ಜಿಲ್ಲೆಗಳು

ದಸರೆ ಸಂಭ್ರಮ ಹೆಚ್ಚಿಸಿದ ಕಲಾ ಪ್ರಕಾರಗಳ ಮೆರುಗು

ಜಂಬೂ ಸವಾರಿಯಲ್ಲಿ 70ಕ್ಕೂ ಹೆಚ್ಚು ಕಲಾ ಪ್ರಕಾರಗಳ ವೈಭವ ಪ್ರದರ್ಶನ

ಮೈಸೂರು:ನಾನಾ ಕಲಾ ಪ್ರಕಾರಗಳ ಪ್ರದರ್ಶನಕ್ಕೆ ಹಿಂದಿನಿಂದಲೂ ವೇದಿಕೆಯಾಗಿರುವ ಮೈಸೂರು ದಸರೆ ಜಂಬೂ ಸವಾರಿಯಲ್ಲಿ ಈ ಬಾರಿ ರಾಜ್ಯ ಮಟ್ಟದ ಮಾತ್ರವಲ್ಲ ರಾಷ್ಟ್ರಮಟ್ಟದ ಹಲವು ಕಲಾವೈಭವ ಅನಾವರಣಗೊಂಡಿತು.

ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕಾಣದ ಕಲಾ ತಂಡಗಳ ಮೆರುಗನ್ನು ಕಂಡ ದಸರಾ ವೀಕ್ಷಕರು ಈ ಬಾರಿ ಮತ್ತೆ ಸಂಭ್ರಮಿಸಿದರು. ಕಲಾವಿದರು ಹೊಸ ಹುರುಪಿನೊಂದಿಗೆ ಪ್ರದರ್ಶನ ನೀಡಿ ಗಮನ ಸೆಳೆದರು.

ಮೈಸೂರಿನ ನಂದಿಧ್ವಜದ ಜತೆ ವಿವಿಧ ಕಲಾ ತಂಡಗಳಾದ ನಂಜನಗೂಡಿನ ವೀರಗಾಸೆ ಕುಣಿತ, ರಾಮನಗರ ಜಿಲ್ಲೆಯ ಪಟಕುಣಿತ, ಹಾವೇರಿ ಜಿಲ್ಲೆಯ ಪುರವಂತಿಗೆ, ಮೈಸೂರು ಜಿಲ್ಲೆಯ ವರಕೂಡಿನ ಕಂಸಾಳೆ ನೃತ್ಯ , ವಿಜಯಪುರದ ಕೀಲುಕುದುರೆ, ಹಾವೇರಿ ಜಿಲ್ಲೆಯ ಕೋಲಾಟ, ಹಾಸನ ಜಿಲ್ಲೆಯ ಚಿಟ್ ಮೇಳ, ಧಾರವಾಡ ಜಿಲ್ಲೆಯ ಕಣಿವಾದನ, ಬಾಗಲಕೋಟೆಯ ಹೂವಿನ ನೃತ್ಯ , ಹೆಜ್ಜೆಯ ಮೇಳ, ಮೈಸೂರಿನ ತಮಟೆ ನಗಾರಿ, ಯಕ್ಷಗಾನ ಗೊಂಬೆ ಇವು ಜಂಬೂ ಸವಾರಿಯಲ್ಲಿ ಗಮನ ಸೆಳೆದವು.

ಅಲ್ಲದೆ, ಟಿ,ನರಸೀಪುರದ ಬನ್ನೂರಿನ ಪೂಜಾ ಕುಣಿತ, ಬೀದರಿನ ಲಂಬಾಣಿ ನೃತ್ಯ, ಬಳ್ಳಾರಿ ಜಿಲ್ಲೆಯ ಹಗಲುವೇಷ , ಕೋಲಾರದ ತಮಟೆ ವಾದನ ಗಮನ ಸೆಳೆಯಿತು. ಉಡುಪಿ ಜಿಲ್ಲೆಯ ದಟ್ಟಿ ಕುಣಿತ ,ಕುಡುಬಿ ನೃತ್ಯ, ಉತ್ತರ ಕನ್ನಡದ ಗೊಂಡರ ಡಕ್ಕೆ , ಟಿ. ನರಸೀಪುರದ ತಲಕಾಡಿನ ಚಿಲಿಪಿಲಿ ಗೊಂಬೆ, ಉಡುಪಿ ಜಿಲ್ಲೆಯ ಸಿಂಗಾರಿ ಮೇಳ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮರಗಾಲು ಕುಣಿತ, ದೊಣ್ಣೆವರಸೆ ರಸಮಯವಾಗಿತ್ತು.

ಜಮ್ಮು ಕಾಶ್ಮೀರದ -ಡೋಂಗ್ರಿ ನೃತ್ಯ, ತೆಲಂಗಾಣದ -ಮಥುರಿ ನೃತ್ಯ, ಪಂಜಾಬಿನ -ಬಾಂಗ್ರಾ ಮತ್ತು ಜಿಂದುವಾ ನೃತ್ಯ, ಪಶ್ಚಿಮ ಬಂಗಾಳದ ಪುರ್ಲಿಯಾ ಚಾವ ನೃತ್ಯ, ರಾಜಸ್ಥಾನದ ಚಕ್ರಿ ಮತ್ತು ಗೊಮರ್ ನೃತ್ಯ, ತಮಿಳು ನಾಡಿನ – ತಪ್ಪೆಟಂ ನೃತ್ಯ ದಸರೆ ಕಲಾವೈಭವಕ್ಕೆ ರಾಷ್ಟ್ರಮಟ್ಟದ ಮೆರುಗನ್ನು ತಂದುಕೊಟ್ಟಿತು.

ಬೆಳಗಾವಿ ಜಿಲ್ಲೆಯ ಜಗ್ಗಲಗಿ ಮೇಳ , ಮಂಡ್ಯಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹೆಗ್ಗಡಹಳ್ಳಿಯ ಕೀಲುಕುದುರೆ, ಬೆಂಗಳೂರಿನ ಹಾಲಕ್ಕಿ ಸುಗ್ಗಿ, ಚಾಮರಾಜ ನಗರ ಜಿಲ್ಲೆಯ ಗೇರ್ ನೃತ್ಯ, ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕಿನ ನಿಟ್ಟೂರು ಗ್ರಾಮದ ನಂದೀಕೋಲು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜಡೆ ಕೋಲಾಟ, ಕೋಲಾರದ ಕೀಲು ಕುದುರೆ, ಕೊಡಗಿನ ಜನರ ಗಿರಿಜನ ನೃತ್ಯ, ಹಾವೇರಿ ಜಿಲ್ಲೆಯ ಬೇಡರ ವೇಷ, ಚಿಕ್ಕಬಳ್ಳಾಪುರದ ಕೀಲುಕುದುರೆ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಉರುಮೆ ವಾದ್ಯ ಪ್ರೇಕ್ಷಕರ ಗಮನ ಸೆಳೆಯಿತು.

ಬೆಂಗಳೂರಿನ ಕೃಷ್ಣ ಜಾನಪದ ನವಿಲು ನೃತ್ಯ ತಂಡದ ನವಿಲು ನೃತ್ಯ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಮುಳ್ಳು ಕುಣಿತ, ಕೊಪ್ಪಳದ ಸಮ್ಮಾಳ ಮೇಳ , ಹಗಲು ವೇಷ, ಧಾರವಾಡ ಜಿಲ್ಲೆಯ ದಾಲಪಟ, ಬೆಳಗಾವಿ ಜಿಲ್ಲೆ ಅಥಣಿಯ ಕರಡಿ ಮಜಲು, ಮಂಡ್ಯದ ಕೋಲಾಟ, ದೊಣ್ಣೆವರಸೆ, ಬಾಗಲಕೋಟೆ ಮುಧೋಳ ತಾಲ್ಲೂಕಿನ ಝಾಂಜ್ ಫಥಕ್, ಧಾರವಾಡ ಜಿಲ್ಲೆಯ ಲಿಂಗೇಶ್ವರ ನಗರದ ಕಥಕಳಿ ಗೊಂಬೆ , ಚಾಮರಾಜ ನಗರ ಜಿಲ್ಲೆಯ ಮಲ್ಲಿಕಾರ್ಜುಣ ಕಲಾ ತಂಡದ ಗೊರವರ ಕುಣಿತ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಡೊಳ್ಳು ಕುಣಿತ, ಮೈಸೂರಿನ ಮಹಾಲಿಂಗೇಶ್ವರ ಸೇವಾ ಸಮಿತಿಯ ಮೂಡಲ ಪಾಯ ಯಕ್ಷಗಾನ ನೃತ್ಯ ಮನಮೋಹಕವಾಗಿ ಜನರನ್ನು ರಂಜಿಸಿದವು.

ಮಂಡ್ಯ ಜಿಲ್ಲೆ ಪಾಂಡವಪುರದ ತಾಲ್ಲೂಕಿನ ಹೆಗ್ಗಡಹಳ್ಳಿ ಗ್ರಾಮದ ನಂದೀಕೋಲು, ಬಾಗಲಕೋಟೆಯ ಚಿನ್ನಿಕೋಲು, ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದ ನಗಾರಿ ಕುಣಿತ, ವಿಜಯಪುರ ಜಿಲ್ಲೆಯ ಸತ್ತಿಗೆ ಕುಣಿತ, ಬಬಲೇಶ್ವರ ತಾಲ್ಲೂಕಿನ ಕೀಲುಕುದುರೆ, ಉಡುಪಿಯ ಕಂಗಿಲು ನೃತ್ಯ, ಶಿವಮೊಗ್ಗದ ಡೊಳ್ಳು ಕುಣಿತ, ಮೈಸೂರಿನ ಗಣೇಶ ನಗರದ ಸ್ಯಾಕ್ಸೋಪೋನ್, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಝಾಂಜ್ ಫಥಕ್, ನಾಡ ಹಬ್ಬ ದಸರಾದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದವು.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago