ಮಂಡ್ಯದ ಮೇಲುಕೋಟೆಯ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪದೇಪದೇ ಅಮೆರಿಕಾಕ್ಕೆ ತೆರಳುತ್ತಾರೆ ಎಂದು ಕ್ಷೇತ್ರದ ಮತದಾರರು ಕೆಲ ದಿನಗಳ ಹಿಂದೆ ಅಸಮಾಧಾನ ಹೊರಹಾಕಿದ್ದರು. ಶಾಸಕನಾಗಿ ಆಯ್ಕೆಯಾದ ಮೇಲೆ ನಾಲ್ಕನೇ ಬಾರಿಗೆ ಅಮೆರಿಕಾಗೆ ತೆರಳಿದ್ದಾಗ ಮಾಧ್ಯಮದಲ್ಲಿಯೂ ಸುದ್ದಿಯಾಗಿತ್ತು.
ಈ ಕುರಿತು ಇದೀಗ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದ್ದು ಶಾಸಕನಾಗಿ ಆಯ್ಕೆಯಾದ ಬಳಿಕ ನಾಲ್ಕು ಬಾರಿ ಅಮೆರಿಕಾಕ್ಕೆ ಹೋಗಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೇ ಹೀಗೆ ಮಾಡುವುದು ತಪ್ಪೆಂದು ತಿಳಿದಿದೆ, ನನ್ನ ಕೆಲ ವೈಯಕ್ತಿಕ ಸಮಸ್ಯೆಗಳಿದ್ದು ಅವುಗಳನ್ನು ಪರಿಹರಿಸಿಕೊಳ್ಳಲು ಹೋಗುತ್ತಿದ್ದೇನೆ ಅಷ್ಟೇ ಎಂದೂ ಸಹ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದ್ದಾರೆ. ಈ ಮೂಲಕ ಕಂಪನಿ ಕೆಲಸದ ನಿಮಿತ್ತ ಅಮೆರಿಕಾಗೆ ತೆರಳುತ್ತಿಲ್ಲ ಎಂಬ ಸ್ಪಷ್ಟನೆಯನ್ನು ನೀಡಿದರು.
ಅಮೆರಿಕಾದಲ್ಲಿ ತನ್ನ ಹೆಂಡತಿ ಹಾಗೂ ಮಕ್ಕಳಿದ್ದು ಅಲ್ಲಿಗೆ ತೆರಳಬೇಕಾಗಿರುವುದು ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳಲಿದ್ದೇನೆ. ನಾನು ಅಮೆರಿಕಾಗೆ ಹೋಗುತ್ತಿರುವುದನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.
ಅಲ್ಲದೇ ನಾನು ಅಮೆರಿಕಾಗೆ ತೆರಳಿದರೂ ಇಲ್ಲಿ ಕೆಲಸ ಮಾಡಲು ತಂಡವನ್ನು ಇಟ್ಟಿದ್ದೇನೆ. ಇಲ್ಲಿ ನನ್ನ ತಂಡದವರು ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಫೋನ್ ಮಾಡಿ ಹೇಳಿದ್ರೆ ಮಾತ್ರ ಕೆಲಸ ಆಗೋದು. ಜನರು ನನ್ನ ಬಳಿ ಸಮಸ್ಯೆ ಹೇಳಿಕೊಳ್ಳುತ್ತಾರೆ. ನಾನು ಅದನ್ನು ಅಧಿಕಾರಿಗಳಿಗೆ ತಿಳಿಸಿ ಮಾಡಿಸುತ್ತೇನೆ. ಜನರ ಸಮಸ್ಯೆಗಳು ಬೇಗ ಪರಿಹಾರ ಆಗಬೇಕು. ಶಾಸಕನ ಬಳಿ ಬರುವುದಕ್ಕಿಂತ ಸರ್ಕಾರಿ ಕಚೇರಿಗಳ ಬಳಿ ಹೋಗಬೇಕು. ವ್ಯವಸ್ಥೆ ಬದಲಾಗಬೇಕು ಎಂದು ಅವರು ಹೇಳಿದರು.
ಇನ್ನೂ ಮುಂದುವರಿದು ಮಾತನಾಡಿದ ಅವರು ನಾನು ಈಗಾಗಲೇ ನನ್ನ ಕಂಪನಿಗಳನ್ನು ಮಾರಾಟ ಮಾಡಿದ್ದೇನೆ. 2021ರ ಮೇ 21ರಂದು ಕಂಪನಿಗಳು ಮಾರಾಟವಾಗಿವೆ. ಗೂಗಲ್‌ನಲ್ಲಿ ಚೆಕ್ ಮಾಡಿ ನೋಡಿ. ಈಗ ನನಗೂ ಆ ಕಂಪನಿಗಳಿಗೂ ಸಂಬಂಧವಿಲ್ಲ. ಮೈಸೂರಿನಲ್ಲೂ ನನ್ನ ಆಫೀಸ್ ಇತ್ತು. ಈಗ ಅದು ಅದರ ಮಾಲೀಕರ ಹೆಸರು ಬೇರೆ ಇದೆ ಎಂದು ತಿಳಿಸಿದರು.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…