ಜಿಲ್ಲೆಗಳು

ಚಾಮರಾಜನಗರದಲ್ಲಿ ವಿಜೃಂಭಣೆಯ ಹನುಮ ಜಯಂತ್ಯೋತ್ಸವ

ಸಾಂಸ್ಕೃತಿಕ ಕಲಾತಂಡಗಳ ಶ್ರೀಆಂಜನೇಯಸ್ವಾಮಿ ವಿಗ್ರಹ ಮೂರ್ತಿ  ಮೆರವಣಿಗೆ

 ಚಾಮರಾಜನಗರ: ಶ್ರೀ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ   ಹನುಮ ಜಯಂತಿಯ ಪ್ರಯುಕ್ತ  ನಗರದಲ್ಲಿ ಶ್ರೀಆಂಜನೇಯ ಸ್ವಾಮಿ ವಿಗ್ರಹಮೂರ್ತಿ ಯನ್ನು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಯುತು.

ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ   ಶ್ರೀ ಅಭಯ ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ , ಹೋಮಹವನ ನಡೆದು ಮಧ್ಯಾಹ್ನ ಮಹಾ ಮಂಗಳಾರತಿ  ನೆರವೇರಿತ್ತು. ತದನಂತರ ಪ್ರಸಾದ ವಿತರಿಸಲಾಯಿತು.

ಮಧ್ಯಾಹ್ನ 3 ಗಂಟೆಯಲ್ಲಿ ಹನುಮ ಉತ್ಸವ ಮೂರ್ತಿಗೆ  ಪೂಜೆ ಸಲ್ಲಿಸಿ  ಉಪವಿಭಾಗಾಧಿಕಾರಿ ಗೀತಾ ಉಡೆದಾಲ ಹಾಗೂ ತಹಸೀಲ್ದಾರ್ ಬಸವರಾಜು ಪುಪ್ಷಾರ್ಚನೆ ಮಾಡುವ ಮೂಲಕ  ಚಾಲನೆ ನೀಡಿದರು.

ಕಲಾತಂಡಗಳಾದ ನಂದಿಧ್ವಜ, ವೀರಗಾಸೆ, ಚೆಂಡೆವಾದ್ಯ, ಡೊಳ್ಳುಕುಣಿತ, ಗಾಡಿಗೊಂಬೆ ಸೇರಿ ನಾನಾ ಕಲಾತಂಡಗಳೊಂದಿಗೆ ಯುವಕರು ಕೇಸರ ಧ್ವಜಾ ಹಿಡಿದು ಜೈ ಶ್ರೀರಾಮ್, ಜೈ ಹನುಮ ಘೋಷಣೆ ಕೂಗಿ  ಸಂಭ್ರಮಿಸಿದರು.

ಶ್ರೀ ಅಭಯ ಕಾರ್ಯಸಿದ್ದಿ ಆಂಜಜನೇಯ ದೇವಸ್ಥಾನದ ಮುಂಬಾಗದಿಂದ ಹೊರಟ ಮೆರವಣಿಗೆ ತರಕಾರಿ ಮಾರುಕಟ್ಟೆ ರಸ್ತೆ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ , ಭುವನೇಶ್ವರಿ ವೃತ್ತ, ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣ ರಸ್ತೆ, ವಾಣಿಯರ್ ರಸ್ತೆ, ಗುಂಡ್ಕುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ರಥದಬೀದಿ ಮಾರ್ಗವಾಗಿ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಸಮಾಪ್ತಿಗೊಂಡಿತು.

ಮೆರವಣೆಗೆಯಲ್ಲಿ  ಜಯಂತ್ಯೋತ್ಸವ ಸಮಿತಿ ಸಂಚಾಲಕರಾದ ಶಿವುವಿರಾಟ್,  ಪ್ರವೀಣ್,   ಮುಖಂಡರಾದ.  ಕೆಲ್ಲಂಬಳ್ಳಿ ಸೋಮನಾಯಕ,  ಎಪಿಎಂಸಿ ಅಧ್ಯಕ್ಷ  ಮನೋಜ್ ಪಟೇಲ್, ಅಮ್ಮನಪುರಮಲ್ಲೇಶ್, ಜಿ.ಪಂಮಾಜಿ ಅಧ್ಯಕ್ಷೆ  ನಾಗಶ್ರೀ ಪ್ರತಾಪ್,  ನಗರಸಭಾ ಮಾಜಿ ಅಧ್ಯಕ್ಷ  ಸುರೇಶ್ ನಾಯಕ, ನಿಜಗುಣರಾಜು,  ಡಿ ವೈಎಸ್ ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಸಮಿತಿಯ ಸದಸ್ಯರಾದ ಮಹೇಶ್, ಮಧು, ಹರ್ಷತ್‌ಗೌಡ, ಮಹೇಂದ್ರ, ಸಿ.ವಿ.ಮಣಿಕಂಠ ಇತರರು ಭಾಗವಹಿಸಿದ್ದರು.

andolanait

Recent Posts

ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡ ಮೈಸೂರಿಗರು

ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಜಗಮಗಿಸುವ ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ಸೊಬಗಿನ ಮಧ್ಯೆ ಪಾರಂಪರಿಕ ಪೊಲೀಸ್‌ ಬ್ಯಾಂಡ್‌ನ ಸದ್ದಿನೊಂದಿಗೆ…

3 hours ago

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕಾಫಿ ಪುಡಿ ಅಂಗಡಿ ಬೆಂಕಿಗಾಹುತಿ

ಕೊಳ್ಳೇಗಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿ ಬುಧವಾರ ರಾತ್ರಿ ಸಂಪೂರ್ಣ…

3 hours ago

ಮೈಸೂರು, ಚಾ.ನಗರ, ಮಂಡ್ಯ, ಕೊಡಗು ಎಸ್‌ಪಿಗಳ ವರ್ಗ

ಮೈಸೂರು: ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 25 ಮಂದಿ ಐಪಿಎ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ. ಅವರಲ್ಲಿ…

3 hours ago

ಕೊಡಗು ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಿಂದುಮಣಿ ನೇಮಕ

ಕೊಡಗು: ಕರ್ನಾಟಕ ಸರ್ಕಾರದ ಆದೇಶದಂತೆ ಕೊಡಗಿನ ಪೊಲೀಸ್‌ ವರಿಷ್ಠಾಧಿಕಾರಿ ರಾಮರಾಜನ್‌ ಅವರನ್ನು ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಖಾಲಿಯಾದ ಸ್ಥಳಕ್ಕೆ…

3 hours ago

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದ ಟೇಲ್ಸ್ ಬೈ ಪರಿ ಕೃತಿಯ ಪುಟ್ಟ ಲೇಖಕಿ ಪರಿಣಿತಾ

ಬೆಂಗಳೂರು: ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ 'ಟೇಲ್ಸ್ ಬೈ ಪರಿ' ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ…

7 hours ago

ಅಕ್ರಮ ನಿವಾಸಿಗಳಿಗೆ ಮನೆ: ಸರ್ಕಾರದ ವಿರುದ್ಧ ವಿ.ಸೋಮಣ್ಣ ಆಕ್ರೋಶ

ನವದೆಹಲಿ: ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಮನೆ ನೀಡುತ್ತಿದ್ದಾರೆ. ಇದು ರಾಜ್ಯ ಸರ್ಕಾರದ ದಡ್ಡತನದ ಪರಮಾವಧಿ ಎಂದು ಕೇಂದ್ರ ಸಚಿವ…

7 hours ago