೇಷ್ಠ ಕಾರ್ಮಿಕ ಧುರೀಣ ಅನಂತ ಸುಬ್ಬರಾವ್

ಹಿರಿಯ ಕಾರ್ಮಿಕ ಧುರೀಣ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಅನಂತ ಸುಬ್ಬರಾವ್ ಕಳೆದ ಸುಮಾರು ೪-೫ ದಶಕಗಳಿಂದ ಕಾರ್ಮಿಕ ಚಳವಳಿಗಳಲ್ಲಿ…

16 mins ago

ಬಾಪೂಜಿ ನೆನಪಲ್ಲಿ; ಖಾದಿ ಕೇಂದ್ರದ ಅಂಗಳದಲ್ಲಿ…

ಕೆ.ಎಸ್. ಚಂದ್ರಶೇಖರ್ ಮೂರ್ತಿ ದುಸ್ಥಿತಿಯಲ್ಲಿ ದೇಶದ ಪ್ರಪ್ರಥಮ ತಗಡೂರು ಖಾದಿ ಕೇಂದ್ರ  ಜ.೩೦, ೧೯೪೮ರಂದು ಅಹಿಂಸಾ ಪ್ರತಿಪಾದಕ, ಸ್ವಾತಂತ್ರ್ಯ ಹೋರಾಟಗಾರ…

18 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ ಚುನಾವಣೆ, ಚಿತ್ರನಗರಿ, ಒಟಿಟಿ ವರ್ತಮಾನ

ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಚುನಾವಣೆಯ ಬಿರುಸು,…

24 mins ago

ಚಳಿ ಇರುವಾಗಲೇ ದಿನಕ್ಕೊಂದು ‘ಅಗ್ನಿ ಕರೆ’

ಚಾಮರಾಜನಗರ: ಚಳಿ ಇನ್ನೂ ದೂರ ಸರಿದಿಲ್ಲ. ಆದರೂ ಬಿಸಿಲು ಬೆವರು ಹರಿಯುವ ಮಟ್ಟಿಗೆ ಸುಡುತ್ತಿದೆ. ನೆಲ ದಿನೇ ದಿನೇ ಕಾದ…

30 mins ago