ಜಿಲ್ಲೆಗಳು

ಡಿ.5ರಂದು ವಿದ್ಯುತ್ ಗುತ್ತಿಗೆದಾರರಿಂದ ಅನಿರ್ದಿಷ್ಟ ಮುಷ್ಕರ

ಚಾಮರಾಜನಗರ: ಸಣ್ಣ ಕಾಮಗಾರಿಗಳನ್ನು ಕ್ರೋಢೀಕರಿಸಿ ಬೃಹತ್ ಟೆಂಡರ್ ನೀಡುವುದರ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಡಿ.೫ ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ನೂರಾರು ಗುತ್ತಿಗೆದಾರರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಉಮ್ಮತ್ತೂರು ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರದ ಆದೇಶದಂತೆ ೧ ರಿಂದ ೫ ಲಕ್ಷ ರೂ.ವರೆಗಿನ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು. ಬೆಳಕುಯೋಜನೆಯ ದರವನ್ನು ಬೆಸ್ಕಾಂ ಮಾದರಿಯಲ್ಲಿ ಎಸ್ಕಾಂಗಳಿಗೂ ನೀಡಬೇಕು. ಕಾಮಗಾರಿ ನಿರ್ವಹಿಸುವ ಬಿಲ್‌ಗಳಿಗೆ ತ್ವರಿತವಾಗಿ ಹಣಕಾಸು ಮಂಜೂರು ಮಾಡಬೇಕು. ಶೀಘ್ರ ವಿದ್ಯುತ್ ಯೋಜನೆಯಲ್ಲಿ ಕಳೆದ ಒಂದು ವರ್ಷದಿಂದ ಅನುದಾನ ನೀಡದೆ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ತೊಂದರೆಯಾಗಿದ್ದು, ಪ್ರತಿಭಟನೆ ವೇಳೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಅನಧಿಕೃತ ಬಡಾವಣೆಗಳಿಗೆ ಅಭಿವೃದ್ದಿ ಶುಲ್ಕ ನೆಪದಲ್ಲಿ ಹೆಚ್ಚುವರಿ ಹಣ ಸಂಗ್ರಹಿಸಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದ್ದು ಹಿಂದಿನ ಆದೇಶದಂತೆ ಹಣ ಸಂಗ್ರಹಿಸಬೇಕು. ಎಲ್ಲಾ ಎಸ್ಕಾಂಗಳಲ್ಲಿ ಏಕರೂಪ ನೀತಿಯಲ್ಲಿ ಕೆಇಆರ್‌ಸಿ ನಿಯಮ ಪಾಲಿಸಬೇಕು. ಕ್ಲಾಸ್-೨ ನಿಂದ ಕ್ಲಾಸ್-೧ಗೆ ಏರಿಸಲು ಅನುಭವದ ಆಧಾರ ಮೇಲೆ ಲೈಸನ್ಸ್ ನೀಡಬೇಕು. ಸರ್ವರ್ ಮತ್ತು ಮೀಟರ್‌ಗಳ ಸಮಸ್ಯೆಯನ್ನು ಬಗೆಹರಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ನಡೆಸಲಾಗುತ್ತಿದೆ ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾನುಪ್ರಕಾಶ್, ಉಪಾಧ್ಯಕ್ಷ ಅನ್ಸರ್ ಅಲಿಖಾನ್, ಖಜಾಂಚಿ ಸಂಪತ್ ಕುಮಾರ್, ಸಂಘಟನಾ ಕಾರ್ಯದರ್ಶಿ ರವಿಕುಮಾರ್, ತಾಲ್ಲೂಕು ಸಹ ಕಾರ್ಯದರ್ಶಿ ಕಿರಗಸೂರು ಬಸವಣ್ಣ, ಮಹದೇವು ಹಾಜರಿದ್ದರು.

andolanait

Recent Posts

ಅಮೆರಿಕ-ಇರಾನ್‌ ಕದನ ವಿರಾಮ | ಶಾಂತಿ ಮಾತುಕತೆಗೆ ಪಾಕ್‌ಗೆ ಬಂದಿಳಿದ ಇರಾನ್‌ ನಿಯೋಗ

ಇಸ್ಲಾಮಾಬಾದ್ : ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಇಸ್ಲಾಮಾಬಾದ್‌ನಲ್ಲಿ ಆಯೋಜಿಸಲಾಗಿರುವ ಐತಿಹಾಸಿಕ ಶಾಂತಿ ಮಾತುಕತೆಗೆ ಇರಾನ್…

12 mins ago

ಬೆಳಗಾವಿಯ ನಗರಾಭಿವೃದ್ಧಿ ಕೋಶದ ಎಇಇ ಮನೆಯಲ್ಲಿ 14 ಕೋಟಿ ಅಕ್ರಮ ಆಸ್ತಿ ಪತ್ತೆ

– 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 3 ಕೋಟಿ ಡೆಪಾಸಿಟ್ ಪತ್ತೆ ಬೆಳಗಾವಿ : ಇಲ್ಲಿನ ನಗರಾಭಿವೃದ್ಧಿ…

42 mins ago

ವಿರಾಜಪೇಟೆ ಐತಿಹಾಸಿಕ ಕೆರೆಗಳ ಒತ್ತುವರಿ ಆರೋಪ

ಕಾಂಗೀರ ಬೋಪಣ್ಣ ವಿರಾಜಪೇಟೆ : ಪುರಸಭೆ ವ್ಯಾಪ್ತಿಗೆ ಒಳಪಡುವ ೨ ಐತಿಹಾಸಿಕ ಕೆರೆಗಳು ಒತ್ತುವರಿಯಾಗಿರುವ ಆರೋಪ ಕೇಳಿ ಬಂದಿದ್ದು, ಈ…

2 hours ago

ಪಿಯುಸಿ : ಗುಂಡ್ಲುಪೇಟೆಯಲ್ಲಿ ಬಾಲಕಿಯರೇ ಮೇಲುಗೈ

ರೈತರು, ಕೂಲಿ ಕಾರ್ಮಿಕರ ಮಕ್ಕಳೇ ಟಾಪರ್ಸ್‌ ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ : ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ತಾಲ್ಲೂಕಿನ…

3 hours ago

ಮೈಸೂರು ಜಿಲ್ಲೆಯ 147 ಗ್ರಾಪಂಗಳೀಗ ಕ್ಷಯ ಮುಕ್ತ!

ಡಿಎಚ್‌ಒ ಡಾ.ಪಿ.ಸಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕ್ಷಯರೋಗ ಮುಕ್ತ ಗ್ರಾಪಂ ಅಭಿಯಾನ ಮೈಸೂರು : ಜಿಲ್ಲೆಯಲ್ಲಿ ಕ್ಷಯ ರೋಗ ಮತ್ತು ಸಾವಿನ ಪ್ರಮಾಣ…

3 hours ago

ಓದುಗರ ಪತ್ರ | ಜನಗಣತಿ ಪಾರದರ್ಶಕ,ನಿಖರವಾಗಿರಲಿ. . .

ಭಾರತದ ಜನಗಣತಿ ಕಾಯ್ದೆ ೧೯೪೮ರ ಪ್ರಕಾರ ಈ ಬಾರಿಯ ಜನಗಣತಿ ೨೦೨೭ರ ಕಾರ್ಯವು ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಈ ಜನಗಣತಿಯು…

3 hours ago