ಅಂತರಸಂತೆ: ಕರುವೊಂದನ್ನು ಚಿರತೆ ಬಲಿಪಡೆದಿದ್ದ ಕಾರಣಕ್ಕಾಗಿ ಇರಿಸಿದ್ದ ಬೋನಿಗೆ ಚಿರತೆಯ ಮರಿಯೊಂದು ಸೆರೆಯಾಗಿದ್ದು, ತಾಯಿ ಮತ್ತು ಮತ್ತೊಂದು ಮರಿ ಇರುವುದಾಗಿ ಅದಕ್ಕಾಗಿ ಮತ್ತೇ ಹೆಚ್ಚುವರಿ ಬೋನು ಇರಿಸುವಂತೆ ಸಾರ್ವಜನಿಕರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ಸಮೀಪದ ಬದನೆಕುಪ್ಪೆ ಗ್ರಾಮದ ಜವರೇಗೌಡ ಎಂಬುವವರ ಕರುವೊಂದನ್ನು ಚಿರತೆಯು ಭಾನುವಾರ ತಡರಾತ್ರಿ ಬಲಿಪಡೆದಿತ್ತು. ಕೂಡಲೇ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬೆನ್ನಲ್ಲೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಹಜೂರು ನಡೆಸಿ ಪರಿಹಾರ ನೀಡುವ ಭರವಸೆ ನೀಡಿದ್ದರು. ಅಲ್ಲದೆ ಚಿರತೆಯ ಉಪಟಳ ಹೆಚ್ಚಿರುವುದರಿಂದ ಗ್ರಾಮಸ್ಥರ ಬೇಡಿಕೆಯ ಮೇರೆಗೆ ಕಬಿನಿ ಹಿನ್ನೀರಿನ ಸಮೀಪದ ಜಮೀನುವೊಂದರಲ್ಲಿ ಬೋನು ಸಹ ಇರಿಸಲಾಗಿತ್ತು. ಆದರೆ ಮಂಗಳವಾರ ಮುಂಜಾನೆ ಆ ಬೋನಿಗೆ ಸುಮಾರು ೧೦-೧೨ ತಿಂಗಳ ಚಿರತೆ ಮರಿಯೊಂದು ಸೆರೆಯಾಗಿದ್ದು, ಅದರ ತಾಯಿ ಹಾಗೂ ಮತ್ತೊಂದು ಮರಿ ಅಲ್ಲಿಯೇ ಓಡಾಡುತ್ತಿವೆ ಅವುಗಳನ್ನು ಸಹ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಅಧಿಕಾರಿಗಳು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ: ಇದೇ ವೇಳೆ ಇಲಾಖೆಯ ವತಿಯಿಂದ ಬರುವ ಪರಿಹಾರ ಸಾಕಷ್ಟು ತಡವಾಗುತ್ತಿದೆ. ಪರಿಹಾರವನ್ನು ನೀಡಿ ಬಳಿಕ ಚಿರತೆಯನ್ನು ತೆಗೆದುಕೊಂಡು ಹೋಗಿ ಎಂದು ಗ್ರಾಮಸ್ಥರು ಪಟ್ಟು ಹಿಡಿದ ಕೆಲ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಗೆ ಮುಂದಾದರು. ನಮ್ಮ ಭಾಗದಲ್ಲಿ ಈಗಾಗಲೇ ಸಾಕಷ್ಟು ಹಸು, ಕರುಗಳು, ಮೇಕೆಗಳು ಚಿರತೆಯ ದಾಳಿಗೆ ಬಲಿಯಾಗಿವೆ. ಆದರೆ ಇನ್ನೂ ಸರಿಯಾದ ಪರಿಹಾರ ಬಂದು ತಲುಪಿಲ್ಲ. ಅವು ಭೇಟೆಯಾಡಿ ಎಳೆದುಕೊಂಡು ಹೋದ ಕರುಗಳ ಮೃತ ದೇಹವು ಕೆಲಬಾರಿ ಸಿಗದೆ ಪರಿಹಾರಕ್ಕೆ ಅದು ದಾಖಲಾಗಿಲ್ಲ. ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಇಲ್ಲಿ ಇನ್ನು ಸಹ ಚಿರತೆಯ ಹಾವಳಿ ಹೆಚ್ಚಿದ್ದು, ಹೆಚ್ಚಿನ ಬೋನಿಗಳನ್ನು ಇರಿಸಿ ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಬಳಿಕ ಪ್ರಾದೇಶಿಕ ವಲಯದ ಡಿಆರ್‌ಎಫ್‌ಒ ಪಿ.ಚಂದನ್ ಪರಿಸ್ಥಿತಿಯನ್ನು ನಿಭಾಯಿಸಿ ಗ್ರಾಮಸ್ಥರೊಂದಿಗೆ ಸಮಾಲೋಜನೆ ನಡೆಸಿ ಬೋನು ಇರಿಸುವ ಭರವಸೆ ನೀಡಿ ಚಿರತೆಯನ್ನು ಸ್ಥಳಾಂತರ ಗೊಳಿಸಿದರು.
ಸ್ಥಳದಲ್ಲಿ ಡಿಆರ್‌ಎಫ್‌ಒ ಪಿ.ಚಂದನ್, ಸಿಬ್ಬಂದಿಗಳಾದ ನಾರಾಯಣ್, ಮಹಮದ್, ಎನ್‌ಜಿಒ ಪ್ರತಿನಿಧಿ ಧನುಷ್, ಕಾಂಗ್ರೆಸ್ ಮುಖಂಡ ಮನು ಹೊಸಮಾಳ, ಗ್ರಾಮಸ್ಥರಾದ ಮಂಜು, ನಾಗೇಗೌಡ, ಉಮೇಶ್, ರಾಮಚಂದ್ರ, ಶಶಿ, ಎತ್ತೇಗೌಡ, ಚಿನ್ನಯ್ಯ, ಹನುಮಂತ, ಗಣೇಶ್ ಮುಂತಾದವರು ಹಾಜರಿದ್ದರು.
ನವದೆಹಲಿ: ಇರಾನ್ ಯುದ್ಧದ ಬಿಸಿ ಸವಾರರಿಗೆ ತಟ್ಟಿದೆ. ತೈಲ ಕಂಪನಿಗಳು ಪ್ರೀಮಿಯಂ ಪೆಟ್ರೋಲ್ ದರವನ್ನು 2 ರೂಗೆ ಏರಿಕೆ ಮಾಡಿದೆ.…
ಸುಂಟಿಕೊಪ್ಪ: ಮಾದಾಪುರ ರಾಜ್ಯ ಹೆದ್ದಾರಿ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವಿಗೀಡಾಗಿ ಹಿಂಬದಿ ಸವಾರ…
ಚಿಕ್ಕಮಗಳೂರು: ಬಿಸಿಲ ಬೇಗೆಗೆ ಅಪರೂಪದ ಶೋಲಾ ಹುಲ್ಲುಗಾವಲು ಹೊತ್ತಿ ಉರಿಯುತ್ತಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಶೃಂಗೇರಿಯ ಕೆರೆಕಟ್ಟೆ…
ಟೆಹರಾನ್: ಇರಾನ್ ಮೇಲೆ ಅಮೇರಿಕಾ ಹಾಗೂ ಇಸ್ರೇಲ್ ಜಂಟಿ ದಾಳಿ ಮುಂದುವರಿಸಿದ್ದು, ಇರಾನ್ ಗುಪ್ತಚರ ಸಚಿವ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.…
ಕಲಬುರ್ಗಿ: ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ಗೆ ಆಡಳಿತ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ಮಾಡಿದ್ದಾರೆ.…
ಬಹುನಿರೀಕ್ಷಿತ ಧುರಂಧರ್-2 ಸಿನಿಮಾ ಬಗ್ಗೆ ನಟಿ ರಮ್ಯಾ ಬರೆದಿರುವ ಟೂ ಪೇಜ್ ವಿಮರ್ಶೆ ಈಗ ಸೋಚಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಬ್ಬಿಸಿದೆ.…