ಹನೂರು: ಬಿಸಿಲ ಬೇಗೆಗೆ ಕಾಡಾನೆ ಹಿಂಡು ರಸ್ತೆಬದಿಯ ಹಳ್ಳದಲ್ಲೇ ರಿಲ್ಯಾಕ್ಸ್‌ಗೆ ಜಾರಿದ ಘಟನೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯದ ವಡಕೆಹಳ್ಳ ರಸ್ತೆಯಲ್ಲಿ ನಡೆದಿದೆ.
ಬಿಸಿಲ ಬೇಗೆಗೆ ತತ್ತರಿಸಿದ ಆನೆಗಳ ಹಿಂಡು ರಸ್ತೆಬದಿಯ ಹಳ್ಳದಲ್ಲೇ ಮಿಂದು, ದಣಿವಾರಿಸಿಕೊಂಡು ರಿಲ್ಯಾಕ್ಸ್ ಗೆ ಜಾರಿದ್ದವು. ರಸ್ತೆಬದಿಯೇ ಆನೆಗಳ ಹಿಂಡು ಕಂಡ ವಾಹನ ಸವಾರರು ಹೌಹಾರಿದರು.
ರಿಲಾಕ್ಸ್ ಬಳಿಕ ಗಜಪಡೆಯು ರಸ್ತೆ ದಾಟಿದ್ದರಿಂದ ಕೆಲ ಕ್ಷಣ ವಾಹನ ಸವಾರರಿಗೆ ಆತಂಕ ಸೃಷ್ಟಿಯಾಗಿತ್ತು.
ಇತ್ತೀಚಿನ ದಿನಗಳಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹಾಗೆಯೇ, ಈ ಮಾರ್ಗವು ಅಂತರರಾಜ್ಯಕ್ಕೆ ಸೇರಿಕೊಂಡಿರುವುದರಿಂದ ಅತಿ ಹೆಚ್ಚು ವಾಹನಗಳು ಸಂಚರಿಸುತ್ತಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ನಿಗಾ ಇಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇನ್ನು ಅರಣ್ಯ ವ್ಯಾಪ್ತಿಯಲ್ಲಿರುವ ಕೆರೆಕಟ್ಟೆಗಳು ಬೇಸಿಗೆಯಾದ್ದರಿಂದ ಖಾಲಿಯಾಗಿದ್ದು ಸಂತೆಖಾನೆ ಸಮೀಪ ಚೆಕ್ ಡ್ಯಾಂ ನಿರ್ಮಾಣ ಮಾಡಿರುವುದರಿಂದ ನೀರು ಸಂಗ್ರಹವಾಗಿದೆ. ಈ ಹಿನ್ನೆಲೆ ಆನೆಗಳು ನೀರು ಕುಡಿಯಲು ಹಾಗೂ ಬಿಸಿಲಿನ ಬೇಗೆ ತಡೆಯಲು ತನ್ನ ಮರಿಗಳೊಂದಿಗೆ ಜಲಕ್ರೀಡೆಯಲ್ಲಿ ತೊಡಗಿಸಿಕೊಂಡಿವೆ.
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…
ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…