ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಎಲ್ಲ ಆನೆಗಳು ಇಂದು ವಧು-ವರರಂತೆ ಸಿಂಗಾರಗೊಂಡು ಬಣ್ಣ ಬಣ್ಣದ ಚಿತ್ತಾರಗಳಿಂದ ಕಣ್ಮನ ಸೆಳೆಯುತ್ತಿವೆ.
ನಾಗಲಿಂಗಪ್ಪ ಬಡಿಗೇರ್ ತಂಡದ ಏಳು ಜನರು ಆನೆಗಳ ಮೇಲೆ ಚಿತ್ರ ಬಿಡಿಸುವ ಕಾಯಕ ಆರಂಭಿಸಿದರು. ಅರಮನೆ ಆವರಣದಲ್ಲಿನ ಆನೆಗಳ ಶಿಬಿರದಲ್ಲಿ ಬುಧವಾರ ಬೆಳಗ್ಗೆ 11 ಗಂಟೆಯವರೆಗೆ ಆನೆಗಳ ಮೇಲೆ ಬಣ್ಣದ ಚಿತ್ತಾರ ಬಿಡಿಸುವ ಕಾರ್ಯ ನಡೆದಿತ್ತು. ಮಂಗಳವಾರ ರಾತ್ರಿ 10.30ಕ್ಕೆ ಆರಂಭವಾದ ಈ ಕಲಾತ್ಮಕ ಕೆಲಸ ಮೆರವಣಿಗೆಯ ದಿನದ ಬೆಳಗ್ಗೆ 11ರವರೆಗೂ ಮುಂದುವರಿದಿತ್ತು.
ಎಲ್ಲಾ ಆನೆಗಳು ಚಿತ್ತಾರ ಬರೆಸಿಕೊಂಡು ಪೋಸ್ ನೀಡುತ್ತಿದ್ದರೆ, ಜಂಬೂ ಸವಾರಿ ನಾಯಕ ಅಭಿಮನ್ಯುವಿಗೆ ಕೊನೆಯಲ್ಲಿ ಚಿತ್ರ ಬರೆಯಲು ಆರಂಭಿಸಲಾಯಿತು. ಹೀಗೆ ಈ ಹದಿಮೂರು ಆನೆಗಳ ಸಿಂಗಾರಕ್ಕಾಗಿ ಮೆರವಣಿಗೆಯ ಹಿಂದಿನ ರಾತ್ರಿಯಿಂದ ಜಂಬೂಸವಾರಿ ಆರಂಭವಾಗುವ ಕಡೇ ಕ್ಷಣದವರೆಗೂ ಶ್ರಮಿಸಿದರು.
ನೈಸರ್ಗಿಕ ಬಣ್ಣ ಬಳಕೆ: ದಸರಾ ಆನೆಗಳ ಮೇಲೆ ಚಿತ್ರ ಬರೆಯುವುದಕ್ಕೆ ಬಳಸುವ ಬಣ್ಣಗಳಿಂದ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ಚರ್ಮದ ಮೇಲೆ ಯಾವುದೇ ದುಷ್ಪರಿಣಾಮ ನೀಡದಂತಹ ನೈಸರ್ಗಿಕ ಬಣ್ಣ ಬಳಸಲಾಗಿದೆ. ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ ಎಲ್ಲಾ ಆನೆಗಳ ಉಗುರಿಗೆ ಸ್ವರ್ಣ ಬಣ್ಣ ಹಚ್ಚಲಾಗಿತ್ತು. ಸೊಂಡಿಲ ಮೇಲಿರುವ ಬಿಳಿ ಮಚ್ಚೆಗಳಿಗೆ ಕಣ್ಣು ಬಣ್ಣದ ಲೇಪನ ಮಾಡಲಾಗಿತ್ತು. ಅಂತಿಮವಾಗಿ ಆನೆಗಳ ಮೇಲೆ ನಾಮ ಮತ್ತು ಗಾದಿ ಹಾಕಿ, ರೇಷ್ಮೆ ವಸ್ತ್ರ ಹೊದಿಸಲಾಯಿತು.
ಚಿತ್ರ ಬಿಡಿಸುವಾಗ ಆನೆಗಳು ಸದಾ ಕಿವಿ ಬಡಿಯುತ್ತಾ ಸೊಂಡಿಲು ಮತ್ತು ಬಾಲ ಅಲ್ಲಾಡಿಸುತ್ತಲೇ ಇದ್ದವು. ಚಿತ್ರಕಾರರು ಇದನ್ನೆಲ್ಲ ಸಂಭಾಳಿಸುತ್ತಾ ಲಘುಬಗೆಯಿಂದ, ಸಾಕಷ್ಟು ತಾಳ್ಮೆಯಿಂದ ಚಿತ್ರ ಬಿಡಿಸಿದರು.
ಪಂಜು ಗಂಗೊಳ್ಳಿ ಜೈಲಿನ ಅನಕ್ಷರಸ್ಥ ಕೈದಿಗಳನ್ನು ಅಕ್ಷರಸ್ಥರನ್ನಾಗಿಸಲು ಮಹತ್ವದ ಯೋಜನೆ ರಾಜೇಶ್ ಕುಮಾರ್ ಯಾವತ್ತೂ ಶಾಲೆಯ ಮಟ್ಟಿಲು ಹತ್ತಿದವನಲ್ಲ. ಹಾಗಾಗಿ,…
ಸುಂಟಿಕೊಪ್ಪದಲ್ಲಿ ೧೮ ಲಕ್ಷ ರೂ. ವೆಚ್ಚದ ಮಂಟಪ ನಿರ್ಮಾಣ ೩ ದಿನಗಳ ಧಾರ್ಮಿಕ ಕಾರ್ಯಕ್ರಮ ಸುಂಟಿಕೊಪ್ಪ: ಇಲ್ಲಿನ ಶ್ರೀ ಪುರಂ…
ಪಿರಿಯಾಪಟ್ಟಣ: ದೇಸಿ ಬೀಜಗಳನ್ನು ಉಳಿಸಿದರೆ ಮಾತ್ರ ಮುಂದಿನ ಯುವ ಜನಾಂಗಕ್ಕೆ ವಿಷಮುಕ್ತ ಆಹಾರ ನೀಡಲು ಸಾಧ್ಯ ಎಂದು ಸಾವಯವ ರೈತ…
ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…
ಕೆ.ಬಿ.ರಮೇಶನಾಯಕ ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…