ಜಿಲ್ಲೆಗಳು

ಎರಡು ವರ್ಷಗಳ ನಂತರ ಚುಂಚನಕಟ್ಟೆ ಜಲಪಾತೋತ್ಸವ

ನಾಳೆ ಸಂಜೆ ೬ ಗಂಟೆಗೆ ಸಚಿವ ಎಸ್‌ಟಿಎಸ್‌ರಿಂದ ಉದ್ಘಾಟನೆ; ಜಲಪಾತಕ್ಕೆ ವರ್ಣರಂಜಿತ ವಿದ್ಯುತ್ ದೀಪಾಲಂಕಾರ

ಭೇರ್ಯ ಮಹೇಶ್

 ಕೆ.ಆರ್.ನಗರ: ಮೈಸೂರು ಜಿಲ್ಲೆಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಪ್ರವಾಸಿ ತಾಣವಾದ ಚುಂಚನಕಟ್ಟೆಯಲ್ಲಿ ಕಾವೇರಿ ನದಿಯ ಜಲಪಾತೋತ್ಸವ ಭಾನುವಾರ (ನ.೧೩) ಸಂಜೆ ೬ ಗಂಟೆಗೆ ನಡೆಯಲಿದೆ.

ಕಾವೇರಿ ನದಿಯ ಧನುಷ್ಕೋಟಿ ಜಲಪಾತೋತ್ಸವಕ್ಕೆ ಲೇಸರ್ ಲೈಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಜಲಪಾತ ಲೇಸರ್ ಬೆಳಕಿನಲ್ಲಿ ಜಗಮಗಿಸುತ್ತಿದ್ದು, ನೋಡುಗರ ಕಣ್ಮನ ಸೆಳೆುುಂವಂತೆ ಸಾಲಿಗ್ರಾಮ ತಾಲ್ಲೂಕು ಆಡಳಿತ ಸಕಲ ವ್ಯವಸ್ಥೆಯನ್ನು ಕಲ್ಪಿಸಿದೆ.

ಚುಂಚನಕಟ್ಟೆಯ ಕಾವೇರಿ ಜಲಪಾತೋತ್ಸವ ಹಿನ್ನೆಲೆಯಲ್ಲಿ ಶ್ರೀರಾಮನ ದೇವಾಲಯ, ಬಸವ ವೃತ್ತ, ಕಾವೇರಿ ನದಿಯ ಸೇತುವೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ವಿಭಿನ್ನ ರೀತಿುಂಲ್ಲಿ ವಿದ್ಯುತ್ ಬೆಳೆಕಿನ ಸೊಬಗು ಕಾರ್ಯಕ್ರಮಕ್ಕೆ ಆಗಮಿಸುವವರಲ್ಲಿ ಉಲ್ಲಾಸ ತರಿಸುವುದು ಖಚಿತ.

ಶ್ರೀರಾಮನ ದೇವಸ್ಥಾನದ ಹಿಂಭಾಗದಲ್ಲಿ ಬೃಹತ್ ವೇದಿಕೆುಂನ್ನು ನಿರ್ಮಿಸಲಾಗಿದ್ದು ಎಲ್.ಇ.ಡಿ. ದೊಡ್ಡ ಪರದೆುಂ ವ್ಯವಸ್ಥೆ ಕೂಡ ವಾಡಲಾಗಿದೆ. ಜ್ಹೀ ಕನ್ನಡ ಸರಿಗಮಪ ಖ್ಯಾತಿುಂ ಹಿನ್ನೆಲೆ ಗಾುಂಕ ಕಂಬದ ರಂಗ್ಂಯು ಸೇರಿದಂತೆ ಅನೇಕ ಖ್ಯಾತ ಗಾುಂಕರು ಹಾಗೂ ರೆಮೊ ಚಿತ್ರದ ತಂಡದಿಂದ ಮನರಂಜನೆ ಕಾರ್ಯಕ್ರಮ ಜೊತೆಗೆ ಹಾಸ್ಯ ರಸದೌತಣವನ್ನು ಖ್ಯಾತ ಹಾಸ್ಯ ನಟರು ನೀಡಲಿದ್ದಾರೆ.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದು, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭಾಗವಹಿಸುವರು. ಶಾಸಕ ಸಾ.ರಾ.ಮಹೇಶ್ ಅಧ್ಯಕ್ಷತೆಯಲ್ಲಿ ಜಲಪಾತೋತ್ಸವ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು, ನಿರ್ದೇಶಕರು, ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಅಧಿಕಾರಿ ವರ್ಗದವರು ಭಾಗವಹಿಸಲಿದ್ದು, ಸಾಲಿಗ್ರಾಮ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಿದ್ದಾರೆ.

೨ ವರ್ಷಗಳ ನಂತರ ಜಲಪಾತೋತ್ಸವ: ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಚುಂಚನಕಟ್ಟೆ ಕಾವೇರಿ ಜಲಪಾತೋತ್ಸವ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ಅದ್ಧೂರಿಯಾಗಿ ಜಲಪಾತೋತ್ಸವ ಕಾರ್ಯಕ್ರಮವನ್ನು ಸರ್ಕಾರ ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ.

ಚುಂಚನಕಟ್ಟೆಯ ಕಾವೇರಿ ಜಲಪಾತೋತ್ಸವ ಹಿನ್ನೆಲೆಯಲ್ಲಿ ಶ್ರೀರಾಮನ ದೇವಾಲಯ, ಬಸವ ವೃತ್ತ, ಕಾವೇರಿ ನದಿಯ ಸೇತುವೆ ಮತ್ತಿತರ ಕಡೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

andolana

Recent Posts

ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲೆಂಡ್‌ನಲ್ಲಿ ಭೀಕರ ಸ್ಫೋಟ: 40 ಮಂದಿ ಸಾವು

ಸ್ವಿಟ್ಜರ್ಲೆಂಡ್‌: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲೆಂಡ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.…

5 mins ago

ಹೊಸ ವರ್ಷಕ್ಕೆ ಮೆಟ್ರೋ ಧಮಾಕಾ: ಒಂದೇ ದಿನ 3.08 ಕೋಟಿ ಆದಾಯ

ಬೆಂಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಒಂದೇ ದಿನ 8.93 ಲಕ್ಷ ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದು, 3.08 ಕೋಟಿ ರೂ…

17 mins ago

ಸಾರಿಗೆ ನೌಕರರಿಗೆ ಬಿಗ್‌ ಶಾಕ್‌ ಕೊಟ್ಟ ರಾಜ್ಯ ಸರ್ಕಾರ

ಬೆಂಗಳೂರು: ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಬಿಗ್‌ ಶಾಕ್‌ ನೀಡಿದೆ. 2026ರ ಜನವರಿ.1ರಿಂದ ಮುಂದಿನ ಆರು…

45 mins ago

ಹೈಕಮಾಂಡ್‌ ತೀರ್ಮಾನಿಸಿದರೆ ರಾಜಕೀಯ ಪದೋನ್ನತಿ: ಸಚಿವ ಪರಮೇಶ್ವರ್‌

ಬೆಂಗಳೂರು: ಹೈಕಮಾಂಡ್‌ ತೀರ್ಮಾನಿಸಿದರೆ ರಾಜಕೀಯ ಪದೋನ್ನತಿ ಆಗುತ್ತದೆ. ಎಲ್ಲರ ರೀತಿಯಲ್ಲಿ ನನಗೂ ಆಕಾಂಕ್ಷೆ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌…

1 hour ago

ಅಕ್ರಮ ಶೆಡ್‌ ತೆರವು ವಿಚಾರ: ಅರ್ಹರಿಗೆ ಮಾತ್ರ ಮನೆ ಎಂದ ಭೈರತಿ ಸುರೇಶ್‌

ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮ ಶೆಡ್‌ ತೆರವಿನ ಹಿನ್ನೆಲೆಯಲ್ಲಿ ಮನೆ ಕೊಡಲು ರಾಜ್ಯ ಸರ್ಕಾರ ಮುಂದಾಗಿದ್ದು, ನಿರಾಶ್ರಿತರಿಗೆ ನಾಳೆಯೇ ಜಿಬಿಎ,…

2 hours ago

ಕೋವಿಡ್‌ ಹಗರಣ: ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಕೆ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣದ ತನಿಖೆಯ ಅಂತಿಮ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಮೈಕೆಲ್‌…

3 hours ago