ಜಿಲ್ಲೆಗಳು

‘ಕಾರ್ಪೊರೇಟ್ ಪತ್ರಿಕೋದ್ಯಮದಿಂದ ಜನದನಿ ಕ್ಷೀಣ’

ರಾಜಕೀಯ ನೇತಾರರ ಆತಂಕ: ಆಂದೋಲನ ಮಾದರಿಗೆ ಪ್ರಶಂಸೆ

ನಂಜನಗೂಡು ‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮ

ನಂಜನಗೂಡು:‘ಪತ್ರಿಕೋದ್ಯಮದ ಸ್ವರೂಪವೇ ಬದಲಾಗಿ ಕಾರ್ಪೊರೇಟ್ ಸಂಸ್ಕೃತಿ ಮಾಧ್ಯಮ ವಲಯವನ್ನು ಪ್ರವೇಶಿಸಿದೆ. ಇದು ಒಂದು ಕಡೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದ್ದರೆ, ಮತ್ತೊಂದು ಕಡೆ ದನಿಯಿಲ್ಲದವರ ಪರವಾಗಿ ಮಾಧ್ಯಮಗಳು ಗಮನ ನೀಡದಿರುವುದೂ ನಡೆಯುತ್ತಿದೆ. ಇಂತಹುದರಲ್ಲಿ ‘ಆಂದೋಲನ’ ದಿನಪತ್ರಿಕೆ ಕಾರ್ಪೊರೇಟ್ ಸಂಸ್ಕೃತಿಯಿಂದ ದೂರವೇ ಇದ್ದು ಜನರ ದನಿಯಾಗಿ ಉಳಿದಿದೆ. ಜನಪರ ಪತ್ರಿಕೋದ್ಯಮವೆಂದರೆ ಇದೇ. ಇದಕ್ಕೆ ರಾಜಶೇಖರ ಕೋಟಿ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯೇ ಮಾದರಿ’ ಎನ್ನುವ ಕುರಿತ ಚರ್ಚೆಗಳಿಗೆ ನಂಜನಗೂಡು ತಾಲ್ಲೂಕಿನ ‘ಆಂದೋಲನ ೫೦ ವರ್ಷದ ಸಾರ್ಥಕ ಪಯಣ’ ಕಾರ್ಯಕ್ರಮ ವೇದಿಕೆಯಾಯಿತು.
ನಂಜನಗೂಡು ಗುಂಡ್ಲುಪೇಟೆ ರಸ್ತೆಯಲ್ಲಿರುವ ಪಿ.ವಿಜಯಲಕ್ಷ್ಮೀ ನಾರಾಯಣ ರೆಡ್ಡಿ ಯಾತ್ರಿ ಭವನದಲ್ಲಿ ಬುಧವಾರ ‘ಆಂದೋಲನ ೫೦ ಸಾರ್ಥಕ ಪಯಣ’ ಸಮಾರಂಭವನ್ನು ಉದ್ಘಾಟಿಸಿದ ಹಿರಿಯ ರಾಜಕಾರಣಿ ಹಾಗೂ ಚಾಮರಾಜನಗರ ಲೋಕಸಭಾ ಸದಸ್ಯ ವಿ.ಶ್ರೀನಿವಾಸಪ್ರಸಾದ್ ಅವರು, ಆಂದೋಲನ ನಡೆದುಬಂದ ಹಾದಿಯನ್ನು ಉಲ್ಲೇಖಿಸುತ್ತಲೇ ಪತ್ರಿಕೋದ್ಯಮದ ಸ್ವರೂಪವನ್ನು ಪ್ರಸ್ತಾಪಿಸಿದರು.

ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ,ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಗರಸಭೆ ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಮಂಗಳಾ ಸೋಮಶೇಖರ್, ಜಿಲ್ಲಾ ಜಾ.ದಳ ಅಧ್ಯಕ್ಷ ಎನ್.ನರಸಿಂಹಸ್ವಾಮಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಬದ್ಧತೆ, ತನಿಖಾ ವರದಿಗೆ ಮಾದರಿ: ಪ್ರಸಾದ್

ಪತ್ರಿಕೆಗಳಲ್ಲಿ ಪರ-ವಿರೋಧವಾಗಿ ಬರೆಯಬಹುದು.ಅದೊಂದು ಮುಕ್ತ ಸ್ವಾತಂತ್ರ್ಯ, ಅಧಿಕಾರಸ್ಕೋರ ರಾಜಿಯಾಗಬೇಡ ಎನ್ನುವ ಮಾತಿನ ಪ್ರಕಾರ ಕೊನೆಯ ತನಕವೂ ತಮ್ಮ ಸಿದ್ಧಾಂತವನ್ನು ರಾಜಶೇಖ ಕೋಟಿ ಅವರು ಬಿಟ್ಟುಕೊಡಲಿಲ್ಲ. ಅದನ್ನು ಉಳಿಸಿಕೊಂಡು ಬಂದರು. ಹಾಗೆಯೇ ಉಳಿದರು. ಆದ್ದರಿಂದ ಇಂದು ‘ಆಂದೋಲನ’ ಓದುಗರ ವಿಶ್ವಾಸಾರ್ಹತೆ, ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಶೋಷಿತರ ಪರವಾಗಿ ಪತ್ರಿಕೆ ಗಟ್ಟಿಯಾಗಿ ನಿಂತಿತು. ಹಲವಾರು ಹೋರಾಟ, ಚಳವಳಿಗಳಿಗೆ ‘ಆಂದೋಲನ’ ಪತ್ರಿಕೆಯ ಹೆಸರಿನಂತೆ ಪ್ರೋತ್ಸಾಹಿಸಿತು ಎಂದು ಪ್ರಸಾದ್ ಹೇಳಿದರು.

ಪೀತ ಮತ್ತು ತನಿಖಾ ಪತ್ರಿಕೋದ್ಯಮಗಳು ಈಗಲೂ ಇವೆ. ‘ಆಂದೋಲನ’ ತನಿಖಾ ವರದಿಯ ಮಾಧ್ಯಮವಾಗಿ ಕೆಲಸ ಮಾಡಿತು. ವೀರಪ್ಪನ್ ಉಪಟಳ ಹೆಚ್ಚಾದ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕಾಡಿನಲ್ಲಿ ಸುತ್ತಾಡಿ ಕೆಲಸ ಮಾಡಿದರು.ಅದೇ ರೀತಿ ಮುಚ್ಚಿ ಹೋಗಿದ್ದ ಕೇಸುಗಳಿಗೆ ಮರುಜೀವ ನೀಡಿ ನ್ಯಾಯ ಸಿಗುವಂತೆ ಮಾಡಿದ ಕೀರ್ತಿ ಕೋಟಿ ಅವರಿಗೆ ಸಲ್ಲುತ್ತದೆ ಎಂದು ಹಳೆಯದನ್ನು ನೆನಪಿಸಿಕೊಂಡರು.

ಮಾನವೀಯ ಹೃದಯವನ್ನು ಹೊಂದಿದ್ದ ಕೋಟಿ ಅವರು ನಾನು ಶೋಷಿತ ಸಮುದಾಯದಲ್ಲಿ ಹುಟ್ಟದೆ ಇದ್ದರೂ ಸಾಮಾಜಿಕ ಅನಿಷ್ಟಗಳನ್ನು ನೋಡಿಕೊಂಡು ಸುಮ್ಮನಿರಲು ಆಗಲ್ಲ ಎಂದು ಕೋಟಿ ಅವರು ಹೇಳುತ್ತಿದ್ದರು. ವೈಚಾರಿಕ ಚಿಂತಕ, ಕಟ್ಟಾ ಸಮಾಜವಾದಿ, ಮಾನವೀಯತೆಯ ಮನಸ್ಸನ್ನು ಹೊಂದಿದ್ದ ರಾಜಶೇಖರಕೋಟಿ ಅವರು ಜನರ ಮನಸ್ಸಿನಲ್ಲಿ ಸದಾ ನೆನಪಿನಲ್ಲಿರುವ ವ್ಯಕ್ತಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ‘ಆಂದೋಲನ’ ಪತ್ರಿಕೆ ಕೈಯಲ್ಲಿ ಹಿಡಿದಾಗ ಕೋಟಿ ನೆನಪಾಗುತ್ತಾರೆ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ದಿಟ್ಟತನದಿಂದ ಬರೆದರು. ಮುಖ್ಯಮಂತ್ರಿಗಳೇ ಅವರಿಗೆ ಮಾತನಾಡಿದರೂ ಬದಲಾಗಲಿಲ್ಲ. ಕೆಲವರು ಆಸೆ,ಆಕಾಂಕ್ಷೆಗಳಿಗೆ ಮಾರು ಹೋದರೂ ಕೂಡ ರಾಜಶೇಖರ ಕೋಟಿ ಎಂದಿಗೂ ಬದಲಾಗಲಿಲ್ಲ. ‘ಇದ್ದದ್ದು ಇದ್ಹಾಂಗ’ದಲ್ಲಿ ನನ್ನ ಬಗ್ಗೆಯೂ ಬರೆದರು. ಸಿದ್ದರಾಮಯ್ಯ ಅವರ ಬಗ್ಗೆಯೂ ಬರೆದಿದ್ದಾರೆ. ವಿ.ಶ್ರೀನಿವಾಸ ಪ್ರಸಾದ್ ಅಂತಹವರನ್ನು ಉಳಿಸಿಕೊಳ್ಳಬೇಕಿತ್ತು ಅಂತ ಸಿದ್ದರಾಮಯ್ಯ ಅವರಿಗೆ ಹೇಳಿದ್ದರು. ಅದೇ ರೀತಿ ಬಿಜೆಪಿ ಬಗ್ಗೆ ಸ್ವಲ್ಪ ಬೇಸರಪಟ್ಟುಕೊಂಡಿದ್ದರು ಎಂದು ಪ್ರಸಾದ್ ಮೆಲುಕು ಹಾಕಿದರು.


ಸಮಾಜಮುಖಿ ಗುಣವೇ ಮುಖ್ಯ: ಡಾ.ಎಚ್‌ಸಿಎಂ

ಅಮೆರಿಕಾದ ಅಧ್ಯಕ್ಷರಾಗಿದ್ದ ಥಾಮಸ್ ಜಾಫರ್‌ಸನ್ ಅವರು ಪತ್ರಿಕೆಗಳು ಇರಬೇಕು. ಪ್ರಜಾಪ್ರಭುತ್ವದ ನಡವಳಿಕೆಗೆ ಮಾಧ್ಯಮ ಭದ್ರಬುನಾದಿ ಮತ್ತು ನಾಲ್ಕನೇ ಸ್ತಂಭವಾಗಿ ಕೆಲಸ ಮಾಡಲಿದೆ ಎಂದಿದ್ದರು. ಅದಕ್ಕಾಗಿಯೇ ದೇಶವನ್ನು ಕಟ್ಟಲು ಮತ್ತು ಜನಪರವಾಗಿ ಇರುವಂತೆ ನೋಡಿಕೊಳ್ಳಲು ಮಹಾತ್ಮಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್‌ಪತ್ರಿಕೆಯನ್ನು ಆರಂಭಿಸಿದ್ದರು ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.

ನಡೆ, ನುಡಿ, ಬದ್ಧತೆಯನ್ನು ಹೊತ್ತು ಪತ್ರಿಕೆ ಮುನ್ನಡೆಸಿದ ರಾಜಶೇಖರಕೋಟಿ ಅವರ ಹೆಸರು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಜನರಿಗೆ ಗೊತ್ತಿಲ್ಲದೇ ಇರುವುದಿಲ್ಲ. ದಲಿತ, ರೈತ ಚಳವಳಿಗಳನ್ನು ಕೋಟಿ ಅವರು ಬೆಂಬಲಿಸುತ್ತಿದ್ದರು. ಅನ್ಯಾಯವಾದ ಸಂದರ್ಭಗಳಲ್ಲಿ ಮುಂಚೂಣಿಯಲ್ಲಿ ನಿಂತು ಪತ್ರಿಕೆಯಲ್ಲಿ ಪ್ರಕಟಿಸಿದ್ದರಿಂದ ಜನರು ಓದುವಂತಾಯಿತು ಎಂದು ಹೇಳಿದರು.

ಕೋಟಿ ಅವರು ಮೈಸೂರಿನಲ್ಲಿ ಶಕ್ತಿಧಾಮ ಸ್ಥಾಪನೆಗೆ ಪಿಲ್ಲರ್ ಆಗಿದ್ದರು. ಒಡನಾಡಿ ಸಂಸ್ಥೆ ಗಟ್ಟಿಯಾಗಿ ನೆಲೆಯೂರಲು ಕಾರಣವಾದರು. ಅನ್ಯಾಯಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದರು. ಪೊಲೀಸರು ಪತ್ತೆ ಮಾಡದ ಕೇಸ್‌ಗಳನ್ನು ಒಡನಾಡಿ ಪತ್ತೆ ಮಾಡಿದ ವೇಳೆ ಅವರೊಂದಿಗೆ ನಿಂತು ಕೆಲಸ ಮಾಡಿದರು. ಪತ್ರಿಕೆಯಲ್ಲಿ ಕ್ರೈಂ ಅನ್ನು ವೈಭವೀಕರಿಸಲಿಲ್ಲ. ಇದು ಪತ್ರಿಕೆ ಸಮಾಜಮುಖಿಯಾಗಿ ಹೇಗೆ ಇರಬೇಕು ಎನ್ನುವುದನ್ನು ತೋರುತ್ತದೆ. ಹಾಡುಪಾಡು ಮೂಲಕ ಸಾಂಸ್ಕೃತಿಕ, ಕಲೆ, ಸಂಗೀತವನ್ನು ಬಿಂಬಿಸಿದರು. ಕೋಟಿ ಅವರು ಪತ್ರಿಕಾಧರ್ಮದ ಪರಿಪಾಲಕರು. ಈಗಲೂ ಮೊದಲು ಓದುವುದೇ ‘ಆಂದೋಲ’ ಎಂದು ತಮ್ಮ ಮನದಾಳವನ್ನು ಹಂಚಿಕೊಂಡರು.


ಕಾರ್ಪೊರೇಟ್‌ಕೈಗಳ ಹಿಡಿಯದಲ್ಲಿ ಮಾಧ್ಯಮ:ಡಾ.ಯತೀಂದ್ರ

ಕಾರ್ಪೊರೇಟ್ ಕೈಗಳಲ್ಲಿ ಸಿಲುಕಿರುವ ಮಾಧ್ಯಮ ವ್ಯಾಪಾರವಾಗಿ ಬಿಟ್ಟಿದೆ ಎಂದು ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ತಾಲ್ಲೂಕಿನ ೫೦ ವರ್ಷ್ಳ ಮುನ್ನೂಟದಿಕ್ಸೂಚಿ-ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಮಾಜವಾದದ ಚಿಂತನೆಯಿಂದ ಬಂದ ಕೋಟಿ ಅವರು ಯಾವ ವಿಚಾರಕ್ಕೂ ರಾಜೀಯಾದವರಲ್ಲ. ೨೦೧೪ರ ನಂತರ ನಮ್ಮ ಅಣ್ಣ ರಾಕೇಶ್ ಮೃತಪಟ್ಟ ನಂತರ ವರುಣ ಕ್ಷೇತ್ರದ ಜವಾಬ್ದಾರಿ ಹೊತ್ತ ಮೇಲೆ ಮೂರ್ನಾಲ್ಕು ಬಾರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ದೊರೆತಿತ್ತು. ನಿಮ್ಮಂಥ ಬುದ್ಧಿವಂತರು,ಓದಿದವರು ರಾಜಕಾರಣಕ್ಕೆ ಬರಬೇಕೆಂಬ ಉತ್ತೇಜನಕಾರಿ ಮಾತುಗಳನ್ನಾಡಿದ್ದು ಇಂದಿಗೂ ಮನಸ್ಸಿನಲ್ಲಿದೆ ಎಂದು ಸ್ಮರಿಸಿಕೊಂಡರು. ೫೦ ವರ್ಷಗಳನ್ನು ಪೂರೈಸಿರುವ ಆಂದೋಲನ ಪತ್ರಿಕೆಯು ಜನರ ವಿಶ್ವಾಸವನ್ನು ಉಳಿಸಿ,ಗಳಿಸಿಕೊಂಡು ಮುಂದೆ ಸಾಗುತ್ತಿದೆ. ಪತ್ರಿಕೆಯ ವಿಶ್ವಾರ್ಹತೆ ಉಳಿದರೆ ಓದುಗರ ಸಂಖ್ಯೆ ಹೆಚ್ಚಾಗಲಿದೆ. ಇಡೀ ಮಾಧ್ಯಮ ಇಂದು ವಸ್ತುಸ್ಥಿತಿಯಾಗ ಉಳಿದಿಲ್ಲ. ಕಾರ್ಪೋರೇಟ್ ವ್ಯಕ್ತಿಗಳ ಹಿಡಿತದಲ್ಲಿ ಸಿಲುಕಿ ವ್ಯಾಪಾರ ಮಾಧ್ಯಮವಾಗಿ ಮಾರ್ಪಟ್ಟಿದೆ. ಆಡಳಿತ ಪಕ್ಷದ ಕಾರ್ಯವೈಖರಿಯನ್ನು ಧೈರ್ಯವಾಗಿ ಎದುರಿಸಿ ಪತ್ರಿಕೆಯಲ್ಲಿ ಬರೆಯುವುದು ಕಡಿಮೆಯಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ಸಮಾಜಮುಖಿಯಾಗಿ ಕೆಲಸ ಮಾಡುವ ಪತ್ರಿಕೆಗಳನ್ನು ಜನರು ಅಪೇಕ್ಷೆ ಪಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಪತ್ರಿಕೆಗಳು ಹಳಿ ತಪ್ಪಿರುವುದನ್ನು ನೋಡಿದ್ದೇವೆ. ಸಮಾಜದ ಬದಲಾವಣೆಗೆ ಕಾರಣವಾಗುವ ಮಾಧ್ಯಮದ ಪಾತ್ರ ಅಪಾರವಾಗಿದೆ ಎಂದು ತಿಳಿಸಿದರು.

ರಾಜ್ಯಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ,ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ,ನಗರಸಭೆ ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಮಂಗಳಾ ಸೋಮಶೇಖರ್, ಜಿಲ್ಲಾ ಜಾ.ದಳ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ಸಂಪಾದಕ ರವಿಕೋಟಿ, ವ್ಯವಸ್ಥಾಪಕ ಸಂಪಾದಕರಾದ ರಶ್ಮಿಕೋಟಿ ಹಾಜರಿದ್ದರು


ಆಂದೋಲನ ಹಕ್ಕೊತ್ತಾಯಗಳು..
೧. ಮೊದಲ ಹಂತದ ಅಭಿವೃದ್ಧಿಯಾಗಿ ಶ್ರೀಕಂಠೇಶ್ವರ ದೇವಾಲಯ ಇಂದು ಜನರ ಆಕರ್ಷಿಣೀಯ ಕೇಂದ್ರವಾಗಿ ದಾಪುಗಾಲಿಟ್ಟಿದ್ದು, ಎರಡನೇ ಹಂತದ ಕಾಮಗಾರಿ ಆಗಬೇಕಾಗಿದೆ.
೨. ಶ್ರೀಕಂಠೇಶ್ವರ ದೇವಾಲಯದ ಕಪಿಲಾ ಸ್ನಾನಘಟ್ಟದಲ್ಲಿ ನದಿಗೆ ಅಡ್ಡವಾಗಿ ಒಂದು ಪಿಕಪ್ ಡ್ಯಾಮ್(ಕಟ್ಟೆ) ಅವಶ್ಯಕತೆ ಇದೆ.
೩. ತಾಲ್ಲೂಕಿನ ಬಹುದೊಡ್ಡ ಕನಸಾಗಿರುವ ಚಿತ್ರನಗರಿ ನಿರ್ಮಾಣ ಆಗಬೇಕಿದೆ.
೪. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಬೆಂಬಲಿಕವಾಗಿ ಶತಮಾನಗಳ ಹಿಂದೆ ಪ್ರೌಢಶಾಲೆ ಆರಂಭವಾದ ಈ ತಾಲ್ಲೂಕಿನಲ್ಲಿ ಈಗಲೂ ವಿಶ್ವವಿದ್ಯಾನಿಲಯದ ಉಪಕೇಂದ್ರ ಸ್ಥಾಪಿತವಾದರೆ ಉನ್ನತ ಶಿಕ್ಷಣ ಪಡೆಯುವವರ ಕೊರತೆ ನೀಗುತ್ತದೆ.
೫. ಈಗಾಗಲೇ ಮೈಸೂರು ನಂಜನಗೂಡು ನಡುವೆ ಚತುಷ್ಪಥ ರಸ್ತೆ ನಿರ್ಮಿತವಾಗಿದ್ದು ಉದ್ದಕ್ಕೂ ಅಲ್ಲಲ್ಲಿ ಬಸ್ ಬೇ ಗಳ ಅವಶ್ಯಕತೆಯಿದೆ.
೬. ಈಗಾಗಲೇ ಸುಜಾತಾಪುರಂ ಬಳಿ ರೈಲ್ವೆ ಮೇಲ್ಸೇತುವೇ ಕಾಮಗಾರಿ ಆರಂಭವಾಗಿದ್ದು ರಾಷ್ಟ್ರಪತಿ ರಸ್ತೆಯಲ್ಲಿ ಇನ್ನೊಂದು ಮೇಲ್ಸೇತುವೆ ಅತ್ಯವಶ್ಯಕವಾಗಿದೆ.
೭. ಬಂಡೀಪುರ ಆಭಯಾರಣ್ಯದ ಕಾಡುಪ್ರಾಣಿಗಳ ಹಾವಳಿಗೆ ಸಿಲುಕುತ್ತಿರುವ ಕಾಡಂಚಿನ ಗ್ರಾಮದ ಜನತೆಗೆ ರಕ್ಷಣೆಯನ್ನು ತಾಲ್ಲೂಕು ಎದುರು ನೋಡುತ್ತಿದೆ.
೮. ಚತುಷ್ಪಥ ರಸ್ತೆಯ ಹುಲ್ಲಳ್ಳಿ ವೃತ್ತ ( ವಿಶ್ವೇಶ್ವರಯ್ಯ ವೃತ್ತ) ಸೇರಿದಂತೆ ಹಲವೆಡೆ ರಸ್ತೆ ದಾಟಲು ಸ್ಟೀಲ್ ಬ್ರೀಡ್ಜ್ ಅವಶ್ಯಕತೆ ಇದೆ.
೯. ಜನ ಹಾಗೂ ವಾಹನಗಳ ದಟ್ಟಣೆಯಿಂದ ಕೂಡಿದ ಹುಲ್ಲಳ್ಳಿ ರಸ್ತೆ ಅಗಲಿಕರಣ ಅವಶ್ಯಕವಾಗಿದೆ.
೧೦. ಕಪಿಲಾನದಿಯ ಬಲ ಭಾಗದ ಹಳ್ಳಿಗಳಿಗೆ ಈಗಾಗಲೇ ನದಿ ನೀರಿನ ಸೌಲಭ್ಯ ಕಲ್ಪಿಸಲಾಗಿದ್ದು, ಎಡಭಾಗದ ವರುಣ ಕ್ಷೇತ್ರಕ್ಕೆ ಸೇರುವ ಗ್ರಾಮಗಳಿಗೂ ಈ ಸೌಲಭ್ಯ ದೊರಕಿಸಬೇಕಿದೆ.
೧೧. ರಾಜ್ಯದ ಪ್ರಸಿದ್ಧ ಕೈಗಾರಿಕಾ ಕೇಂದ್ರವಾಗಿರುವ ನಂಜನಗೂಡಿನ ಬೈಪಾಸ್ ರಸ್ತೆಯ ಕೊರತೆಯು ನೀಗಬೇಕಾಗಿದೆ.
೧೨. ಸಾವಿರಾರು ಕೃಷ್ಣಮೃಗ ಹಾಗೂ ಕಸ್ತೂರಿಮೃಗಗಳನ್ನು ಹೊಂದಿರುವ ದಾಸನೂರು,ಕೊಣನೂರು ಬೆಟ್ಟವನ್ನು ಕೃಷ್ಣಮೃಗ ಪಾರ್ಕ್ ಎಂದು ಘೋಷಿಸಿ ಅವುಗಳನ್ನು ರಕ್ಷಿಸಬೇಕು.
೧೩. ತಾಲ್ಲೂಕಿನ ೧೮೪ ಹಳ್ಳಿಗಳಲ್ಲಿ ೮೪ಕ್ಕೂ ಹೆಚ್ಚು ಗ್ರಾಮಗಳು ಅಧಿಕೃತ ಸ್ಮಶಾನವಿಲ್ಲದೇ ಪರಿತಪಿಸುತ್ತಿದ್ದು ಆ ವ್ಯವಸ್ಥೆಯು ಆಗಬೇಕು.
೧೪. ಸಾಕಷ್ಟು ಕೈಗಾರಿಕೆಗಳನ್ನು ಹೊಂದಿದ್ದರೂ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ತಾಲ್ಲೂಕಿನ ಯುವಜನಾಂಗಕ್ಕೆ ಉದ್ಯೋಗ ಸೃಷ್ಟಿಸಿಕೊಡಲು ಆಯಾ ಕಾರ್ಖಾನೆಗಳಿಂದಲೇ ಕೌಶಲ್ಯ ತರಬೇತಿಗಳನ್ನು ನೀಡಲು ವ್ಯವಸ್ಥೆ ಮಾಡುವುದು.

andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago