ವರದಿ: ಕೆ.ಬಿ.ಶಂಶುದ್ಧೀನ್
ಕುಶಾಲನಗರ: ಗುಜರಾತ್ ತೂಗು ಸೇತುವೆ ದುರಂತ ಬೆನ್ನಲ್ಲೇ ಕೊಡಗು ಜಿಲ್ಲೆಯಲ್ಲೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಶಿಥಿಲಾವಸ್ಥೆಯಲ್ಲಿದ್ದ ಕಾವೇರಿ ನಿಸರ್ಗಧಾಮದ ತೂಗು ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ತಾತ್ಕಲಿಕವಾಗಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ನಿಸರ್ಗಧಾಮದ ಒಳ ಪ್ರವೇಶಿಸಿಸಲು ತೂಗು ಸೇತುವೆ ಮೂಲಕವೇ ತೆರಳಬೇಕಾಗಿದೆ. ಆದರೆ, ಇತ್ತೀಚೆಗೆ ತೂಗು ಸೇತುವೆ ಶಿಥಿಲಾವಸ್ಥೆಯಲ್ಲಿತ್ತು.
ಇತ್ತೀಚಿಗೆ ನಡೆದ ಗುಜರಾತ್‌ನ ಮೊರ್ಬಿ ಸೇತುವೆ ಅವಘಡ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ದುರಸ್ತಿಯಲ್ಲಿರುವ ತೂಗು ಸೇತುವೆಗಳನ್ನು ಪರಿಶೀಲನೆ ನಡೆಸಲು ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಕುಶಾಲನಗರದ ಕಾವೇರಿ ನಿಸರ್ಗಧಾಮದ ತೂಗು ಸೇತುವೆಯ ಬಳಕೆಗೆ ಯೋಗ್ಯವಿಲ್ಲ ಎಂದು ತಂತ್ರಜ್ಞರು ವರದಿ ನೀಡಿದ ಕಾರಣವಾಗಿ ಕಾವೇರಿ ನಿಸರ್ಗಧಾಮವನ್ನು ಮುಚ್ಚಲಾಗಿದೆ.
೨೭ ವರ್ಷಗಳ ಹಳೆಯ ಸೇತುವೆ: ಕಾವೇರಿ ನಿಸರ್ಗಧಾಮದ ಸೇತುವೆ ೧೯೯೫ ರಲ್ಲಿ ನಿರ್ಮಾಣವಾಗಿದ್ದು, ೨೭ ವರ್ಷಗಳ ಹಳೆಯ ಸೇತುವೆಯಾಗಿದೆ. ಪ್ರವಾಹದಿಂದ ತೂಗು ಸೇತುವೆ ಶಿಥಿಲವಾಗಿದೆ ಎಂದು ತಂತ್ರಜ್ಞರು ಮಾಹಿತಿ ನೀಡಿದ್ದು, ಸೇತುವೆಯು ರೋಬ್ ಹಾಗೂ ಕಬ್ಬಿಣದ ಸಲಕರಣೆಗಳನ್ನು ಬದಲಾಯಿಸುವಂತೆ ತಿಳಿಸಿದ್ದಾರೆ. ತೂಗು ಸೇತುವೆಯ ದುರಸ್ತಿಗೆ ೩೫ ರಿಂದ ೪೦ ಲಕ್ಷ ರೂ.ಗಳ ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದ್ದು, ದುರಸ್ತಿ ಕೆಲಸವನ್ನು ಕರ್ನಾಟಕದ ಆುಂಶಿಲ್ಪಾ ಎಂಬ ಕಂಪೆನಿ ನಡೆಸಲಿದ್ದಾರೆ. ತೂಗು ಸೇತುವೆಯು ರೋಬನ್ನು ಕೊರಿಯಾದಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ದುರಸ್ತಿ ಕಾರ್ಯಕ್ಕೆ ಎರಡು ತಿಂಗಳು ಕಾಲಾವಕಾಶ ಬೇಕಾಗಿದೆ ಎಂದು ಹೇಳಲಾಗಿದೆ.
ಪ್ರವಾಸೋದ್ಯಮ ಅವಲಂಬಿತರಲ್ಲಿ ಆತಂಕ: ಕಾವೇರಿ ನಿಸರ್ಗಧಾಮವನ್ನು ದಿಢೀರನೆ ಮುಚ್ಚಿದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅವಲಂಬಿತರಲ್ಲಿ ಆತಂಕ ಹೆಚ್ಚಾಗಿದೆ. ಕೊರೊನಾ ಲಾಕ್‌ಡೌನ್, ಪ್ರವಾಹದಿಂದ ನಿಧಾನಗತಿಯಲ್ಲಿ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿದೆ. ಇದೀಗ ದಿಢೀರನೆ ಪ್ರಸಿದ್ಧ ಪ್ರವಾಸಿ ತಾಣ ಕಾವೇರಿ ನಿಸರ್ಗಧಾಮವನ್ನು ಮುಚ್ಚಿರುವುದು ಪ್ರವಾಸೋದ್ಯಮ ಅವಲಂಬಿತರಲ್ಲಿ ಹೊಟ್ಟೆಗೆ ಹೊಡೆದಂತಾಗಿದೆ. ಆದ್ದರಿಂದ ತೂಗು ಸೇತುವೆ ದುರಸ್ತಿ ಕಾಮಗಾರಿಯನ್ನು ಬೇಗನೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿರುವ ಪ್ರವಾಸೋದ್ಯಮ ಅವಲಂಬಿತರು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ, ಪ್ರವಾಸಿಗರ ಹಿತದೃಷ್ಟಿ ಎಂದು ಸಬೂಬು ಹೇಳಿ ಕಾವೇರಿ ನಿಸರ್ಗಧಾಮವನ್ನು ಮುಚ್ಚಿರುವುದು ಸರಿಯಲ್ಲ ಎಂದು ಅಸವಾಧಾನ ವ್ಯಕ್ತ ಪಡಿಸಿದ್ದಾರೆ.
ದಿನಕ್ಕೆ ಒಂದು ಲಕ್ಷಕ್ಕೂ ಅಧಿಕ ಆದಾಯ: ಕಾವೇರಿ ನಿಸರ್ಗಧಾಮದ ಆದಾಯ, ಪ್ರತಿದಿನ ಸರಾಸರಿ ಒಂದು ಲಕ್ಷಕ್ಕೂ ಅಧಿಕವಿದೆ. ಇಷ್ಟೊಂದು ಆದಾಯ ಗಳಿಸುವ ಕಾವೇರಿ ನಿಸರ್ಗಧಾಮದಲ್ಲಿ ಪರ್ಯಾಯ ಸೇತುವೆ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸ. ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಮುಂದಾಲೋಚನೆ ಹಾಗೂ ದೂರದೃಷ್ಟಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವುದರಿಂದ ಇಂದು ಕಾವೇರಿ ನಿಸರ್ಗಧಾಮವನ್ನು ಮುಚ್ಚುವ ಪರಿಸ್ಥಿತಿ ಒದಗಿಬಂದಿದೆ. ಹಳೆಯ ಸೇತುವೆಯನ್ನು ದುರಸ್ತಿ ಮಾಡುವುದರ ಜೊತೆಗೆ ಪರ್ಯಾ ಸೇತುವೆಯೊಂದನ್ನು ನಿರ್ಮಿಸಬೇಕು ಎಂದು ಕುಶಾಲನಗರದ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
ಕಾವೇರಿ ನಿಸರ್ಗಧಾಮವನ್ನು ಅವಲಂಬಿಸಿ ಸುವಾರು ೩೦೦ಕ್ಕೂ ಹೆಚ್ಚು ಕುಟುಂಬಗಳು ಜೀವಿಸುತ್ತಿದ್ದಾರೆ. ಆಟೋ ಚಾಲಕರು, ಕಾರು ಚಾಲಕರು ಪ್ರವಾಸಿಗರನ್ನು ಅವಲಂಭಿಸಿದ್ದಾರೆ. ಈಗ ದಿಢೀರನೆ ಕಾವೇರಿ ನಿಸರ್ಗಧಾಮವನ್ನು ಮುಚ್ಚಿರುವುದು ಅವರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ೨೭ ವರ್ಷ ಹಳೆದ ಸೇತುವೆ ಬಳಕೆಗೆ ಯೋಗ್ಯವಿಲ್ಲ ಎಂದು ತಂತ್ರಜ್ಞರು ಪರಿಶೀಲನೆ ನಡೆಸಿ ಹೇಳುವ ಅವಶ್ಯಕತೆ ಇಲ್ಲ. – ಜಕ್ರಿಯಾ, ಎಸ್‌ಡಿಪಿಐ ಅಧ್ಯಕ್ಷರು, ಕುಶಾಲನಗರ.
ಕಾವೇರಿ ನಿಸರ್ಗಧಾಮವನ್ನು ಮುಚ್ಚಿರುವುದರಿಂದ ಆಟೋ ಹಾಗೂ ಕಾರು ಚಾಲಕರ ಹೊಟ್ಟೆಗೆ ಹೊಡೆದಂತಾಗಿದೆ. ಆದಷ್ಟು ಬೇಗನೇ ದುರಸ್ತಿ ಕಾರ್ಯ ಮುಗಿಸುವುದರ ಜೊತೆಗೆ ಪರ್ಯಾಯ ವ್ಯವಸ್ಥೆಯನ್ನು ಒದಗಿಸಿಕೊಡಬೇಕು. ೨೭ ವರ್ಷಗಳ ಹಳೆಯದಾದ ಸೇತುವೆಯಾಗಿದೆ. ಈವರೆಗೆ ಪರ್ಯಾಯ ಸೇತುವೆ ನಿರ್ಮಿಸದಿರುವುದು ವಿಪರ್ಯಾಸ. – ನರಸಿಂಹ, ಆಟೋ ಚಾಲಕ, ಕುಶಾಲನಗರ.
ಹೊಸದಿಲ್ಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೧ನೇ ಜಯಂತಿ ಹಿನ್ನೆಲೆಯಲ್ಲಿ ದಿಲ್ಲಿ ಸರ್ಕಾರ ಗುರುವಾರ ರಾಜಧಾನಿಯಲ್ಲಿ…
ಬೆಂಗಳೂರು : ಮಾಹಿತಿ ಕೊರತೆ ಅಥವಾ ತಾಂತ್ರಿಕ ತೊಂದರೆಗಳಿಂದಾಗಿ ಅರ್ಹ ರೈತರು ಕುಸುಮ್-ಬಿ ಯೋಜನೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕರ್ನಾಟಕ ನವೀಕರಿಸಬಹುದಾದ…
ಮೈಸೂರು : ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ದಹಿಸಿದ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ ವತಿಯಿಂದ ಮನುಸ್ಮೃತಿಯನ್ನು ಸುಡುವ ಮೂಲಕ…
ಮೈಸೂರು : ಮೇಲ್ವರ್ಗದ ಯುವತಿಯೊಬ್ಬಳು ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಸ್ವಂತ ಮಗಳನ್ನೆ ಹೆತ್ತ ಅಪ್ಪ-ಅಮ್ಮ-ಅಣ್ಣಂದಿರು ಕೊಲೆ ಮಾಡುವ…
ಚಾಮರಾಜನಗರ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟ ಹಾಕಿದ ದಿನದ ಅಂಗವಾಗಿ ವಿವಿಧ ಸಂಘಟನೆಗಳ ಮುಖಂಡರು…
ಹೊಸದಿಲ್ಲಿ : ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ನಡುವೆ ಕರ್ನಾಟಕದಲ್ಲಿ ಉದ್ಯೋಗ…