ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಬುದ್ದಿಮಾತು
ಮೈಸೂರು: ‘ನಗರದಲ್ಲಿ ಗ್ಯಾಂಗ್ ಅನ್ನೋ ಪದ ಕೇಳಿ ಬರಬಾರದು. ಕೇಳಿ ಬಂದ್ರೆ, ಒದ್ದು ಒಳಗೆ ಕೂರಿಸಬೇಕಾಗುತ್ತದೆ. ನೀವು ಎಲ್ಲಿ, ಹೇಗೆ, ಏನು ಕೆಲಸ ಮಾಡ್ತಾ ಇದ್ದೀರಾ ಎನ್ನುವ ಬಗ್ಗೆ ನಮಗೆ ಮಾಹಿತಿ ಇದೆ. ಶಿಸ್ತಿನಿಂದ ಹೆಂಡತಿ ಮಕ್ಕಳ ಜೊತೆಗೆ ಜೀವನ ಮಾಡಿ. ಇಲ್ಲವಾದ್ರೆ, ಬಾಲ ಕತ್ತರಿಸಬೇಕಾಗುತ್ತೆ…’
ಇದು ನಗರದ ರೌಡಿಶೀಟರ್‌ಗಳಿಗೆ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಪಾಠ ಹೇಳಿದ ಪರಿ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ನಗರದ ಹೆಬ್ಬಾಳ್ ಪೊಲೀಸ್ ಠಾಣೆಯ ಆವರಣದಲ್ಲಿ ನಗರದ ೭೬ ಮಂದಿ ರೌಡಿಶೀಟರ್‌ಗಳನ್ನು ಕರೆ ತಂದು, ಅವರ ಮೇಲಿರುವ ಪ್ರಕರಣಗಳನ್ನು ಕೇಳಿದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ರೌಡಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡರು.
ನಗರದ ಕಾನೂನು-ಸುವ್ಯವಸ್ಥೆಗೆ ಭಂಗ ತರಬಾರದು. ಬಾರು, ರೆಸ್ಟೋರೆಂಟ್ ಕುಡಿದು ನಾಟಕವಾಡೋದು, ಲೇಟ್ ನೈಟ್ ಓಡಾಡೋದು, ಗುಂಪು ಕಟ್ಟಿ ಹರಟೆ ಹೊಡಿಯೋದು ಮಾಡಿದ್ರೆ, ತಕ್ಷಣ ನಮ್ಮವರು ಎತ್ತಿಕೊಂಡು ಬಂದು ಒಳಗೆ ಕೂರಿಸಿಕೊಳ್ತಾರೆ. ನಿಮ್ಮ ಆಟಾಟೋಪಗಳ ಬಗ್ಗೆ ನನಗೆ ಮಾಹಿತಿ ಇದೆ ಎಂದರು.
ನಗರದ ಕಾನೂನು-ಸುವ್ಯವಸ್ಥೆಗೆ ಭಂಗ ತರಬಾರದು. ಬಾರು, ರೆಸ್ಟೋರೆಂಟ್ ಕುಡಿದು ನಾಟಕವಾಡೋದು, ಲೇಟ್ ನೈಟ್ ಓಡಾಡೋದು, ಗುಂಪು ಕಟ್ಟಿ ಹರಟೆ ಹೊಡಿಯೋದು ಮಾಡಿದ್ರೆ, ತಕ್ಷಣ ನಮ್ಮವರು ಎತ್ತಿಕೊಂಡು ಬಂದು ಒಳಗೆ ಕೂರಿಸಿಕೊಳ್ತಾರೆ. ನಿಮ್ಮ ಆಟಾಟೋಪಗಳ ಬಗ್ಗೆ ನನಗೆ ಮಾಹಿತಿ ಇದೆ. ಇಂತ ರೌಡಿ ಚಟುವಟಿಕೆಗಳನ್ನು ಬಿಟ್ಟು ಶಿಸ್ತಿನಿಂದ ಒಳ್ಳೆಯ ದಾರಿಯಲ್ಲಿ ಕುಟುಂಬದವರೊಂದಿಗೆ ಜೀವನ ಮಾಡಿ ಎಂದು ರಮೇಶ್ ಬಿ.ಬಾನೋತ್ ಬುದ್ಧಿ ಹೇಳಿದರು.
ನಗರದ ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತುರಾಜ್ ಮಾತನಾಡಿ, ರೌಡಿಸಂ ಮಾಡೋದು ಮಾತ್ರವಲ್ಲ, ರೌಡಿಯ ರೀತಿಯೂ ಕಾಣಿಸಿಕೊಳ್ಳಬಾರದು. ನೀಟಾಗಿ ಹೇರ್ ಕಟ್ ಮಾಡಿಸಿ, ಶೇವ್ ಮಾಡ್ಸಿ. ಜನರು ಹೆದರಿಕೊಳ್ಳುವ ರೀತಿ ಕಾಣಬೇಡಿ ಎಂದು ತಿಳಿಸಿದರು.
‘ನಾನೂ ರೌಡಿ ನನಗೂ ಟಿಕೆಟ್ ಕೊಡಿ’ ಎಂದು ಈ ಹಿಂದೆ ಬೋರ್ಡ್ ಹಿಡಿದುಕೊಂಡು ಬಿಜೆಪಿಯ ಟಿಕೆಟ್ ಕೇಳಿದ್ದ ಮಂಜು ಅಲಿಯಾಸ್ ಪಾನಿಪುರಿ ಮಂಜನಿಗೆ ‘ಜಾಸ್ತಿ ಬಾಲ ಬಿಚ್ಚಿದ್ರೆ ಏನ್ ಮಾಡ್ಬೇಕು ಅಂತಾ ಗೊತ್ತಿದೆ’ ಎಂದು ರಮೇಶ್ ಬಾನೋತ್ ಎಚ್ಚರಿಕೆ ನೀಡಿದರು.
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ರಮೇಶ್ ಬಾನೋತ್ ಅವರು, ಬೆಳಿಗ್ಗೆಯೇ ಮನೆಗಳನ್ನು ಸರ್ಚ್ ಮಾಡಿ ರೌಡಿಶೀಟರ್‌ಗಳನ್ನು ಕರೆತಂದು ಪರೇಡ್ ಮಾಡಲಾಗಿದೆ. ಮನೆಗಳಲ್ಲಿ ಯಾವುದೇ ವೆಪನ್‌ಗಳು ಸಿಕ್ಕಿಲ್ಲ. ಇವರು ಈಗ ಏನ್ ಮಾಡ್ತಾ ಇದ್ದಾರೆ ಎಂದು ಮಾಹಿತಿ ಕಲೆ ಹಾಕಲಾಗಿದೆ. ಇವರಲ್ಲಿ ಕೆಲವರು ಇನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿದ್ದಾರೆ. ಅವರಿಗೆ ಕಾನೂನು-ಸುವ್ಯವಸ್ಥಗೆ ಭಂಗ ಮಾಡದಂತೆ ಸೂಚನೆ ನೀಡಲಾಗಿದೆ. ಈಗಾಗಲೇ ೭ ಮಂದಿ ರೌಡಿಗಳನ್ನು ಗಡಿಪಾರು ಮಾಡಲಾಗಿದೆ. ಇನ್ನು ೧೮ ಮಂದಿಯನ್ನು ಮಾಡುವುದು ಬಾಕಿ ಇದೆ. ಕಳೆದ ಪರೇಡ್‌ನಲ್ಲಿ ೪೬ ಮಂದಿಯನ್ನು ಪರೇಡ್‌ಗೆ ಕರೆ ತರಲಾಗಿತ್ತು. ಈ ಬಾರಿ ೭೬ ಮಂದಿಯನ್ನು ಕರೆ ತರಲಾಗಿದೆ ಎಂದು ತಿಳಿಸಿದರು.
ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಜಾಹ್ನವಿ, ಎಸಿಪಿಗಳಾದ ಅಶ್ವಥ್ ನಾರಾಯಣ್, ಗಂಗಾಧರ ಸ್ವಾಮಿ, ಗಜೇಂದ್ರ ಪ್ರಸಾದ್, ಸಂದೇಶ್ ಕುಮಾರ್ ಸೇರಿದಂತೆ ನಗರದ ಎಲ್ಲ ಠಾಣೆಗಳ ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಮತ್ತು ಸಬ್ ಇನ್‌ಸ್ಪೆಕ್ಟರ್‌ಗಳು ಹಾಜರಿದ್ದರು.
ಕೋಟ್
ಶೇ.೫೦ರಷ್ಟು ರಿಯಾಯಿತಿ ದಂಡ ಪಾವತಿ ವಿಸ್ತರಣೆಗೆ ಸಂಬಂಧಪಟ್ಟಂತೆ ನಮಗೆ ಆದೇಶ ಬಂದಿಲ್ಲ. ಮೈಸೂರು ನಗರದಲ್ಲಿ ದಂಡ ಹಾಕಿರುವುದು ೧೨೨ ಕೋಟಿ ರೂ., ಇದರಲ್ಲಿ ಪ್ರವಾಸಿಗರ ವಾಹನಗಳು ಸೇರಿವೆ. ಶೇ.೫೦ ಅಂದರೆ ೬೩ ಕೋಟಿ ರೂ. ಬರಬೇಕು. ಈಗ ಫೆ.೧೧ರವರೆಗೂ ೧೨ ಕೋಟಿ ರೂ. ಸಂಗ್ರಹವಾಗಿದೆ. ಅವಧಿ ವಿಸ್ತರಣೆಯಾದರೆ, ಒಳ್ಳೆಯ ರಿಕವರಿಯಾಗಲಿದೆ.
-ರಮೇಶ್ ಬಿ.ಬಾನೋತ್, ನಗರ ಪೊಲೀಸ್ ಆಯುಕ್ತರು.
ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಸಿಎಂಗೆ ಪತ್ರ ಬರೆದಿದ್ದ ಗ್ರಾಮದ ವಿದ್ಯಾರ್ಥಿಗಳು ಹನೂರು: ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿಗಳಿಗೆ ಸಮರ್ಪಕ…
ಎಂ.ನಾರಾಯಣ್ ತಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಜ.೩ರಂದು ಆಕರ್ಷಕ ಬಂಡಿ ಉತ್ಸವ; ೫ರಂದು ರಥೋತ್ಸವ ತಿ.ನರಸೀಪುರ: ಪುರಾಣ ಪ್ರಸಿದ್ಧ ತಾಲ್ಲೂಕಿನ ಮೂಗೂರಿನ…
ಶಾಸಕರ ಸೂಚನೆಯ ಮೇರೆಗೆ ಕ್ಯಾಂಟೀನ್ ಆರಂಭ; ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಂತಸ ಎಚ್.ಡಿ.ಕೋಟೆ: ಕಡಿಮೆ ದರದಲ್ಲಿ ರುಚಿಕರವಾದ ತಿಂಡಿ, ಊಟ…
ವರಹಳ್ಳಿ ಆನಂದ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ೧ರಿಂದ ೭ನೇ ತರಗತಿವರೆಗೆ ಪ್ರವೇಶಾವಕಾಶ ಇರುವ ಸ.ಹಿ.ಪ್ರಾ. ಶಾಲೆ ಮೈಸೂರು: ನೂರಾರು…
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…