ಹನೂರು : ಗ್ರಾಮೀಣ ಭಾಗದ ಮಕ್ಕಳು ಸಹ ಈಗಿನಿಂದಲೇ ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಆ ನಿಟ್ಟಿನಲ್ಲಿ ಕಂಪ್ಯೂಟರ್ ಸದುಪಯೋಗ ಮಾಡಿಕೊಳ್ಳಿ ಅಲ್ಲದೆ ಶಿಕ್ಷಣದಿಂದ ಮಾತ್ರ ಬಡತನ ಮೆಟ್ಟಿ ನಿಲ್ಲಲು ಸಾಧ್ಯ ಎಂದು ಪ್ರತಿಬಿಂಬ ಟ್ರಸ್ಟ್ ನ ಮುಖ್ಯಸ್ಥರಾದ ಮುರುಳಿ ಹೇಳಿದರು..
ತಾಲ್ಲೂಕಿನ ಕುರಟ್ಟಿ ಹೊಸೂರು ಕಾಲೋನಿ ಶಾಲೆಗೆ ಉಚಿತವಾಗಿ ಕಂಪ್ಯೂಟರ್, ಹಾಗೂ ಬ್ಯಾಗ್, ಲೇಖನ ಸಾಮಾಗ್ರಿಗಳು,ಶಾಲಾ ಕಟ್ಟಡಗಳಿಗೆ ಬಣ್ಣದ ಸಾಮಗ್ರಿಗಳು ವಿತರಣೆ ಮಾಡಿ ಮಾತನಾಡಿದರು..
ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿರುವ ನಮಗೆ ಕಂಪ್ಯೂಟರ್ ಜ್ಞಾನ ತುಂಬಾ ಅಗತ್ಯವಾಗಿದೆ.ಆ ನಿಟ್ಟಿನಲ್ಲಿ ಮಕ್ಕಳು ಈಗಿಂದಲೇ ಅಭ್ಯಾಸ ಮಾಡುವಂತವರಾಗಬೇಕು ಅಲ್ಲದೆ ಓದಿಗೆ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಲೇಖನ ಸಾಮಗ್ರಿಗಳು, ಬ್ಯಾಗ್ ನೀಡುತ್ತಿದ್ದು ಎಲ್ಲರೂ ಸಹ ಸದುಪಯೋಗ ಮಾಡಿಕೊಳ್ಳಿ ಎಂದು ಕರೆ ನೀಡಿದರು.ಅಲ್ಲದೆ ಮಕ್ಕಳು ಕಲಿಕೆಯಲ್ಲಿ ಮುಂದೆ ಬರಲು ಶಾಲಾ ವಾತಾವರಣ ಸಹ ತುಂಬಾ ಮುಖ್ಯ ಪಾತ್ರವಹಿಸಲಿದೆ ಆ ನಿಟ್ಟಿನಲ್ಲಿ ಶಾಲೆಗೆ ತುಂಬಾ ಅಗತ್ಯವಾದ ಬಣ್ಣ ಬಳಿಯುವ ಕೆಲಸ ಸಹ ಆಗಬೇಕಿದೆ. ಅದನ್ನು ಸಹ ನಾವು ಕೊಡುತ್ತೇವೆ ಒಟ್ಟಿನಲ್ಲಿ ಶಾಲಾ ಮಕ್ಕಳಿಗೆ ಅನುಕೂಲ ಆಗಬೇಕು ಓದಿನಲ್ಲಿ ಮುಂದೆ ಬಂದು ತಮ್ಮ ಜೀವನ ಸುಗಮವಾಗಿ ಕಟ್ಟಿಕೊಳ್ಳಲು ಅನುಕೂಲ ಆಗಬೇಕು ಎಂದರು..
ಕುರಟ್ಟಿ ಹೊಸೂರು ಕಾಲೋನಿ ಶಾಲೆಯ ಶಿಕ್ಷಕ ಭರತ್ ಮಾತನಾಡಿ ನಮ್ಮ ಕಾಡಂಚಿನ ಶಾಲೆ ಗುರುತಿಸಿ ಶಾಲೆಯಲ್ಲಿನ ಮಕ್ಕಳು ಓದಿನಲ್ಲಿ ಮುಂದೆ ಬರಲಿ ಎಂಬ ಉದ್ದೇಶದಿಂದ ಪ್ರತಿಬಿಂಬ ಟ್ರಸ್ಟ್ ಇಂದು ಸಾಕಷ್ಟು ವಸ್ತುಗಳನ್ನು ದಾನ ನೀಡಿದೆ ನಮ್ಮ ಕಾಡಂಚಿನ ಶಾಲೆ ಗುರುತಿಸಿದ್ದಕ್ಕಾಗಿ ಹಾಗೂ ದಾನಿಗಳಾಗಿ ಸಾಕಷ್ಟು ವಸ್ತು ನೀಡಿದ್ದಕ್ಕಾಗಿ ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳು ಹಾಗೂ ಎಲ್ಲರಿಗೂ ಶಾಲೆಯ ಪರವಾಗಿ ಅಭಿನಂದನೆಗಳು ಎಂದರು.
ಇದೆ ಸಂದರ್ಭದಲ್ಲಿ ಶಿಕ್ಷಕ ರಾಮಕೃಷ್ಣ, ರಾಜೇಂದ್ರ ಬಾಬು, ಅತಿಥಿ ಶಿಕ್ಷಕರಾದ ಮಹೇಶ್, ವಸಂತ, ಹಾಗೂ ಪ್ರತಿಬಿಂಬ ಟ್ರಸ್ಟ್ ನ ಪದಾಧಿಕಾರಿಗಳು, ಮಕ್ಕಳು, ಪೋಷಕರು ಉಪಸ್ಥಿತರಿದ್ದರು..
ಮೈಸೂರು: ಜಿಲ್ಲೆಯಲ್ಲಿ ಕಾದು ಪ್ರಾಣಿಗಳ ಹಾವಳಿ ಮುಂದುವರಿದಿದ್ದು, ಕಣಿಯನಹುಂಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಗ್ರಾಮದ ಕೃಷ್ಣ ಎಂಬುವವರ ಜಮೀನಿನಲ್ಲಿ ಚಿರತೆ…
ನಂಜನಗೂಡು: ಗುಜರಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ಮೌಲ್ಯದ ಪದಾರ್ಥಗಳು ಸುಟ್ಟು ಕರಕಲಾಗಿರುವ ಘಟನೆ ನಂಜನಗೂಡಿನ ಶಂಕರಪುರ ಬಡಾವಣೆಯಲ್ಲಿ…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎನ್‌ಸಿಬಿ ದಾಳಿ ವೇಳೆ ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ಪೊಲೀಸ್ ಕಮಿಷನರ್ ಸೀಮಾ…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದು, ಕೆಮಿಕಲ್ ಘಟಕದಲ್ಲಿ ಲೇಬಲ್ ಇಲ್ಲದ ಖಾಲಿ ಬಾಟಲ್‌ಗಳನ್ನು…
ಜಗಕೆ ಮಾದರಿ! ಭಲೆ ಭಲೇ ಅಂಕೇಗೌಡರೆ ಜಗಕೆ ಮಾದರಿ ನಿಮ್ಮ ಪುಸ್ತಕಪ್ರೀತಿ ಅರಿವಿನ ಆಕರಗಳು ಪುಸ್ತಕಗಳು! ದುಡಿದ ಲಕ್ಷಾಂತರ ಹಣವನು…
ಮೈಸೂರಿನ ವಿವೇಕಾನಂದ ನಗರದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಪ್ರತಿಮೆಯನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿದೆ. ಜ.೧೨ರಂದು ಸ್ವಾಮಿ ವಿವೇಕಾನಂದರ…