ಜಿಲ್ಲೆಗಳು

ಮಕ್ಕಳ ದಿನಾಚರಣೆ: ಪ್ರೇಕ್ಷಣೀಯ ಸ್ಥಳಗಳಲ್ಲಿ ಚಿಣ್ಣರ ಕಲರವ

ಮೃಗಾಲಯ, ವಸ್ತು ಪ್ರದರ್ಶನದಲ್ಲಿ ಮಕ್ಕಳಿಗೆ ಉಚಿತ ಪ್ರವೇಶ

ಮೈಸೂರು: ನಗರದ ಅರಮನೆ, ಮೃಗಾಲಯ, ವಸ್ತು ಪ್ರದರ್ಶನದ ಆವರಣ ಮುಂತಾದ ಪ್ರೇಕ್ಷಣಿಯ ಸ್ಥಳಗಳಲ್ಲಿ ಸೋಮವಾರ ಮಕ್ಕಳದ್ದೇ ಕಾರುಬಾರು.

ಮಕ್ಕಳ ದಿನಾಚರಣೆ ಅಂಗವಾಗಿ ನಗರದ ವಿವಿಧ ಶಾಲೆಗಳ ಮಕ್ಕಳು ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಭ್ರಮಿಸಿದರು. ಇದರ ಜೊತೆಗೆ ನಗರದ ವಿವಿಧ ಸಂಘ, ಸಂಸ್ಥೆಗಳು, ಶಾಲೆಗಳು ಮಕ್ಕಳ ದಿನಾಚರಣೆಯನ್ನು ಆಚರಿಸಿದವು.

ಮಕ್ಕಳ ದಿನಾಚರಣೆ ಅಂಗವಾಗಿ ನಗರದ ವಸ್ತು ಪ್ರದರ್ಶನ ಹಾಗೂ ಮೃಗಾಲಯಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ ಮಕ್ಕಳಿಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ಅವರು ಐಸ್ ಕ್ರೀಮ್, ಚಾಕೊಲೇಟ್, ತಂಪು ಪಾನೀಯ, ಮಜ್ಜಿಗೆ ವಿತರಿಸಿ, ಮಕ್ಕಳಿಗೆ ಗುಲಾಬಿ ಹಾಗೂ ಪೆನ್ ನೀಡಿ ಶುಭಕೋರಿದರು. ವ್ಯವಸ್ಥಾಪಕ ಸಿದ್ದೇಗೌಡ, ಎಇ ನಾಗೇಂದ್ರ, ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್‌ ಶಾಸ್ತ್ರಿ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಮೃಗಾಲಯದಲ್ಲಿ ಚಿಣ್ಣರು: ೧೪ ವರ್ಷದ ಒಳಗಿನ ಮಕ್ಕಳಿಗೆ ಸೋಮವಾರ ಮೃಗಾಲಯಕ್ಕೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ೯ ಗಂಟೆಯಿಂದಲೇ ನೂರಾರು ಮಕ್ಕಳು ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಿ ಸಂತಸಪಟ್ಟರು.

ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ ಮಕ್ಕಳಿಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ಅವರು ಐಸ್ ಕ್ರೀಮ್, ಚಾಕೊಲೇಟ್ ವಿತರಿಸಿ ಶುಭಕೋರಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಮರ್ಥನಂ ಸಂಸ್ಥೆುಂ ಹಿತೈಷಿ ಸೀತಾಲಕ್ಷ್ಮೀ ವಾತನಾಡಿ, ಮಕ್ಕಳು ನಾಳಿನ ಪ್ರಜೆಗಳು. ಹಾಗಾಗಿ ನಮ್ಮ ದೇಶದ ಾಂವುದೇ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ವಾಡಬಾರದು ಎಂದು ನೆಹರೂ ಸದಾ ಹೇಳುತ್ತಿದ್ದರು. ಇಂದು ನಾವು ಮಕ್ಕಳಿಗೆ ಒಳ್ಳೆುಂ ಭವಿಷ್ಯವನ್ನು ರೂಪಿಸಿ ಕೊಟ್ಟರೆ ಮುಂದೆ ಅವರು ನಮ್ಮ ರಾಷ್ಟ್ರಕ್ಕೆ ಭದ್ರ ಬುನಾದಿ ಆಗಲಿದ್ದಾರೆ ಎಂದರು.

ಸಮರ್ಥನಂ ಸಂಸ್ಥೆಯ ಶಿವರಾಜು, ನರಸಿಂಹಮೂರ್ತಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಭ್ರಮಾರಂಭ, ವಿಶೇಷ ಶಿಕ್ಷಕಿಯರಾದ ಪಿ.ಪದ್ಮ, ಎಚ್.ವಿದ್ಯಾವತಿ ಸಿಬ್ಬಂದಿಗಳಾದ ರಾಘವೇಂದ್ರ, ಪವಿತ್ರ ಮತ್ತಿತರರು ಹಾಜರಿದ್ದರು.

 

 

 

 

andolana

Recent Posts

ಶೂಟೌಟ್ ಪ್ರಕರಣ | ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ : ಸಿಎಂ ಡಿ.ಕೆ.ಶಿವಕುಮಾರ್

ವಸ್ತುಗಳು, ಬಂದೂಕು ಸೇರಿ ಸಾಕ್ಷಿಗಳು ಲಭ್ಯ ಬೆಂಗಳೂರು : ಹನೂರಿನಲ್ಲಿ ನಡೆದಿರುವ ಶೂಟೌಟ್ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆಗೆ ಆದೇಶ…

5 hours ago

ಮುಂದಿನ ಆಗಸ್ಟ್‌ ಒಳಗೆ ಮೇಕೆದಾಟುಗೆ ಶಂಕುಸ್ಥಾಪನೆ: ಸಚಿವ ಚಲುವರಾಯಸ್ವಾಮಿ

ಮಂಡ್ಯ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೂರದೃಷ್ಠಿಯ ಮೇಕೆದಾಟು ಯೋಜನೆಗೆ 2027ರ ಸ್ವಾತಂತ್ರ ದಿನಾಚರಣೆ ವೇಳೆಗೆ ಶಂಕುಸ್ಥಾಪನೆ ನೆರವೇರಿಸಿ ಅಣೆಕಟ್ಟು…

10 hours ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ

ಮೈಸೂರು: ಮೂವರು ಬೇಟೆಗಾರರ ಎನ್‌ಕೌಂಟರ್‌ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಸುನೀಲ್‌ ಬೋಸ್‌ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ…

11 hours ago

ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣ: ಸಚಿವ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ

ಮೈಸೂರು: ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪು ಆಗಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಈ…

11 hours ago

ಕಾಡಿನಲ್ಲಿ ಗುಂಡಿನ ಮೊರೆತ: ಮೂವರು ಸ್ಥಳದಲ್ಲೇ ಸಾವು- ಉದ್ರಿಕ್ತರಿಂದ ಕಚೇರಿ ಪೀಠೋಪಕರಣ ಧ್ವಂಸ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಅಸುನೀಗಿದ ಘಟನೆ…

12 hours ago

ಕಾವೇರಿ ಅಭಯಾರಣ್ಯದಲ್ಲಿ ಎನ್‌ಕೌಂಟರ್: ಅಕ್ರಮ ಬೇಟೆ ವೇಳೆ ಗುಂಡಿನ ದಾಳಿ, 3 ಮಂದಿ ಮೃತ್ಯು

ಮಹಾದೇಶ್‌ ಎಂ ಗೌಡ; ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಕಾವೇರವನ್ಯ ಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ…

12 hours ago