ಜಿಲ್ಲೆಗಳು

ದಸರಾ ವೇಳೆ ಮೈಸೂರಿಗೆ ಭೇಟಿ ನೀಡಲಿದೆ ಭಾರತ್‌ ಜೋಡೋ ಯಾತ್ರೆ

ಮೈಸೂರು : ಕಾಂಗ್ರೆಸ್‌ ಪಕ್ಷದ ವತಿಯಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ  ಹಮ್ಮಿಕೊಂಡಿರುವ ಭಾರತ್‌ ಜೋಡೋ ಪಾದ ಯಾತ್ರೆಯು ಸೆಪ್ಟೆಂಬರ್ 30 ರಿಂದ ಕರ್ನಾಟಕದಲ್ಲಿ ಆರಂಭವಾಗಲಿದೆ.

ಭಾರತ್‌ ಜೋಡೋ ಪಾದ ಯಾತ್ರೆ

ಅಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮೂಲಕ ರಾಜ್ಯವನ್ನು ಪ್ರವೇಶ ಮಾಡಲಿದೆ.

ಗುಂಡ್ಲುಪೇಟೆ

ಎಂಐಟಿ ಕಾಲೇಜ್‌ ನಲ್ಲಿ ವಾಸ್ತವ್ಯ
30ನೇ ತಾರೀಖಿನಂದು ಅಂದು ಬೆಂಡಗಳ್ಳಿ ಗ್ರಾಮದ ಮೂಲಕ ಚಾಮರಾಜನಗರ ಜಿಲ್ಲೆಯ ಬೇಗೂರು ತಲುಪಲಿದ್ದು, ತ್ರಿಪುರ ಸಂಭಾಂಗಣದ ಮುಂದಿನ ಮೈದಾನದಲ್ಲಿ ರಾತ್ರಿ ತಂಗಲಿದೆ. ಬೆಳಗ್ಗೆ ಅಲ್ಲಿಂದ ಆರಂಭವಾಗುವ ಪಾದಯಾತ್ರೆ ಕಳಲೆಗೇಟ್ ಮೂಲಕ ತಾಂಡವಪುರ ಗ್ರಾಮದ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ.  ನಂತರ ರಾತ್ರಿ ಎಂಐಟಿ (MIT) ಕಾಲೇಜಿನ ಮುಂಭಾಗದಲ್ಲಿ ಉಳಿಯಲಿದೆ.

 


ಬದನವಾಳು ಖಾದಿ ಗ್ರಾಮೋದ್ಯಮ ಕೇಂದ್ರಕ್ಕೆ ಭೇಟಿ 
ಭಾರತ್‌ ಜೋಡೋ ಪಾದ ಯಾತ್ರೆಯ ( ಅಕ್ಟೋಬರ್‌ 1 ಮತ್ತು 2ನೇ ತಾರೀಖು) 3ನೇ ದಿನ ಮೈಸೂರಿನ ಬದನವಾಳು ಖಾದಿ ಗ್ರಾಮೋದ್ಯಮ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ರಾಹುಲ್‍ಗಾಂಧಿ ಪೂಜೆ ಸಲ್ಲಿಸಲಿದ್ದಾರೆ.
ನಂತರ ಕಡಕೋಳ ಕೈಗಾರಿಕಾ ಪ್ರದೇಶದಿಂದ ಪಾದಯಾತ್ರೆ ಮುಂದುವರೆಯಲಿದ್ದು, ಮೈಸೂರು ನಗರದ ಅರಮನೆ ಮೈದಾನದ ಎದುರಿನ ವಸ್ತು ಪ್ರದರ್ಶನದ ಆವರಣದಲ್ಲಿ ತಂಗಲಿದೆ.

ಅ.3ರಂದು ಅಂದರೆ ನಾಲ್ಕನೆ ದಿನ ಮೈಸೂರಿನಿಂದ ಯಾತ್ರೆ ಆರಂಭಗೊಳ್ಳಲಿದೆ ಆ ದಿನಗಳಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಗೊಂಡಿರುತ್ತದೆ. ಇಲ್ಲಿಂದ ಹೊರಟ ಯಾತ್ರೆಯು ಕೆನಲು ಗ್ರಾಮದ ವನಜಸುಂದರ ಸಭಾಂಗಣದಲ್ಲಿ ಉಪಾಹಾರ ಸೇವಿಸಿ ಟಿ.ಎಸ್.ಛತ್ರ ಗ್ರಾಮದಿಂದ ಮಂಡ್ಯ ಪ್ರವೇಶಿಸಲಿದೆ. ರಾತ್ರಿ ಅಲ್ಲಿನ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಉಳಿದುಕೊಳ್ಳಲಿದೆ.


ಅ.4 ಮತ್ತು 5ರಂದು ಪಾದಯಾತ್ರೆಗೆ ವಿಶ್ರಾಂತಿ ಇದ್ದು, ಏಳನೆ ದಿನ ಮಂಡ್ಯದ ಶ್ರೀ ಮಹದೇಶ್ವರ ದೇವಸ್ಥಾನದಿಂದ ಪುನರಾರಂಭಗೊಳ್ಳಲಿದೆ.  ನಾಗಮಂಗಲದ ಚೌಡೇನಹಳ್ಳಿ ಗೇಟ್‍ನಿಂದ ನಡೆಯುವ ಪಾದಯಾತ್ರೆ ರಾತ್ರಿ ಎಂ.ಹೊಸೂರು ಗೇಟ್‍ನ ಬರಮದೇವರಹಳ್ಳಿಯಲ್ಲಿ ತಂಗಲಿದೆ. ಎಂಟನೆ ದಿನ ವಿಸ್ಡಂ ಶಾಲೆಯಿಂದ ಆರಂಭಗೊಂಡು ನಾಗಮಂಗಲದ ಅಂಚೆಚಿಟ್ಟನಹಳ್ಳಿಯಿಂದ ಮುಂದುವರೆದು ಆದಿಚುಂಚನಗಿರಿ ಮಠದ ಬೇಳ್ಳುರು ಟೌನ್‍ನಲ್ಲಿ ರಾತ್ರಿ ವಿಶ್ರಾಂತಿ ಪಡೆಯಲಿದೆ.

 

andolanait

Recent Posts

ದಸರಾ ವೆಬ್‌ಸೈಟ್‌ ಲೋಕಾರ್ಪಣೆ : ಅ.11ರಿಂದ 21ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಮಾಹಿತಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿ ಕೊಡಲು ದಸರಾ-೨೦೨೬ರ…

12 hours ago

ತಮಿಳುನಾಡಿಗೆ ಕಾವೇರಿ ನೀರು: 3 ಸಾವಿರ ಕ್ಯೂಸೆಕ್‌ಗೆ ಇಳಿಸಲು ರಾಜ್ಯ ಸರ್ಕಾರ ಮನವಿ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 6 ಸಾವಿರ ಕ್ಯೂಸೆಕ್‌ ನೀರನ್ನು 3 ಸಾವಿರ…

14 hours ago

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ: ಸೆಪ್ಟೆಂಬರ್.18 ರಿಂದ ಅಮಿತ್ ಶಾ 2 ದಿನ ರಾಜ್ಯ ಪ್ರವಾಸ ‌

ಹುಬ್ಬಳ್ಳಿ: ಸೆಪ್ಟೆಂಬರ್ 18ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 18ರ…

14 hours ago

ರಾಮನಗುಡ್ಡ ಕೆರೆ ಭರ್ತಿ : ಕೋಡಿ ಬಿದ್ದು ಹರಿದ ನೀರು

ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…

18 hours ago

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

23 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

23 hours ago