ಜೆಡಿಎಸ್ ಪಕ್ಷ ಬಿಡುವುದೋ, ಬೇಡವೋ..ಇನ್ನೆರಡು ತಿಂಗಳಲ್ಲಿ ನಿರ್ಧಾರ : ಜಿಟಿ ದೇವೇಗೌಡ

ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡರು ತಾವು ಜೆಡಿಎಸ್‌ ಪಕ್ಷದಲ್ಲಿ ಮುಂದುವರಿಯುವುದೇ ಬೇಡವೇ ಎಂಬುರದ ಬಗ್ಗೆ  ಇನ್ನಡರಡು ತಿಂಗಳಲ್ಲಿ ತಿಳಿಸುವುದಾಗಿ ಇಂದು ಮಾದ್ಯಮಗಳೊಟ್ಟಿಗೆ ಮಾತನಾಡಿದ್ದಾರೆ. ಮುಂದುವರಿದು ಮತದಾರರು ಮತ್ತು ಬೆಂಬಲಿಗರೊಂದಿಗೆ ಚರ್ಚಿಸಿದ ನಂತರ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಹೇಳಿದರು.

 

ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕ ಸಾ.ರಾ.ಮಹೇಶ್ ಅವರ ರಾಜ್ಯ ನಾಯಕನಾಗುವ ಸಾಮರ್ಥ್ಯದ ಬಗ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡರು, ‘ಮಹೇಶ್ ಅವರು ರಾಜ್ಯ ಮಟ್ಟದ ನಾಯಕ ಎಂದು ನಾನು ಈಗಾಗಲೇ ಹೇಳಿದ್ದೆ. ಮುಂದಾಳತ್ವ ವಹಿಸುವುದರಲ್ಲಿ ತಪ್ಪೇನಿಲ್ಲ. ನಾನು ಅವರನ್ನು ಪ್ರೋತ್ಸಾಹಿಸುತ್ತೇನೆ ಎಂದು ಹೇಳಿದ್ದಾರೆ.