ಜಿಲ್ಲೆಗಳು

ತಂತ್ರಜ್ಞಾನ ಅಪ್ಪಿಕೊಂಡು ಪರಿಸರ-ನಿಸರ್ಗವನ್ನು ಉಳಿಸಬೇಕಿದೆ: ಕಾರಂತ

ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ೧೪ನೇ ಪದವೀಧರರ ದಿನಾಚರಣೆಯಲ್ಲಿ ಭಾಗಿ

ಮೈಸೂರು: ಬದಲಾದ ಕಾಲಘಟ್ಟದಲ್ಲಿ ತಂತ್ರಜ್ಞಾನಕ್ಕೆ ಹೆದರದೆ,ಬೆದರದೆ ಅಪ್ಪಿಕೊಂಡು ಅಭಿವೃದ್ಧಿಯ ಜೊತೆಗೆ ಪರಿಸರ-ನಿಸರ್ಗವನ್ನು ಉಳಿಸಿಕೊಳ್ಳಬೇಕು. ಸಸ್ಟೇನಬಲ್ ಲ್ಯಾಂಡ್ ಸ್ಕೇಪ್, ಎಕೋ ಮಾಡೆಲ್‌ನಿಂದ ಅರಣ್ಯ,ವನ್ಯಜೀವಿಗಳನ್ನು ಸಂರಕ್ಷಣೆ ಮಾಡಬಹುದು ಎಂದು ಖ್ಯಾತ ವನ್ಯಜೀವಿ ತಜ್ಞ ಡಾ.ಕೆ.ಉಲ್ಲಾಸ ಕಾರಂತ ಹೇಳಿದರು.

ನಗರದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ೧೪ನೇ ಪದವೀಧರರ ದಿನಾಚರಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ನಿಸರ್ಗ,ವನ್ಯದ ರಕ್ಷಣೆ ಮಾಡಬೇಕು, ಪರಿಸರ ಸಂರಕ್ಷಿಸದಿದ್ದರೆ ಜಗತ್ತಿಗೆ ಅಪಾಯವಿದೆ ಎನ್ನುವ ಕಾಳಜಿಯ ಮಾತುಗಳನ್ನಾಡುತ್ತಾರೆ. ಆದರೆ, ನಿಸರ್ಗಕ್ಕೆ ಒಂದು ಭಾಗದ ಕಾಳಜಿಯನ್ನು ತೋರಿದರೆ ಸಾಲದು. ಇದರಿಂದ ಪ್ರಾಣಿಗಳು,ವನ್ಯಸಂಪತ್ತುಗಳು ಬದುಕಲಿಕ್ಕೆ ಸಾಧ್ಯವಿಲ್ಲ ಎನ್ನುವುದನ್ನು ಮನಗಾಣಬೇಕು ಎಂದರು.

ನಿಸರ್ಗದಿಂದ ನಾವು ಸವಲತ್ತು,ಸೌಲಭ್ಯಗಳನ್ನು ಪಡೆದಂತೆ ನಾವು ಅವುಗಳನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದರು. ವನ್ಯಜೀವಿ, ಜೀವತಾಣದ ರಕ್ಷಣೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ನಮಗೆ ಬದುಕುವ ಹಕ್ಕು ಇರುವಂತೆ ಸಕಲ ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಎಂಬ ಮನಸ್ಥಿತಿ ಬರಬೇಕು. ಹಿಂದೂ ಧರ್ಮದಲ್ಲಿ ನಮ್ಮಂತೆ ಇತರರೂ ಬದುಕಬೇಕು ಎನ್ನುವುದು ಇದೆ. ಹಿಂದೂಧರ್ಮದಲ್ಲಾಗಲೀ,ಬೌದ್ಧ ಧರ್ಮದಲ್ಲಾಗಲೀ ಇದೆ. ಆದರೆ ಕೆಲವು ದೇಶಗಳಲ್ಲಿ ನಾವು ಮಾತ್ರ ಬದುಕಿನ ಹಕ್ಕು ಹೊಂದಿದ್ದೇವೆಂದು ಹೇಳುತ್ತಾರೆ. ಧಾರ್ಮಿಕ ನಂಬಿಕೆಯಲ್ಲೂ ಅಳವಾಗಿ ಬೇರೂರಿರುವುದರಿಂದ ನಮ್ಮ ಬಳಕೆಗೆ ಜೊತೆಗೆ ವನ್ಯಜೀವಿಗಳಿಗೂ ಬದುಕುವ ಹಕ್ಕು ಇದೆ ಎಂದು ನುಡಿದರು. ಹಲವು ದಶಕಗಳ ಹಿಂದೆ ಕಳ್ಳಬೇಟೆಯಾಡುವುದು, ಪ್ರಾಣಿಗಳನ್ನು ಬೇಟೆಯಾಡಲಾಗುತ್ತಿತ್ತು. ಆದರೆ,ಕಾಲ ಕ್ರಮೇಣ ಅದು ನಿಂತಿದೆ.೧೯೭೦ರ ಅವಧಿಯಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ತಂದರು.೧೯೮೦ರ ಅವಧಿಯಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆಯನ್ನುತರಲಾಯಿತು. ಈ ಕಾಯ್ದೆ ತರುವಾಗ ಸಾಕಷ್ಟು ವಿರೋಧ ಬಂದರೂ ತಮ್ಮ ಜನಪ್ರಿಯತೆಯ ಮುಂದೆ ಅದನ್ನು ದಕ್ಕಿಸಿಕೊಂಡರು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜುಟ್ಟು ಹಿಡಿದು ಅನುಷ್ಠಾನಕ್ಕೆ ತಂದ ದೊಡ್ಡ ಗಟ್ಟಿಗಿತ್ತಿ.ಅದೇ ರೀತಿ ಅಧಿಕಾರಿಗಳು,ರೇಂಜರ್‌ಗಳು,ಗಾರ್ಡ್‌ಗಳು ಬದ್ಧತೆಯಿಂದ ಕೆಲಸ ಮಾಡುತ್ತಿದ್ದರಿಂದ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿತು ಎಂದು ಅಭಿಪ್ರಾಯಪಟ್ಟರು. ಕೆಲವರು ನಾವು ಈಗ ಮಾಡಿದ್ದೇವೆಂದು ಬೀಗಿಕೊಳ್ಳುತ್ತಿದ್ದಾರೆ. ೧೯೭೦ರಿಂದ ೨೦೦೦ರವರೆಗೆ ನಡೆದಿರುವ ಅರಣ್ಯ ಸಂರಕ್ಷಣೆ ಕಾರ್ಯ ನಂತರದಲ್ಲಿ ನಡೆಯಲಿಲ್ಲ.ಇದರಲ್ಲಿ ಎಲ್ಲರ ಪಾಲು ಇದ್ದರೂ ಇಂದಿರಾಗಾಂಧಿ ಅವರು ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ತಂದಿದ್ದನ್ನು ಸದಾ ನೆನಪಿಸಿಕೊಳ್ಳಬೇಕು ಎಂದರು.

andolana

Recent Posts

ಜಾತೀಯತೆ ತೊಲಗಲಿ : ಡಾ.ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…

9 hours ago

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…

9 hours ago

ಭೀಕರ ಸರಣಿ ಅಪಘಾತ : ಇಬ್ಬರು ಸಾವು, 20ಕ್ಕೂ ಹೆಚ್ಚು ವಾಹನ ಹಾನಿ

ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…

10 hours ago

ವಿದ್ಯಾವಂತರಲ್ಲಿ ಹೆಚ್ಚುತ್ತಿರುವ ಮೌಢ್ಯತೆ, ಕಂದಾಚಾರ : ಸಿಎಂ ವಿಷಾದ

ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…

10 hours ago

ವಸ್ತುಪ್ರದರ್ಶನದಲ್ಲಿ ಜನಾಕರ್ಷಿಸಿದ ಚಿತ್ರ ಸಂತೆ

ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…

10 hours ago

ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕನಿಗೆ ಲುಕ್‌ಔಟ್‌ ನೋಟಿಸ್‌ ಜಾರಿ

ಬೆಂಗಳೂರು : ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…

10 hours ago