ಜಿಲ್ಲೆಗಳು

ದಲಿತರು ಸಹ ಮನುಷ್ಯರೆಂದು ಗುರುತಿಸಲು ಎಲ್ಲಿವರೆಗೆ ಕಾಯಬೇಕು : ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ

ಮೈಸೂರು: ದಲಿತರು ಸಹ ಮನುಷ್ಯ ಎಂದು ಗುರುತಿಸಲು ಎಲ್ಲಿವರೆಗೆ ಕಾಯಬೇಕು. ಈ ಕಾಯುವಿಕೆಗೆ ಸದ್ಯಕ್ಕೆ ಕೊನೆ ಇಲ್ಲ. ಇದು ಬಹಳಷ್ಟು ಜನರಿಗೆ ಇದು ಕಣ್ಣಿಗೆ ಕಾಣುವುದಿಲ್ಲ, ಮನಸ್ಸಿಗೂ ತಾಗುತ್ತಿಲ್ಲ ಎಂದು ಸಾಹಿತಿ, ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಹೇಳಿದರು.

ನಗರದ ದಿ ಇನ್‌ಸ್ಟಿಟ್ಯೂಷ್ ಆಫ್ ಇಂಜಿನಿಯರ್‌ ಸಭಾಂಗಣದಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಸೋಮವಾರ ಆಂಜಿಸಿದ್ದ ಡಾ.ಎಲ್.ಹನುಮಂತಯ್ಯ ಅವರ ಆಂ ೧೦೧ ಕವಿತೆಗಳ ಸಂಕಲನ ‘ಅಂತರಾಳದ ಒಳದನಿಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾತಿ ಸಮಾಜಕ್ಕೆ ಅಂಟಿದೆ. ಕವಚ ತೆಗೆದರೆ ಕರ್ಣ ಸಾಂತ್ತಾನೆ. ಆದರೆ, ಕೆಳಸ್ತರದವರು ಸತ್ತರೂ ಜಾತಿಯ ಕವಚ ತೆಗೆಯಲು ಆಗಲ್ಲ. ಕೆಲವರು ಜಾತಿ ಕವಚ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಂಡು ಮುಂದೆ ಬಂದಿದ್ದಾರೆ. ದಲಿತರಿಗೆ ಮಾತ್ರ ‘ಏಕೆ ಈ ಜಾತಿಯಲ್ಲಿ ಹುಟ್ಟಿದ್ದವು’ ಎಂಬ ಅವಮಾನ ನಿತ್ಯವೂ ಕಾಡುತ್ತಿದೆ. ಈಗ ಜಾತಿ ನಿರ್ಮೂಲನೆ ಕುರಿತು ಬರೀ ಬಾಯಿ ಮಾತು, ಭಾಷಣವಾಗಿ ಉಳಿದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

೨೦೨೨ರಲ್ಲೂ ಜಾತಿ ಅವಮಾನ ಮುಂದುವರಿದಿದೆ. ದಲಿತ ಮಹಿಳೆ ನೀರು ಕುಡಿದರು ಎಂಬ ಕಾರಣಕ್ಕೆ ಟ್ಯಾಂಕ್‌ನಲ್ಲಿದ್ದ ನೀರನ್ನು ಖಾಲಿ ಮಾಡಿ ಗಂಜಲ ಹಾಕಿ ಶುದ್ಧೀಕರಣ ಮಾಡಿರುವ ಘಟನೆ ಈಗಲೂ ಜಾತಿ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ತಾಣ ಉದಾಹರಣೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದಲಿತರು ಸಹ ಮನುಷ್ಯ ಎಂದು ಗುರುತಿಸಲು ಎಲ್ಲಿವರೆಗೆ ಕಾಯಬೇಕು. ಈ ಕಾಯುವಿಕೆಗೆ ಸದ್ಯಕ್ಕೆ ಕೊನೆ ಇಲ್ಲ. ಜಾತಿಯ ಕಾರಣಕ್ಕೆ ಲಕ್ಷಾಂತರ ಜನರು ನರಳಾಡುತ್ತಿದ್ದಾರೆ. ಆದರೆ, ಬಹಳಷ್ಟು ಜನರಿಗೆ ಇದು ಕಣ್ಣಿಗೆ ಕಾಣುತ್ತಿಲ್ಲ. ಮನಸ್ಸಿಗೂ ತಾಗುತ್ತಿಲ್ಲ. ಅವರು ತಮ್ಮ ಜೀವನದಲ್ಲೇ ಸುಖವಾಗಿ ಜೀವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ನಮ್ಮ ಧರ್ಮ, ಸಂಸ್ಕೃತಿ, ಆಚಾರ-ವಿಚಾರ, ಊಟವೇ ಶ್ರೇಷ್ಠ ಎಂಬ ಭ್ರಮೆ ಸೃಷ್ಟಿಯಾಗಿದೆ. ಇದುವೇ ಸಂಕಷ್ಟ ಸೃಷ್ಟಿಗೂ ಕಾರಣವಾಗಿದೆ. ಈಗ ಇದರೊಂದಿಗೆ ದೇಶಪ್ರೇಮ, ಜಾತಿ ಭ್ರಮೆಯು ಸೇರಿಕೊಂಡಿದೆ. ಇಲಿಗಳು ಸಿಂಹ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ಇದರಿಂದ ಸುಖದ ಬದುಕಿನ ಆಲದ ಮರವೇ ನಾಶವಾಗುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಈಗಿನ ರಾಜಕಾರಣಿಗಳಿಗೆ ಮಾತಿನ ಮೇಲೆ ಹತೋಟಿ ಇಲ್ಲ. ಅಸಂಬದ್ಧ ಪ್ರಲಾಪದ ಮೂಲಕ ಸಮಾಜದಲ್ಲಿ ದ್ವೇಷವನ್ನು ಬಿತ್ತುತ್ತಿದ್ದಾರೆ. ಈ ಕುರಿತು ಎಚ್ಚರಿಸುವ ಸಾಹಿತಿಗಳ ಮಾತನ್ನು ಯಾರೂ ಕೇಳುತ್ತಿಲ್ಲ. ಅಧಿಕಾರಕ್ಕಾಗಿ ಸುಳ್ಳು ಬಿತ್ತಲಾಗುತ್ತಿದೆ. ಶತಮಾನಗಳ ಹಿಂದಿನ ರಾಜನ ಕುರಿತು ಅಧಿಕಾರಕ್ಕಾಗಿ ಈಗ ಸುಳ್ಳ-ಸತ್ಯ, ಸರಿ-ತಪ್ಪು ಎಂದು ಹೇಳಲಾಗುತ್ತಿದೆ.

ಆದರೆ, ಆಳ್ವಿಕೆ ನಡೆಸಿರುವ ಯಾವ ರಾಜರು ಒಳ್ಳೆಯವರಲ್ಲ. ‘ತನಗಾಗಿ, ತಮ್ಮವರಿಗಾಗಿ ಲಾಭ ಮಾಡಿಕೊಟ್ಟು, ಜನರ ಮೇಲೆ ಹತೋಟಿ ಸಾಧಿಸುವನೇ ರಾಜ’ ಎಂದು ಪಂಪ ಆ ಕಾಲದಲ್ಲೇ ಹೇಳಿರುವ ಮಾತು ಈಗಲೂ ಕಟ್ಟುಸತ್ಯವೇ ಎಂದು ಕಿಡಿಕಾರಿದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ,ಲೇಖಕರೂ ಆದ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ತವರು ಅರಸು ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷಿ ಅರಸು, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಎಚ್.ಎಸ್.ಸುರೇಶ್‌ಬಾಬು, ಕೃತಿ ಸಂಪಾದಕ ಡಾ.ಎಂ.ಜಿ.ಆರ್.ಅರಸ್ ಕಾರ್ಯಕ್ರಮದಲ್ಲಿ ಹಾಜರಿದ್ದರು.


ಸಮಾನತೆ ಭಿಕ್ಷೆಯಲ್ಲ. ಇದು ಎಲ್ಲ ಮನುಷ್ಯರಿಗೂ ದೊರೆಯಬೇಕು. ಈಗಿನ ಕಾಲಘಟ್ಟದಲ್ಲಿ ಅದುವೇ ಕಷ್ಟದ ಸಂಗತಿ. ಅಧಿಕಾರ, ಹಣ, ಜಾತಿ, ತೊಳ್ಬಲದಿಂದ ಜನರನ್ನು ಗುರುತಿಸಲಾಗುತ್ತಿದೆ. ಇದನ್ನು ಬಿಟ್ಟು ಮನುಷ್ಯರಾಗಿ ಗುರುತಿಸುವುದನ್ನು ಕಲಿಯುವುದು ಯಾವಾಗ?.

– ಓ.ಎಲ್.ನಾಗಭೂಷಣಸ್ವಾಮಿ, ವಿಮರ್ಶಕ

andolanait

Recent Posts

ಮಂಡ್ಯ ಟು ಇಂಡಿಯಾ: ಬೃಹತ್‌ ಉದ್ಯೋಗ ಮೇಳ

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ…

1 hour ago

ಮೈಮುಲ್‌: ನಿರೀಕ್ಷೆಗೂ ಮೀರಿ ಕ್ಷೀರಧಾರೆ

ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ…

2 hours ago

ಮೇಲುಕೋಟೆಯಲ್ಲಿ ಸರಣಿ ಕಳ್ಳತನ

ಬೀಗ ಹಾಕಿದ್ದ ಮನೆಗಳೇ ಕಳ್ಳರ ಟಾರ್ಗೆಟ್, ಲಾಕರ್‌ಗಳನ್ನು ಒಡೆದು ನಗ,ನಾಣ್ಯ ದೋಚಿದ ದುಷ್ಕರ್ಮಿಗಳು ಮೇಲುಕೋಟೆ: ಇಲ್ಲಿನ ಒಕ್ಕಲಿಗರ ಬೀದಿಯ ಸುತ್ತಮುತ್ತಲ…

2 hours ago

ಕಾರ್ಯಾಚರಣೆ ತಂಡವನ್ನೇ ಹಿಮ್ಮೆಟ್ಟಿಸಿದ ಕಾಡಾನೆಗಳು!

ದಾ. ರಾ. ಮಹೇಶ್ ವೀರನಹೊಸಹಳ್ಳಿ: ಮೂರು ದಿನಗಳಿಂದ ತೋಟಗಳಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡನ್ನು ಓಡಿಸಲು ಹೋದ ಜನರ ಗುಂಪನ್ನೇ ಆನೆಗಳು…

2 hours ago

ಶಾಸಕ ಬಸವನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಎಫ್‌ಐಆರ್‌ ದಾಖಲು

ದಾವಣಗೆರೆ: ಇಲ್ಲಿನ ಗಾಂಧಿ ನಗರ ಪೊಲೀಸ್‌ ಠಾಣೆಯಲ್ಲಿ ವಿಜಯಪುರ ಶಾಸಕ ಪಾಟೀಲ ಯತ್ನಳ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ರಾಜ್ಯ ಕಾಂಗ್ರೆಸ್‌…

11 hours ago

ಅಸ್ಸಾಂ: ಹಳಿ ತಪ್ಪಿದ ಲೋಕಮಾನ್ಯ ತಿಲಕ ಎಕ್ಸ್‌ಪ್ರೆಸ್‌ ರೈಲು

ಅಸ್ಸಾಂ: ಅಸ್ಸಾಂನ ಅಗರ್ತಲಾದಿಂದ ಮುಂಬೈಗೆ ತೆರಳುತ್ತಿದ್ದ ಲೋಕಮಾನ್ಯ ತಿಲಕ್‌ ಎಕ್ಸ್‌ಪ್ರೆಸ್‌ ರೈಲು ಡಿಬಾಲೊಂಗ್‌ ನಿಲ್ದಾಣದ ಬಳಿ ಹಳಿ ತಪ್ಪಿವೆ ಎಂದು…

13 hours ago