ಜಿಲ್ಲೆಗಳು

ದಸರಾ ಕುಸ್ತಿ ಪಂದ್ಯಾವಳಿಗೆ ಸಾಕ್ಷಿ ಮಲಿಕ್ ಅತಿಥಿ

ಪಾಯಿಂಟ್ ಕುಸ್ತಿ, ಪಂಜ ಕುಸ್ತಿ ಪಂದ್ಯಾವಳಿ ಆಯೋಜನೆ

ಮೈಸೂರು: ಸೆ.೨೬ರಿಂದ ಅ.೨ರವರೆಗೆ ದಸರಾ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ದಸರಾ ಕಂಠೀರವ, ದಸರಾ ಕೇಸರಿ, ದಸರಾ ಕಿಶೋರಿ, ದಸರಾ ಕುಮಾರ್, ದಸರಾ ಕಿಶೋರ ಪ್ರಶಸ್ತಿಗಳಿಗೆ ಪಾಯಿಂಟ್ ಕುಸ್ತಿಗಳನ್ನು ನಡೆಸಲಾಗುತ್ತದೆ ಎಂದು ದಸರಾ ಕುಸ್ತಿ ಉಪ ಸಮಿತಿ ಅಧ್ಯಕ್ಷ ಕೆ.ದೇವರಾಜ್, ಉಪ ವಿಶೇಷಾಧಿಕಾರಿ ಬಿ.ಎನ್.ನಂದಿನಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸೆ.೨೬ರಂದು ೩.೩೦ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ.

ಉತ್ತಮ ಮೈಸೂರು ನಗರನಾಡ ಕುಸ್ತಿ ಪಟು ಒಬ್ಬರಿಗೆ ಮೇಯರ್ ಕಪ್, ಓರ್ವ ಮೈಸೂರು ಗ್ರಾಮಾಂತರ ನಾಡಕುಸ್ತಿ ಪಟುವಿಗೆ ಮಹಾರಾಜರ ಒಡೆಯರ್ ಕಪ್, ರಾಜ್ಯದ ಉತ್ತಮ ನಾಡ ಕುಸ್ತಿಪಟುವಿಗೆ ಸಾಹುಕಾರ್ ಚನ್ನಯ್ಯ ಕಪ್ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸೆ.೨೯ರಂದು ಕರ್ನಾಟಕ ರಾಜ್ಯ ಪಂಜ ಕುಸ್ತಿ ಸಂಘದಿಂದ ರಾಜ್ಯಮಟ್ಟದ ಪುರುಷರು ಮತ್ತು ಮಹಿಳೆಯರು, ವಿಶೇಷಚೇತನರ ಪಂಜ ಕುಸ್ತಿ ಪಂದ್ಯಾವಳಿ ನಡೆಯಲಿದೆ. ವಿಜೇತ ಮಹಿಳಾ ಪಂಜಕುಸ್ತಿ ಪಟುವಿಗೆ ಮೈಸೂರು ದಸರಾ ಕುಮಾರಿ ಪ್ರಶಸ್ತಿ, ವಿಜೇತ ಪುರುಷ ಕುಸ್ತಿಪಟುವಿಗೆ ಮೈಸೂರು ದಸರಾ ಶ್ರೀ ಪ್ರಶಸ್ತಿ, ವಿಶೇಷಚೇತನ ಮಹಿಳಾ ಪಂಜ ಕುಸ್ತಿ ಪಟುವಿಗೆ ದಸರಾ ನವಚೇತನ ತಾರೆ ಪ್ರಶಸ್ತಿ, ವಿಶೇಷಚೇತನ ಪುರುಷ ಪಂಜ ಕುಸ್ತಿಪಟುವಿಗೆ ವಿಶೇಷಚೇತನ-೨೦೨೨ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮೈಸೂರು ವಿಭಾಗ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಪುರುಷ ಕುಸ್ತಿ ಪಟುಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ದಸರಾ ಕುಮಾರ ಪ್ರಶಸ್ತಿ, ಅರ್ಧ ಕೆಜಿ ತೂಕದ ಬೆಳ್ಳಿ ಗದೆಯನ್ನು ನೀಡಲಾಗುತ್ತದೆ.
ಈ ವರ್ಷದ ಆಕರ್ಷಣೆಯಾಗಿ ರಾಷ್ಟ್ರಮಟ್ಟದಲ್ಲಿ ಹೆಸರಾಗಿರುವ ಕುಸ್ತಿಪಟು ಹಾಗೂ ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲ್ಲಿಕ್ ಅವರನ್ನು ಸೆ.೨೯ರಂದು ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದು ವಿವರಿಸಿದರು. ಉಪಾಧ್ಯಕ್ಷರಾದ ವೇದರಾಜ್,ಮಹೇಶ್‌ರಾಜೇ ಅರಸ್, ಕಾರ್ಯದರ್ಶಿ ಎಸ್.ಜೆ.ಹರ್ಷವರ್ಧನ ಹಾಜರಿದ್ದರು.

andolanait

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

11 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

16 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

20 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

20 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

20 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

23 hours ago