ತಾತ್ಕಾಲಿಕ ಒಪ್ಪಿಗೆ ದೊರೆಕಿದ್ದು ಅಂತಿಮ ಅನುಮೋದನೆ ಬಾಕಿ
ರಾಜೇಶ್ ಬೆಂಡರವಾಡಿ
ಚಾಮರಾಜನಗರ: ಬೆಳೆಯುತ್ತಿರುವ ಚಾಮರಾಜನಗರದ ಮುಂದಿನ ೨೦ವರ್ಷಗಳ ಬೆಳವಣಿಗೆ ದೃಷ್ಟಿಯಲ್ಲಿರಿಸಿಕೊಂಡು ಚುಡಾ ಸಿದ್ಧಪಡಿಸಿರುವ ಮಾಸ್ಟರ್ ಪ್ಲಾನ್ (ಪರಿಷ್ಕೃತ -೨)ಕರಡು ಪ್ರತಿಗೆ ಅನುಮೋದನೆ ದೊರಕಿದ್ದು ಅಂತಿಮ ಅನುಮೋದನೆಗಾಗಿ ಸರ್ಕಾರಕ್ಕೆ ಕಳಿಸುವುದಷ್ಟೇ ಬಾಕಿ ಇದೆ.
ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರ(ಚುಡಾ) ವ್ಯಾಪ್ತಿ ೧೨೦.೯೯ ಚದರ ಕಿಲೋಮೀಟರ್ ಇದೆ. ಚಾಮರಾಜನಗರ ನಗರಸಭೆಯು ೩೧ ವಾರ್ಡುಗಳಲ್ಲದೆ ನಗರ ಸುತ್ತಮುತ್ತಲಿನ ೨೬ ಗ್ರಾಮಗಳೂ ಇದರಲ್ಲಿ ಸೇರಿವೆ.
ಕೂಡ್ಲೂರು, ಬೂದಿತಿಟ್ಟು, ಶಿವಪುರ, ಕೋಡಿಮೋಳೆ, ಚಂದಕವಾಡಿ, ಬಸವನಪುರ, ಬಂಡಿಗೆರೆ, ದೊಡ್ಡಮೋಳೆ ಇನ್ನಿತರ ಗ್ರಾಮಗಳು ಚುಡಾದ ಕರಡು ನಕ್ಷೆಯಲ್ಲಿದ್ದು, ಈ ಎಲ್ಲಾ ಕಡೆಯ ಬೆಳವಣಿಗೆಯನ್ನು ಮಹಾಯೋಜನೆಯಲ್ಲಿ (ಮಾಸ್ಟರ್ ಪ್ಲಾನ್‌ನಲ್ಲಿ) ದಾಖಲಿಸಲಾಗಿದೆ.
ವಸತಿ, ಉದ್ಯಾನವನ, ವಾಣಿಜ್ಯ, ಕೈಗಾರಿಕೆ, ವ್ಯವಸಾಯ, ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ ವಲಯ-ಹೀಗೆ ವಿವಿಧ ಪ್ರಕಾರಗಳ ಅನುಸಾರ ಭೂಮಿಯನ್ನು ವಿಂಗಡಿಸಲಾಗಿದೆ. ಮುಂದಿನ ೨೦೪೧ನೇ ಇಸವಿಯ ೨.೫೦ ಲಕ್ಷ ಜನಸಂಖ್ಯೆಯನ್ನು ಆಧರಿಸಿ ಸಿದ್ಧಪಡಿಸಿರುವ ಈ ಮಾಸ್ಟರ್ ಪ್ಲಾನ್‌ಗೆ ಕಳೆದ ಮಾರ್ಚ್ ನಲ್ಲಿಯೇ ಸರ್ಕಾರ ತಾತ್ಕಾಲಿಕ ಅನುಮೋದನೆ ನೀಡಿದೆ.
ಕರಡು ಅನುಮೋದನೆ ಬಳಿಕ ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಕ್ಕೆ ೬೦ದಿನಗಳ ಕಾಲಾವಕಾಶ ನೀಡಲಾಗಿತ್ತು. ಅದರಂತೆ ಆಕ್ಷೇಪಗಳು-ಸಲಹೆಗಳನ್ನು ಪಡೆಯಲಾಗಿದೆ. ಕೆಲವೊಂದು ಸಲಹೆಗಳನ್ನು ಅಳವಡಿಸಿಕೊಂಡು ಅಂತಿಮ ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಿಗೆ ಸಲ್ಲಿಸಲು ಪ್ರತಿ ಸಿದ್ಧವಾಗಿದೆ.
ಕುಲಗಾಣ ಶಾಂತಮೂರ್ತಿ ಅವರ ನಂತರ ಚುಡಾಕ್ಕೆ ಯಾರನ್ನೂ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ಅವರೇ ಅಧ್ಯಕ್ಷರಾಗಿದ್ದು ಅವರಿಂದ ಸಹಿಪಡೆದು ಅಂತಿಮ ಒಪ್ಪಿಗೆಗಾಗಿ ಸರ್ಕಾರಕ್ಕೆ ಕಳುಹಿಸಬೇಕಿದೆ.
ಮೂಲಗಳ ಪ್ರಕಾರ ಈ ತಿಂಗಳ ಒಳಗೆ ಸರ್ಕಾರ ಕ್ಕೆ ಸಲ್ಲಿಕೆಯಾಗಲಿದ್ದು ಅಲ್ಲಿ ಅನುಮೋದನೆ ದೊರೆತ ನಂತರ ಹೊಸ ಮಹಾಯೋಜನೆ(ಪರಿಷ್ಕೃತ೨) ಅನುಷ್ಠಾನಕ್ಕೆ ಬರಲಿದೆ. ಚಾ.ನಗರ ನಗರಸಭೆ ಮಾದರಿಯಲ್ಲೇ ಸುತ್ತಮುತ್ತಲಿನ ೨೬ಗ್ರಾಮಗಳವರು ಕಟ್ಟಡಗಳ ನಿರ್ಮಾಣ ಭೂ ಪರಿವರ್ತನೆ, ಇಷ್ಟೇ ಎತ್ತರದಲ್ಲಿ ಕಟ್ಟಡ ಕಟ್ಟಬೇಕೆಂಬ ನಿಯಮಗಳಿಗೆ ಮಹಾಯೋಜನೆ-೧ಜಾರಿಗೊಂಡಾಗಲೇ ಒಳಪಟ್ಟಿದ್ದಾರೆ. ಆದರೆ ಆಸ್ತಿ ತೆರಿಗೆ, ಕುಡಿಯುವ ನೀರು ಇನ್ನಿತರ ಮೂಲಸೌಕರ್ಯ ವ್ಯವಹಾರಗಳೆಲ್ಲಾ ಎಂದಿನಂತೆ ಗ್ರಾಪಂಗಳಲ್ಲೇ ಮುಂದುವರಿದಿದೆ.
ಚುಡಾ ೧೯೯೮ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಆಗ ಚಾಮರಾಜನಗರ ನಗರಸಭೆ ಜೊತೆ ಕೆಲ ಗ್ರಾಮಗಳಷ್ಟೇ ಭಾಗಶಃ ಒಳಪಟ್ಟಿದ್ದವು. ೨೦೦೭ರಲ್ಲಿ ಮಹಾಯೋಜನೆ-೧ ರ ಪರಿಷ್ಕರಣೆ ನಡೆದಿತ್ತು.
ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರ(ಚುಡಾ) ಮಾಸ್ಟರ್ ಪ್ಲಾನ್-೨ಗೆ ಈಗಾಗಲೇ ತಾತ್ಕಾಲಿಕ ಅನುಮೋದನೆ ದೊರಕಿದೆ. ಅಂತಿಮ ಅನುಮೋದನೆ ದೊರಕಬೇಕಿದೆ.
-ಎಂ.ಎಸ್.ಪಂಕಜಾ, ಆಯುಕ್ತರು, ಚುಡಾ.
ಅನುಷ್ಠಾನ ನಿಶ್ಚಿತ
ಸರ್ಕಾರ ಈಗಾಗಲೇ ತಾತ್ಕಾಲಿಕ ಅನುಮೋದನೆ ನೀಡಿರುವುದರಿಂದ ಪರಿಷ್ಕೃತ ಕರಡು-೨ಗೆ ಅನುಮೋದನೆ ದೊರಕಿ ಅದು ಅನುಷ್ಠಾನಗೊಳ್ಳುವುದು ನಿಶ್ಚಿತ ಎಂದು ಚಾ.ನಗರ ನಗರಾಭಿವೃಧ್ಧಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಬೆಂಗಳೂರು : 2026ರ ಹೊಸವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದೆ ಸುರಕ್ಷಿತವಾಗಿ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ.…
ಮುಂಬೈ : ಐಪಿಎಲ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ ( ಕೆಕೆಆರ್) ತಂಡಕ್ಕೆ ನೆರೆಯ ಬಾಂಗ್ಲಾದೇಶದ ಆಟಗಾರನನ್ನು ಖರೀದಿಸಿರುವ ಬಾಲಿವುಡ್…
ಹುಬ್ಬಳ್ಳಿ : ಮರ್ಯಾದೆಗೇಡು ಹತ್ಯೆ ಅಂತಹ ಘಟನೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ…
ಬೆಂಗಳೂರು: ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಅಂತ ತನಿಖೆ ಮಾಡಿ, ಬಳಿಕ ಪುನರ್ ವಸತಿ ಕಲ್ಪಿಸಬೇಕು ಎಂದು ಶಾಸಕ…
ಸ್ವಿಟ್ಜರ್ಲೆಂಡ್: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲೆಂಡ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.…
ಬೆಂಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಒಂದೇ ದಿನ 8.93 ಲಕ್ಷ ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದು, 3.08 ಕೋಟಿ ರೂ…