ಮೈಸೂರು : ಕಾಂಗ್ರೆಸ್ ಪಕ್ಷದ ವತಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದ ಯಾತ್ರೆಯು ಸೆಪ್ಟೆಂಬರ್ 30 ರಿಂದ ಕರ್ನಾಟಕದಲ್ಲಿ ಆರಂಭವಾಗಲಿದೆ.
ಅಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮೂಲಕ ರಾಜ್ಯವನ್ನು ಪ್ರವೇಶ ಮಾಡಲಿದೆ.
ಎಂಐಟಿ ಕಾಲೇಜ್ ನಲ್ಲಿ ವಾಸ್ತವ್ಯ
30ನೇ ತಾರೀಖಿನಂದು ಅಂದು ಬೆಂಡಗಳ್ಳಿ ಗ್ರಾಮದ ಮೂಲಕ ಚಾಮರಾಜನಗರ ಜಿಲ್ಲೆಯ ಬೇಗೂರು ತಲುಪಲಿದ್ದು, ತ್ರಿಪುರ ಸಂಭಾಂಗಣದ ಮುಂದಿನ ಮೈದಾನದಲ್ಲಿ ರಾತ್ರಿ ತಂಗಲಿದೆ. ಬೆಳಗ್ಗೆ ಅಲ್ಲಿಂದ ಆರಂಭವಾಗುವ ಪಾದಯಾತ್ರೆ ಕಳಲೆಗೇಟ್ ಮೂಲಕ ತಾಂಡವಪುರ ಗ್ರಾಮದ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ. ನಂತರ ರಾತ್ರಿ ಎಂಐಟಿ (MIT) ಕಾಲೇಜಿನ ಮುಂಭಾಗದಲ್ಲಿ ಉಳಿಯಲಿದೆ.
ಬದನವಾಳು ಖಾದಿ ಗ್ರಾಮೋದ್ಯಮ ಕೇಂದ್ರಕ್ಕೆ ಭೇಟಿ
ಭಾರತ್ ಜೋಡೋ ಪಾದ ಯಾತ್ರೆಯ ( ಅಕ್ಟೋಬರ್ 1 ಮತ್ತು 2ನೇ ತಾರೀಖು) 3ನೇ ದಿನ ಮೈಸೂರಿನ ಬದನವಾಳು ಖಾದಿ ಗ್ರಾಮೋದ್ಯಮ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ರಾಹುಲ್‍ಗಾಂಧಿ ಪೂಜೆ ಸಲ್ಲಿಸಲಿದ್ದಾರೆ.
ನಂತರ ಕಡಕೋಳ ಕೈಗಾರಿಕಾ ಪ್ರದೇಶದಿಂದ ಪಾದಯಾತ್ರೆ ಮುಂದುವರೆಯಲಿದ್ದು, ಮೈಸೂರು ನಗರದ ಅರಮನೆ ಮೈದಾನದ ಎದುರಿನ ವಸ್ತು ಪ್ರದರ್ಶನದ ಆವರಣದಲ್ಲಿ ತಂಗಲಿದೆ.
ಅ.3ರಂದು ಅಂದರೆ ನಾಲ್ಕನೆ ದಿನ ಮೈಸೂರಿನಿಂದ ಯಾತ್ರೆ ಆರಂಭಗೊಳ್ಳಲಿದೆ ಆ ದಿನಗಳಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಗೊಂಡಿರುತ್ತದೆ. ಇಲ್ಲಿಂದ ಹೊರಟ ಯಾತ್ರೆಯು ಕೆನಲು ಗ್ರಾಮದ ವನಜಸುಂದರ ಸಭಾಂಗಣದಲ್ಲಿ ಉಪಾಹಾರ ಸೇವಿಸಿ ಟಿ.ಎಸ್.ಛತ್ರ ಗ್ರಾಮದಿಂದ ಮಂಡ್ಯ ಪ್ರವೇಶಿಸಲಿದೆ. ರಾತ್ರಿ ಅಲ್ಲಿನ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಉಳಿದುಕೊಳ್ಳಲಿದೆ.
ಅ.4 ಮತ್ತು 5ರಂದು ಪಾದಯಾತ್ರೆಗೆ ವಿಶ್ರಾಂತಿ ಇದ್ದು, ಏಳನೆ ದಿನ ಮಂಡ್ಯದ ಶ್ರೀ ಮಹದೇಶ್ವರ ದೇವಸ್ಥಾನದಿಂದ ಪುನರಾರಂಭಗೊಳ್ಳಲಿದೆ. ನಾಗಮಂಗಲದ ಚೌಡೇನಹಳ್ಳಿ ಗೇಟ್‍ನಿಂದ ನಡೆಯುವ ಪಾದಯಾತ್ರೆ ರಾತ್ರಿ ಎಂ.ಹೊಸೂರು ಗೇಟ್‍ನ ಬರಮದೇವರಹಳ್ಳಿಯಲ್ಲಿ ತಂಗಲಿದೆ. ಎಂಟನೆ ದಿನ ವಿಸ್ಡಂ ಶಾಲೆಯಿಂದ ಆರಂಭಗೊಂಡು ನಾಗಮಂಗಲದ ಅಂಚೆಚಿಟ್ಟನಹಳ್ಳಿಯಿಂದ ಮುಂದುವರೆದು ಆದಿಚುಂಚನಗಿರಿ ಮಠದ ಬೇಳ್ಳುರು ಟೌನ್‍ನಲ್ಲಿ ರಾತ್ರಿ ವಿಶ್ರಾಂತಿ ಪಡೆಯಲಿದೆ.
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಮಾದಾಪಟ್ಟಣ ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು…
ಬೆಂಗಳೂರು: ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಜೆಡಿಎಸ್ ಲೇವಡಿ ಮಾಡಿದೆ. ಪ್ರಶ್ನೆ ಕೇಳುವ…
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮಾಧ್ಯಮಗಳಿಗೆ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನಿರ್ಬಂಧ ಹೇರಲಿದೆ. ಈ ಕುರಿತು ಸರ್ಕಾರದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ…
ಚೆನ್ನೈ: ನೆರೆಯ ರಾಜ್ಯ ತಮಿಳುನಾಡಿನಲ್ಲಿ ಕನ್ನಡ ಬಾವುಟ ಹಾಕಿದ್ದ ವಾಹನಗಳನ್ನು ತಡೆದು ತಮಿಳು ಪುಂಡರು ಕನ್ನಡಿಗರ ಮೇಲೆ ದರ್ಪ ಮೆರೆದಿರುವ…