ಬೇಸಿಗೆಯಿಂದ ಮಕ್ಕಳಲ್ಲಿ ಕಂಡುಬರುತ್ತಿರುವ ಸೋಂಕು; ಮುನ್ನೆಚ್ಚರಿಕೆಗೆ ವೈದ್ಯರ ಸಲಹೆ
– ನವೀನ್ ಡಿಸೋಜ
ಮಡಿಕೇರಿ: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಕೊಡಗು ಜಿಲ್ಲೆಯ ಮಕ್ಕಳಲ್ಲಿ ‘ಚಿಕನ್ ಪಾಕ್ಸ್’ ಹರಡಲು ಶುರುವಾಗಿದೆ.
ಬೇಸಿಗೆ ಸಮಯದಲ್ಲಿ ರಾಶಸ್, ಸಿಡುಬು ಅಥವಾ ಚಿಕನ್ ಪಾಕ್ಸ್, ಚರ್ಮದ ಮೇಲಿನ ತುರಿಕೆ ಸೇರಿದಂತೆ ಚರ್ಮಕ್ಕೆ ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆಗಳು ಜನರನ್ನು ಕಾಡುವುದು ಸಾಮಾನ್ಯ. ಇವುಗಳಲ್ಲಿ ಚಿಕನ್ ಪಾಕ್ಸ್, ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಮಡಿಕೇರಿಯ ಮಕ್ಕಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಗ್ರಾಮೀಣ ಭಾಷೆಯಲ್ಲಿ ‘ಅಮ್ಮ’ ಎಂದು ಕರೆಯಲಾಗುವ ರೋಗದಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ವೆರಿಸೆಲ್ಲಾ ಜೊಸ್ಟರ್ ಎನ್ನುವ ವೈರಾಣುವಿನಿಂದ ಬರುವ ಒಂದು ಸಾಂಕ್ರಾಮಿಕ ರೋಗ ಚಿಕನ್ ಪಾಕ್ಸ್. ಸಾಮಾನ್ಯವಾಗಿ ಇದು 2ರಿಂದ 12 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಚಿಕನ್ ಪಾಕ್ಸ್ ಸೋಂಕಾಗಿರುವ ವ್ಯಕ್ತಿಯ ಗಾಯದ ಸ್ಪರ್ಶದಿಂದ ಅಥವಾ ಅವರು ಬಳಸಿದ ವಸ್ತುಗಳನ್ನು ಉಪಯೋಗಿಸುವುದರಿಂದ ಈ ರೋಗವು ಹರಡುತ್ತದೆ. ರೋಗಿಯು ಕೆಮ್ಮುವುದು, ಸೀನುವುದರಿಂದ ವೈರಾಣುಗಳು ಗಾಳಿಉಲ್ಲಿ ಸೇರಿ ಬೇರೆಯವರಿಗೆ ಉಸಿರಾಟದ ಮುಖಾಂತರ ಹರಡುತ್ತದೆ.
ಚಿಕನ್ ಪಾಕ್ಸ್ ಲಕ್ಷಣಗಳು:
ಒಮ್ಮಿಂದೊಮ್ಮೆ ಜ್ವರ, ಮೈಕೈ ನೋವು, ಮೂಗು ಸೋರುವುದು, ಸುಸ್ತು ಇದಾದ ಒಂದು ಅಥವಾ ಎರಡನೇ ದಿನದಿಂದ ಮೈ ಮೇಲೆ ಮೊಡವೆಯಂತೆ ಗುಳ್ಳೆಗಳಾಗುತ್ತವೆ. ಕ್ರಮೇಣ ಅದರಲ್ಲಿ ನೀರು ತುಂಬಿಕೊಂಡು ನೀರುಗುಳ್ಳೆಗಳಾಗಿ ಹಾಗೂ ಅದರಿಂದ ತುರಿಕೆ ಶುರುವಾಗುತ್ತದೆ. ಗುಳ್ಳೆಗಳು ಮೊದಲು ಹೊಟ್ಟೆ ಹಾಗೂ ಬೆನ್ನಿನ ಮೇಲೆ ಕಾಣಿಸಿಕೊಂಡು ಕ್ರಮೇಣ ಐದು ದಿನಗಳಲ್ಲಿ ದೇಹದ ಇತರೆ ಭಾಗಗಳಲ್ಲಿಯೂ ಕಾಣಿಸಿಕೊಳ್ಳುತ್ತವೆ. ರೋಗ ನೀರೋಧಕ ಶಕ್ತಿಗನುಗುಣವಾಗಿ 250ರಿಂದ 500ರವರೆಗೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ನಂತರ ಗುಳ್ಳೆಗಳು ಕ್ರಮೇಣ ಒಣಗಿ ಹೆಪ್ಪುಗಟ್ಟಿದಂತಾಗಿ ಒಣಗಿ ಉದುರಿ ಹೋಗುತ್ತವೆ.
ಗಂಭೀರ ಪರಿಣಾಮ:
2 ವರ್ಷದ ಒಳಗಿನ ಮಕ್ಕಳು ಹಾಗೂ 12 ವರ್ಷದ ಮೆಲ್ಪಟ್ಟವರಲ್ಲಿ ಇದು ತೀವ್ರತರವಾಗಿ ಕಾಣಿಸಿಕೊಳ್ಳಬಹುದು. ಗರ್ಭಿಣಿಯರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಅಂದರೆ ಎಚ್‌ಐವಿ, ಏಡ್ಸ್, ಕ್ಯಾನ್ಸರ್, ಕಿಮೋಥೆರಪಿ ಮತ್ತು ಸ್ಟಿರಾಯಿಡ್ ತೆಗೆದುಕೊಳ್ಳುವವರಿಗೆ ಚಿಕನ್ ಪಾಕ್ಸ್ ಸೋಂಕು ಉಂಟಾದರೆ ಗಂಭೀರ ಸ್ವರೂಪದಲ್ಲಿರುತ್ತದೆ. ಕೆಲವೊಮ್ಮೆ ಚಿಕನ್ ಪಾಕ್ಸ್ ಸೋಂಕಿನಿಂದ ಸೆಕೆಂಡರಿ ಇನ್‌ಫೆಕ್ಷನ್ ಆಗಬಹುದು ಅಂದರೆ ತ್ವಚೆಯಲ್ಲಿ ಬ್ಯಾಕ್ಟೀರಿಯಲ್ ಸೋಂಕು, ಶ್ವಾಸಕೋಶಕ್ಕೆ ಸೋಂಕಾಗಿ ನ್ಯೂಮೋನಿಯಾ ಹಾಗೂ ಮಿದುಳಿಗೆ ಸೋಂಕಾಗಿ ಎನ್‌ಕೆಫೆಲೈಟಿಸ್ ಆಗಬಹುದು, ಜ್ವರಕ್ಕೆ ಔಷಧ ಮತ್ತು ತುರಿಕೆಗೆ ಕ್ಯಾಲಮೈನ್ ಲೋಶನ್‌ಗಳನ್ನು ಬಳಸಿದರೆ ಸಾಕು.
ಚಿಕನ್ ಪಾಕ್ಸ್‌ಗೆ ಪಾಲಿಸಬೇಕಾದ ವಿಧಾನಗಳು
* ನಿಮ್ಮ ಮಗುವಿಗೆ ಸೋಂಕಾಗಿದೆ ಎಂದು ಗೊತ್ತಾದ ತಕ್ಷಣ ಶಾಲೆಗೆ ಮಾಹಿತಿ ನೀಡಬೇಕು.
* ಮಗುವನ್ನು ಹೊರಗಡೆ ಎಲ್ಲಿಯೂ ಕಳುಹಿಸಬಾರದು.
* ಎಲ್ಲ ಗುಳ್ಳೆಗಳು ಒಣಗುವವರೆಗೂ ಮನೆಯಲ್ಲಿಯೇ ವಿಶ್ರಾಂತಿ ನೀಡಬೇಕು.
* ಮನೆಯಲ್ಲಿ ಬೇರೆ ಮಕ್ಕಳ ಅಥವಾ ದೊಡ್ಡವರಿಂದ ದೂರ ಇರಿಸಬೇಕು.
* ಸೋಂಕಾದ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ ಮುಖ ಹಾಗೂ ಮೂಗನ್ನು ಮುಚ್ಚಿಕೊಳ್ಳಬೇಕು.
* ಊಟದ ತಟ್ಟೆ, ನೀರಿನ ಲೋಟ, ಹಾಸಿಗೆ, ಬಟ್ಟೆಗಳನ್ನು ಯಾರ ಜೊತೆಯೂ ಹಂಚಿಕೊಳ್ಳಬಾರದು.
* ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
* ಮನೆಯಲ್ಲಿ ಸೋಂಕಾದವರಿದ್ದರೆ ತಕ್ಷಣ ವೈದ್ಯರನ್ನು ಕಾಣಬೇಕು.
ಮಡಿಕೇರಿಯಲ್ಲಿ ಚಿಕನ್ ಪಾಕ್ಸ್ ವ್ಯಾಪಕವಾಗಿ ಹರಡುತ್ತಿದೆ. ನನ್ನ ಮಗನಿಗೂ ಸೋಂಕು ತಗುಲಿದೆ. ನಗರದ ಶಾಲೆಯೊಂದರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ರಾಣಿಪೇಟೆ, ಮುತ್ತಪ್ಪ ದೇವಾಲಯ ವ್ಯಾಪ್ತಿಯಲ್ಲಿ ಹೆಚ್ಚಾಗಿದೆ. ಬಹುತೇಕ ಮಂದಿ ಆಯುರ್ವೇದದ ಮೊರೆ ಹೋಗಿದ್ದಾರೆ.
-ಪವನ್ ಪೆಮ್ಮಯ್ತಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ
–ಡಾ.ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ(ಪ್ರಭಾರ), ಕೊಡಗು
ಸಾಧಾರಣವಾಗಿ ಚಿಕನ್ ಪಾಕ್ಸ್ ಬಂದು ಹತ್ತು ದಿನಗಳವರೆಗೂ ಇದು ಬೇರೆಯವರಿಗೆ ಹಬ್ಬುತ್ತದೆ. ಸೀನುವಾಗ, ಕೆಮ್ಮುವಾಗ ಮತ್ತು ಒಬ್ಬರ ಮೈಯನ್ನು ಒಬ್ಬರು ಮುಟ್ಟುವುದರಿಂದಲೂ ಹಬ್ಬುತ್ತದೆ. ಆದ್ದರಿಂದ ಚಿಕನ್ ಪಾಕ್ಸ್ ಇದ್ದ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ.
-ಕೆ.ಬಿ.ಸೂರ್ಯಕುಮಾರ್, ವೈದ್ಯರು, ಮಡಿಕೇರಿ
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…