ಜಿಲ್ಲೆಗಳು

ಸಿನಿಮಾ ಚಿತ್ರೀಕರಣಕ್ಕಾಗಿ ಪ್ರಾಚ್ಯ ಸ್ಮಾರಕವನ್ನೇ ಬಾರ್‌ ಆಗಿ ಪರಿವರ್ತಿಸಿದ ಚಿತ್ರತಂಡ

ಮಂಡ್ಯ : ಜಿಲ್ಲೆಯ ಪ್ರಸಿದ್ದ ಸ್ಥಳವಾದ ಮೇಲುಕೋಟೆಯಲ್ಲಿ ತೆಲುಗು ಸಿನಿಮಾ ಚಿತ್ರತಂಡವು ಚಿತ್ರೀಕರಣಕ್ಕಾಗಿ ಪ್ರಾಚ್ಯ ಸ್ಮಾರಕವನ್ನೇ ಬಾರ್‌ ಆಗಿ ಪರಿವರ್ತಿಸಿದ ಘಟನೆ ನಡೆದಿದೆ.
ಈ ಮೂಲಕ ಐತಿಹಾಸಿಕ ಪಾರಂಪರೆ, ಸಂಸ್ಕೃತಿಗೆ ದಕ್ಕೆಯನ್ನುಂಟುಮಾಡಿದೆ.ಸಿನಿಮಾ ತಂಡ.
ಪಾರಂಪರಿಕ ಸ್ಥಳವಾದ ರಾಯಗೋಪುರದಲ್ಲಿ ಬಾರ್‌ ರೀತಿಯ ಸೆಟ್‌ ಹಾಕಿ ವಿವಿಧ ಬ್ರಾಂಡ್‌ ಮದ್ಯದ ಬಾಟಲಿಗಳನ್ನಿಟ್ಟು ಚಿತ್ರೀಕರಣ ಮಾಡಿರುವ ಬಗ್ಗೆ ಜನರು ಆರೋಪಿಸಿದ್ದಾರೆ.

ಈ ಚಿತ್ರದಲ್ಲಿ ನಾಯಕ ನಟನಾಗಿ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ಅವರು ನಟಿಸುತ್ತಿದ್ದು, ಈ ಸ್ಥಳಗಳಲ್ಲಿ 2 ದಿನಗಳ ಕಾಲ ಚಿತ್ರೀಕರಣವನ್ನು ಮಾಡಲು ಷರತ್ತು ಬದ್ದ ಅನುಮತಿಯನ್ನು ಜಿಲ್ಲಾಧಿಕಾರಿಗಳು ನೀಡಿದ್ದರು.
ಆದರೆ ಈ ಸಿನಿಮಾ ತಂಡವು ಸೆಟ್‌ ನಿರ್ಮಿಸಲು ಭಾರೀ ಗಾತ್ರದ ಕಬ್ಬಿಣದ ಕಂಬಗಳನ್ನು ಬಳಸಿದ್ದಲ್ಲದೆ ಅಲ್ಲಿಯ ನಿಯಮವನ್ನು ಉಲ್ಲಂಘಿಸಿದೆ. ಈ ಸಂಬಂಧ ಚಿತ್ರ ತಂಡಕ್ಕೆ ನೋಟಿಸ್‌ ನೀಡಲಾಗಿದ್ದು. ಚಿತ್ರೀಕರಣವನ್ನು ರದ್ದುಗೊಳಿಸಲಾಗಿದೆ.

andolanait

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

32 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

37 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

47 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago