ಜಿಲ್ಲೆಗಳು

ಕೈ, ತೆನೆ ಪಕ್ಷ ತೊರೆದು ಬಿಜೆಪಿಗೆ ಹಲವರ ಸೇರ್ಪಡೆ

ಮೈಸೂರು : ನಗರದ ಕಲ್ಯಾಣ ಗಿರಿಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ  ಕಾಂಗ್ರೆಸ್ ಹಾಗೂ ಜೆಡಿಎಸ್  ಪಕ್ಷದ ಹಲವು ಕಾರ್ಯಕರ್ತರುಗಳಾದ ಸುಪ್ರೀತ್ ಶೆಟ್ಟಿ, ರವಿ, ಮಂಜುನಾಥ್, ಮಹೇಶ್, ಶೋಹೇಬ್, ಮತ್ತು ಬೆಂಬಲಿಗರು ಕಾಂಗ್ರೆಸ್ ಹಾಗೂ ಜೆಡಿಎಸ್ ಅನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಇದರ ಜೊತೆಗೆ ವಾರ್ಡ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ನೇಮಕಾತಿ ಕಾರ್ಯಕ್ರಮವನ್ನೂ ಕೂಡ ಏರ್ಪಡಿಸಲಾಗಿತ್ತು

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ನಗರ ಅಧ್ಯಕ್ಷರಾದ ಟಿ ಎಸ್ ಶ್ರೀವತ್ಸ ರವರು ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಕಾರ್ಯಕರ್ತರು ಅತ್ಯಂತ ಕ್ರಿಯಾಶೀಲವಾಗಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ವಾರ್ಡ್ ಮಟ್ಟದಲ್ಲಿ ಹಾಗೂ ಬೂತ್ ಮಟ್ಟದಲ್ಲಿ ಕೆಲಸ ಮಾಡಲು ಸಜ್ಜಾಗುತ್ತಿದ್ದಾರೆ ಅತ್ಯಂತ ಶ್ಲಾಘನೀಯ ಕಳೆದ ಬಾರಿ ಕರೋನ ಸಂದರ್ಭದಲ್ಲಿ ಮನೆ ಮನೆ ಬಾಗಿಲಿಗೆ ಬಡವರಿಗೆ ದಿನನಿತ್ಯ ಬಳಕೆಯ ದವಸ ಧಾನ್ಯಗಳು ಆಹಾರಗಳನ್ನು ಕೊಡುವ ಮುಖಾಂತರ ಶ್ರಮದಾನ ಮಾಡಿದರು ಇನ್ನು ಅನೇಕ ಯೋಜನೆಗಳನ್ನು ಬೂತ್ ಮಟ್ಟದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರದ ಸವಲತ್ತುಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಬೂತ್ ಮಟ್ಟದ ಪ್ರತಿಯೊಬ್ಬ ಯುವಕರನ್ನು ಪಕ್ಷಕ್ಕೆ ಸೇರ್ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು, ಮತ್ತು ಕೊರೋನ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವ್ಯಾಕ್ಸಿನ್ ಗಳನ್ನು ಉಚಿತವಾಗಿ ಪ್ರತಿಯೊಬ್ಬ ಸಾರ್ವಜನಿಕರಿಗೂ ಅನುಕೂಲವಾಯಿತು, ಜೆಎಸ್ಎಸ್ ಸಂಸ್ಥೆ ಮತ್ತು ಗಣಪತಿ ಸಚ್ಚಿದಾನಂದ ಆಶ್ರಮ ಎನ್ ಆರ್ ಕ್ಷೇತ್ರದ ಚರ್ಚಿನ ಫಾದರ್ ರವರ ಸಹಾಯದೊಂದಿಗೆ ಕೊರೋನ ಸಂದರ್ಭದಲ್ಲಿ ಉಚಿತ ಆಹಾರವನ್ನು ಬಡವರಿಗೆ ಹಸಿವು ನೀಗಿಸಲು ಬಹಳ ಸಹಕರಿಸಿದರು, ಇಂತಹ ಬಗೆ ಬಗೆಯ ಸಾಮಾಜಿಕ ಕೆಲಸಗಳನ್ನು ಮಾಡುವುದರ ಜೊತೆಗೆ ಸರ್ಕಾರದ ಸವಲತ್ತುಗಳನ್ನು ಹಾಗೂ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ತಿಳಿಸಿದರು

ನಂತರ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಶ್ರೀ ಸಂದೇಶ ಸ್ವಾಮಿರವರು ಈ ಕ್ಷೇತ್ರದಲ್ಲಿ ಕಳೆದ 28 ವರ್ಷದಲ್ಲಿ ಯಾವುದೇ ಸಹ ಅಭಿವೃದ್ಧಿ ಯೋಜನೆ ಹಾಗಿಲ್ಲ, ಮೂಲಭೂತ ಸೌಕರ್ಯಗಳು ಯಾವುದೇ ಸಹ ಆಗಿಲ್ಲ, ಕ್ಷೇತ್ರದಲ್ಲಿ ಯಾವುದೇ ಸುಸಜ್ಜಿತವಾದಂತಹ ಆಸ್ಪತ್ರೆಗಳು ,ಕಾಲೇಜುಗಳು ,ಯಾವುದು ಸಹ ಇಲ್ಲ ಐದು ಕಿಲೋಮೀಟರ್ ಸಿಟಿ ಭಾಗಕ್ಕೆ ತೆರಳ ಬೇಕಾಗಿದೆ ಮೈಸೂರಿನ ಕೃಷ್ಣರಾಜ, ಚಾಮರಾಜ, ಕ್ಷೇತ್ರಗಳಲ್ಲಿ ಗುದ್ದಲಿ ಪೂಜೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ, ನರಸಿಂಹರಾಜ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ, ಆದ್ದರಿಂದ ಇಲ್ಲಿ ಜನರಿಗೂ ಯಾವುದೇ ಕೆಲಸಗಳು ಮಾಡುತ್ತಿಲ್ಲ ಹಾಗೂ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರಿಗೂ ಸಹ ಯಾವುದೇ ಕೆಲಸ ಕಾರ್ಯಗಳು ಆಗದೆ ಅವರ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಮುಂದಿನ ಬಾರಿ ಚುನಾವಣೆಯಲ್ಲಿ ನರಸಿಂಹರಾಜ ಕ್ಷೇತ್ರ ಅದ್ದೂರಿಯಾಗಿ ಬಿಜೆಪಿ ಜಯಭೇರಿ ಆಗುವಂತೆ ಕೆಲಸ ಮಾಡೋಣ, ನಿಮ್ಮಂತಹ ಯುವ ಪಡೆ ಪ್ರತಿ ಬೂತಿನಿಂದ ಪಕ್ಷಕ್ಕೆ ದುಡಿಯುವಂತಾಗಲಿ, ಹಾಗೂ ಕೇಂದ್ರ ರಾಜ್ಯ ಸರ್ಕಾರಗಳು ಇರುವುದರಿಂದ ನರಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ಮಾತ್ರ ಅಭಿವೃದ್ಧಿ ಆಗುತ್ತದೆ, ಬೆಂಗಳೂರು ಮೈಸೂರು ದಶಪಥ ಹೆದ್ದಾರಿ , ಬೃಹತ್ ಆಟದ ಕ್ರೀಡಾಂಗಣ, ಇನ್ನಿತರ ಮೈಸೂರಿಗೆ ಹಲವಾರು ಯೋಜನೆಗಳು ಬರುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಭಾನುಪ್ರಕಾಶ್, ರವರು ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್, ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಮೇಲು, ನಗರ ಯುವ ಮೋರ್ಚಾ ಅಧ್ಯಕ್ಷ ಎಂಜಿ ಕಿರಣ್ ಗೌಡ, ನಗರ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಜಯಶಂಕರ್, ನಗರ ಉಪಾಧ್ಯಕ್ಷರಾದ ಟಿ ರಮೇಶ್, ನಗರ ಪಾಲಿಕೆ ಸದಸ್ಯರಾದ ಆಶಾ ನಾಗಭೂಷಣ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್, ಹಾಗೂ ಉಪಾಧ್ಯಕ್ಷರಾದ ಕಾರ್ತಿಕ್, ಪುನೀತ್, ಮತ್ತು ಕ್ಷೇತ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಧನರಾಜ್, ನವೀನ್ ಶೆಟ್ಟಿ, ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಸತೀಶ್, ಎಸ್ ಟಿ ಮೋರ್ಚಾ ಅಧ್ಯಕ್ಷರಾದ ನಾರಾಯಣ ಲೋಲಪ್ಪ, ರೈತ ಮೋರ್ಚಾ ಅಧ್ಯಕ್ಷರಾದ ಶಶಿ, ವಿನೋದ್, ಬಸವರಾಜಪ್ಪ, ಶ್ರೀಕಂಠ ಮೂರ್ತಿ, ಸ್ವಾಮಿ, ರಜನಿಕಾಂತ್, ನಾಗರಾಜು, ಪುನೀತ್, ಆನಂದ್, ಜೀವನ್, ಮುಂತಾದವರು ಉಪಸ್ಥಿತರಿದ್ದರು.

andolanait

Recent Posts

ನಾಳೆ ಅರಮನೆಗೆ ಅಭಿಮನ್ಯು ಪ್ರವೇಶ

ಚಿರಂಜೀವಿ ಸಿ.ಹುಲ್ಲಹಳ್ಳಿ ಸತತ ಆರು ಬಾರಿ ಅಂಬಾರಿ ಹೊತ್ತಿದ್ದ ಆನೆ; ಈ ಬಾರಿ ನಿಶಾನೆ ಆನೆಯಾಗಿ ಭಾಗಿಯಾಗುವ ಸಾಧ್ಯತೆ ಮೈಸೂರು:…

3 mins ago

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

14 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

15 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

15 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

15 hours ago