ಜಿಲ್ಲೆಗಳು

ಒಂದು ವಾರ ಮೈಸೂರಿನಲ್ಲಿ ದಟ್ಟ ಮಂಜು, ಚಳಿ

ಹವಾಮಾನ ಇಲಾಖೆ ಮುನ್ಸೂಚನೆ

ಗುರುವಾರ-14 ಡಿ.ಸೆ.
ಶುಕ್ರವಾರ-15ಡಿ.ಸೆ.
ಶನಿವಾರ-15 ಡಿ.ಸೆ.
ಭಾನುವಾರ- 16 ಡಿ.ಸೆ.

ಮೈಸೂರು: ಸಾಂಸ್ಕೃತಿಕ ರಾಜಧಾನಿಯಲ್ಲಿ ಅತ್ಯಂತ ಕನಿಷ್ಠ ತಾಪಮಾನ ವರದಿಯಾದ ಬೆನ್ನಲ್ಲೆ ಇದೀಗ ಚಳಿ ಜೊತೆಗೆ ತೀವ್ರ ಮಂಜಿನ ವಾತಾವರಣ ಮೈಸೂರಿನ ಬಹುತೇಕ ಕಡೆಗಳಲ್ಲಿ ಬೆಳಗಿನ ವೇಳೆ ಒಂದು ವಾರ ಪೂರ್ತಿ ಕಂಡು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎರಡು ದಿನ ಅತಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಉಳಿದ ಕೆಲವು ಭಾಗಗಳಲ್ಲಿ ಮಂಜು ದಟ್ಟವಾಗಿತ್ತು. ಈ ಚಳಿ ಹಾಗೂ ಮಂಜು ಕವಿದ ವಾತಾವರಣ ಈ ವಾರಾಂತ್ಯದವರೆಗೂ ಮುಂದುವರಿಯಲಿದೆ. ಈ ವೇಳೆ ಚಳಿ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ತಾಪಮಾನ ಕನಿಷ್ಠ 14ರಿಂದ 16ಡಿಗ್ರಿ ಸೆಲ್ಸಿಯಸ್ ವರೆಗೂ ದಾಖಲಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ತಿಳಿಸಿದೆ.
ಕೆಲವು ದಿನಗಳಿಂದ ನಿರ್ಮಲ, ಸ್ಪಷ್ಟ ಆಕಾಶವಿದ್ದು, ಮಾರುತಗಳು ಇಲ್ಲವಾಗಿದೆ. ಇದು ಭೂಮಿ ತಾಪಮಾನ ಬೇಗ ಕಡಿಮೆಯಾಗಲು ಸಹಾಯವಾಗುತ್ತದೆ. ಇದರಿಂದಲೇ ತಂಪು ವಾತಾವರಣ ಬೇಗ ಪಸರುತ್ತದೆ. ನಗರದ ಕೆಲವೆಡೆ ದಟ್ಟ ಮಂಜು, ಇನ್ನು ಹಲವೆಡೆ ಮಧ್ಯಮ ಪ್ರಮಾಣದಲ್ಲಿ ಮಂಜು ಕಂಡು ಬರುತ್ತಿದೆ. ಜನರು ಭಾನುವಾರದಿಂದ ದಿಢೀರ್ ಹೆಚ್ಚಾದ ಈ ಚಳಿಗೆ ತತ್ತರಿಸಿದ್ದಾರೆ. ಆರೋಗ್ಯ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.
ಈ ವಾರದ ತಾಪಮಾನದ ಅಂಕಿ ಅಂಶಗಳನ್ನು ನೋಡುವುದಾದರೆ ಗುರುವಾರ ಮತ್ತು ಶುಕ್ರವಾರ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್, ಶನಿವಾರ 15 ಡಿಗ್ರಿ ಸೆಲ್ಸಿಯಸ್, ಭಾನುವಾರ 16 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತದೆ. ಈ ಸಂದರ್ಭದಲ್ಲಿ ಗರಿಷ್ಠ ತಾಪಮಾನ ಎಲ್ಲ ಭಾಗದಲ್ಲೂ 30 ಡಿಗ್ರಿ ಸೆಲ್ಸಿಯಸ್ ಇರಲಿದೆ. ಈ ಕನಿಷ್ಠ ತಾಪಮಾನವು ಹೀಗೆ ಮುಂದುವರಿದಿದ್ದೇ ಆದಲ್ಲಿ ಮುಂದಿನ ವಾರವು ನಗರ ನಿವಾಸಿಗಳಿಗೆ ಚಳಿ ಸಂಕಷ್ಟ ಎದುರಾಗಲಿದೆ.

ಎರಡು ದಿನ ಅತ್ಯಧಿಕ ಮಂಜು
ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ (ಜ.20) ಮತ್ತು ಶನಿವಾರ (21)ರಂದು ಭಾರಿ ಪ್ರವಾಣದಲ್ಲಿ ಮಂಜು ಆವರಿಸಲಿದೆ ಎಂದು ಭಾರತೀಯ ಹವಾಮಾಣ ಇಲಾಖೆ ಬೆಂಗಳೂರು ಕೇಂದ್ರ ತಿಳಿಸಿದೆ. ಎರಡು ದಿನ ಬೆಳಿಗ್ಗೆ ವಿಪರೀತ ಮಂಜು ಬೀಳಲಿದೆ. 10ಅಡಿ ದೂರದ ವ್ಯಕ್ತಿ ಕಾಣದಷ್ಟು ತೀವ್ರ ಮಂಜು ಆವರಿಸಲಿದೆ. ಜನರು ಈ ವೇಳೆ ಬೆಚ್ಚಗಿನ ಧಿರಿಸು ಧರಿಸುವ ಮೂಲಕ ಆರೊಗ್ಯ ಕಾಪಾಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

andolanait

Recent Posts

ತಮಿಳುನಾಡು ಚುನಾವಣೆ: ಎರಡು ಕ್ಷೇತ್ರಗಳಿಂದ ನಟ ವಿಜಯ್‌ ಸ್ಪರ್ಧೆ

ಚೆನ್ನೈ: ಏಪ್ರಿಲ್.23ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವುದಾಗಿ ನಟ ವಿಜಯ್‌ ಘೋಷಣೆ ಮಾಡಿದ್ದಾರೆ. ಚೆನ್ನೈನ…

3 mins ago

ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ ಒಂದು ಸಿಲಿಂಡರ್:‌ ಸಚಿವ ಮುನಿಯಪ್ಪ

ಬೆಂಗಳೂರು: ಹಳ್ಳಿಗಳಲ್ಲಿ ಗೃಹ ಬಳಕೆಯವರಿಗೆ 45 ದಿನಕ್ಕೆ ಒಂದು ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು…

21 mins ago

ಹನೂರು| ಕಾಡಾನೆ ದಾಳಿ: ಆಟೋ ಜಖಂ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಂಚಾಪುರ ಗ್ರಾಮದಿಂದ ಒಡೆಯರ ಪಾಳ್ಯ ಗ್ರಾಮಕ್ಕೆ ವ್ಯಾಪಾರ ಮಾಡಲು…

2 hours ago

ಪಶ್ಚಿಮ ಏಷ್ಯಾದಲ್ಲಿ ಹೆಚ್ಚಾದ ಉದ್ವಿಗ್ನತೆ: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಿಷ್ಟು.!

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಭಾರತೀಯ ನಾಗರಿಕರು ಒಗ್ಗಟ್ಟಾಗಿರುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ…

2 hours ago

ಆರೋಗ್ಯ ಕೇಂದ್ರದ ಮುಂಭಾಗವೇ ವಾಹನಗಳ ಪಾರ್ಕಿಂಗ್:‌ ಸಾರ್ವಜನಿಕರಿಗೆ ಕಿರಿಕಿರಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ…

2 hours ago

ಹನೂರು: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ನಿವಾಸಿಗಳಿಂದ ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೋವಿ ಸಮುದಾಯದ ಕಾಲೋನಿಗೆ…

2 hours ago