ಜಿಲ್ಲೆಗಳು

ಚಾಮುಂಡಿ ಬೆಟ್ಟದಲ್ಲಿ ಮಿನಿ ಜಲಪಾತಗಳ ವೈಭವ…!

ಮಳೆನಾಡಾದ ಮೈಸೂರಿನಲ್ಲಿ ತೊರೆ, ಝರಿಗಳ ಪ್ರಕೃತಿ ಪುಳಕ

ಮೈಸೂರು: ಸಣ್ಣಸಣ್ಣ ಜಲಪಾತ, ತೊರೆಗಳಲ್ಲಿ ಹರಿಯುವ ನೀರನ್ನು ನೋಡಲು ಮೈಸೂರಿಗರು ಈಗ ಕೊಡಗು ಹಾಗೂ ಮಲೆನಾಡಿಗೆ ತೆರಳಬೇಕಿಲ್ಲ. ಸತತ ಮಳೆಯ ಕಾರಣ ಚಾಮುಂಡಿಬೆಟ್ಟದ ಹಲವೆಡೆ ಕೃತಕ ಜಲಪಾತಗಳು ಸೃಷ್ಟಿಯಾಗಿವೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರದಾದ್ಯಂತ ಎಲ್ಲೆಲ್ಲೂ ನೀರಧಾರೆ ಕಂಡುಬರುತ್ತಿದೆ. ಇದೇ ವೇಳೆ ಅಧಿಕ ಮಳೆಯ ಕಾರಣದಿಂದ ಚಾಮುಂಡಿಬೆಟ್ಟದಲ್ಲಿ ಸಣ್ಣಸಣ್ಣ ತೊರೆಗಳಲ್ಲಿ ನೀರು ಹರಿಯುತ್ತಿದ್ದು, ನಗರದ ಜನರನ್ನು ತನ್ನತ್ತ ಸೆಳೆಯುತ್ತಿದೆ.

ಕಳೆದ ಒಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ನಗರದಾದ್ಯಂತ ಹಳ್ಳಕೊಳ್ಳಗಳಲ್ಲಿ ನೀರು ತುಂಬಿ ತುಳುಕುತ್ತಿವೆ. ಕುಕ್ಕರಹಳ್ಳಿ, ಲಿಂಗಾಂಬುಧಿ, ಬೋಗಾದಿ, ಶ್ರೀರಾಂಪುರ, ಹೆಬ್ಬಾಳ ಸೇರಿದಂತೆ ಮೈಸೂರು ಸುತ್ತಮುತ್ತಲಿನ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಅದರಂತೆ ಚಾಮುಂಡಿಬೆಟ್ಟದಲ್ಲಿ ಕೂಡ ಮಳೆಯ ಕಾರಣ ಸಣ್ಣಪುಟ್ಟ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

ನೀರಿನ ಹರಿವು ಹೆಚ್ಚಾದ ಕಾರಣ ಬೆಟ್ಟದ ಮೇಲಿಂದ ನಾನಾ ಸ್ಥಳಗಳಲ್ಲಿ ನೀರು ಜಲಪಾತದಂತೆ ಧುಮ್ಮಿಕ್ಕುತ್ತಿದೆ. ಇದನ್ನು ಕಣ್ತುಂಬಿಕೊಳ್ಳಲು ನಗರದ ಜನತೆ ಬೆಟ್ಟದ ಕಡೆಗೆ ಧಾವಿಸುತ್ತಿದ್ದು ಜಲಪಾತದ ದೃಶ್ಯಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ.
ಚಾಮುಂಡಿಬೆಟ್ಟಕ್ಕೆ ತೆರಳುವ ದಾರಿಯುದ್ದಕ್ಕೂ ಕಾಣಿಸುತ್ತಿರುವ ನೀರಿನ ತೊರೆಗಳನ್ನು ಕಂಡು ಭಕ್ತರು ಪುಳಕಿತರಾಗುತ್ತಿದ್ದಾರೆ. ಬೆಟ್ಟದ ಸುಮಾರು 10 ಸ್ಥಳಗಳಲ್ಲಿ ಮಿನಿ ಜಲಪಾತ ಕಂಡುಬಂದಿದೆ. ಬೆಟ್ಟದಿಂದ ಬರುವ ನೀರು ಕಾರಂಜಿ ಕೆರೆಯನ್ನು ಸೇರುತ್ತಿದೆ.
ನಂದಿ ಮಾರ್ಗದಲ್ಲಿ ಮತ್ತೆ ರಸ್ತೆ ಕುಸಿತ: ಮಳೆಯ ಕಾರಣದಿಂದ ಕೆಲ ತಿಂಗಳ ಹಿಂದೆ ನಂದಿ ವಿಗ್ರಹದ ರಸ್ತೆಯಲ್ಲಿ ರಸ್ತೆ ಕುಸಿತ ಕಂಡಿತ್ತು. ಅಲ್ಲಿ ಸಂಚಾರ ನಿಷೇಧಿಸಿದ ಜಿಲ್ಲಾಡಳಿತ ಕುಸಿದ ರಸ್ತೆಯನ್ನು ಭಾಾಗಶಃ ದುರಸ್ತಿಗೊಳಿಸಿತ್ತು. ಆದರೀಗ ತೀವ್ರ ಮಳೆಯ ಕಾರಣ ಅದೇ ರಸ್ತೆಯಲ್ಲಿ ಮತ್ತೆ ಎರಡು ಕಡೆ ಸಣ್ಣ ಪ್ರಮಾಣದಲ್ಲಿ ರಸ್ತೆ ಕುಸಿದಿದೆ. ಹೀಗಾಗಿ ಅಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

andolanait

Recent Posts

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

3 hours ago

ಓದುಗರ ಪತ್ರ: ದಸರಾ ಬಂದಾಗ ಮಾತ್ರ ಮೈಸೂರಿಗೆ ಸಿಂಗಾರ

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…

3 hours ago

ಓದುಗರ ಪತ್ರ: ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಕಡ್ಡಾಯವಾಗಲಿ

ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…

3 hours ago

ಓದುಗರ ಪತ್ರ: ಯುಪಿಐ ವಹಿವಾಟು ಶುಲ್ಕ; ಹೊರೆಯಾಗದಿರಲಿ

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…

3 hours ago

ಮೋದಿ ಅಧಿಕಾರ ಪರ್ವ ರಜತ ಮಹೋತ್ಸವ: ಏನಿತ್ತು? ಏನಿಲ್ಲ?

ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…

3 hours ago

ತನ್ನನ್ನು ತಾನೇ ಚಿವುಟಿ ಎಚ್ಚರಿಸಿದ್ದ ನೆಹರೂ

ಜವಾಹರಲಾಲ್ ಎಂಬ ಅಪಾಯಕಾರಿ ಮನುಷ್ಯ ೬ ಬಾರಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ೩ ಬಾರಿ ಸತತವಾಗಿ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್…

4 hours ago