ಚಾಮರಾಜನಗರ

ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರ ಲಗ್ಗೆ: ಪ್ರಕೃತಿ ಸೌಂದರ್ಯಕ್ಕೆ ಮನಸೋತ ಜನತೆ

ಹನೂರು: ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಬರುತ್ತಿದ್ದು, ಇಂದು ಕೂಡ ಜನಜಂಗುಳಿಯಿಂದ ಕೂಡಿದೆ.

ತೆಪ್ಪವಿಹಾರದಲ್ಲಿ ಪ್ರವಾಸಿಗರು: ತಾಲ್ಲೂಕಿನ ಗಡಿ ಭಾಗದಲ್ಲಿರುವ ಹೊಗೇನಕಲ್ ಜಲಪಾತ ವೀಕ್ಷಿಸಲು ರಾಜ್ಯದ ನಾನಾ ಭಾಗಗಳಿಂದ ವೀಕೆಂಡ್ ರಜಾ ದಿನಗಳನ್ನು ಕಳೆಯಲು ಪ್ರವಾಸಿಗರು ತಮಿಳುನಾಡಿನಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ತೆಪ್ಪ ವಿಹಾರಕ್ಕೆ ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದು, ಜಲಪಾತ ವೀಕ್ಷಿಸಲು ಮುಗಿಬಿದ್ದರು.

ವರ್ಷಾಂತ್ಯದಲ್ಲಿ ಪ್ರವಾಸಿಗರ ದಂಡು: ಕರ್ನಾಟಕದ ನಯಾಗರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೆನಕಲ್ ಜಲಪಾತವನ್ನು ವೀಕ್ಷಿಸಲು ಮತ್ತು ಅಲ್ಲಿನ ಪ್ರೇಕ್ಷಣೀಯ ಕಲ್ಲು ಬಂಡೆಗಳ ನಡುವೆ ಚಿಮ್ಮುವ ನೀರಿನ ರಭಸದ ಜೊತೆಗೆ ಅಲ್ಲಿನ ದೃಶ್ಯಕಾವ್ಯವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿ ಪ್ರಕೃತಿಯ ಸೌಂದರ್ಯ ಸವಿಯುತ್ತಿದ್ದಾರೆ.

ಕಣ್ಮನ ಸೆಳೆಯುವ ತೆಪ್ಪವಿಹಾರ: ಜಲಪಾತ ವೀಕ್ಷಿಸಲು ಬಂದಂತ ಪ್ರವಾಸಿಗರು ತೆಪ್ಪದಲ್ಲಿ ತೆರಳುವ ವೇಳೆಯಲ್ಲಿ ಮೊಬೈಲ್ ನಲ್ಲಿ ವಿಹಾರವನ್ನು ಸೆರೆಹಿಡಿದು ಖುಷಿ ಪಡುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಶೇರ್‌ ಮಾಡುತ್ತಿದ್ದು, ತೆಪ್ಪಗಳು ಮಣಿ ಜೋಡಣೆಯಂತೆ ಒಂದರ ಹಿಂದೆ ಸಾಲಾಗಿ ಸಾಗುತ್ತಿರುವ ದೃಶ್ಯ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

ಬಳಿಕ ಅಲ್ಲಿ ಮಸಾಜ್ ಮಾಡಿಸಿಕೊಳ್ಳಲು ಸಹ ಪ್ರವಾಸಿಗರು ಮುಗಿಬಿದ್ದಿದ್ದು, ವರ್ಷಾಂತ್ಯದಿಂದ ಜಂಜಾಟದಲ್ಲಿದ್ದ ಪ್ರವಾಸಿಗರಿಗೆ ಉತ್ತಮ ವಾತಾವರಣ ಕಂಡು ಬಂದಿದೆ.

ಆಂದೋಲನ ಡೆಸ್ಕ್

Recent Posts

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ..!

ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್‌…

35 mins ago

ಓದುಗರ ಪತ್ರ: ಸಾಧಕರಿಗೆ ಸಂದ ಗೌರವ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಅಪಾರ ಕೊಡುಗೆಯ ಸ್ಮರಣಾರ್ಥ ಹಾಗೂ ಅವರ ಪರಿಕಲ್ಪನೆಯ ಮಾನಸಗಂಗೋತ್ರಿಯಲ್ಲಿ ಇರುವ ಬಯಲು…

4 hours ago

ಓದುಗರ ಪತ್ರ: ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಲಿ

ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ತಮಿಳುನಾಡು ಸರ್ಕಾರವು ಪದೇ ಪದೇ ಕರ್ನಾಟಕದ ಮೇಲೆ ಒತ್ತಡ ಹೇರುವುದು ಹಾಗೂ ಇದರಿಂದಾಗಿ…

4 hours ago

ಓದುಗರ ಪತ್ರ: ಡಿಜಿಟಲ್ ಲಗೇಜ್ ಲಾಕರ್ ಎಲ್ಲೆಡೆ ವಿಸ್ತರಿಸಲಿ

ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅತ್ಯಾಧುನಿಕ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆ ಆರಂಭಿಸಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಪ್ರತಿದಿನ ರಾಜದಾದ್ಯಂತ ಹೆಚ್ಚಿನ…

4 hours ago

ಮಗನ ನೆನಪಲ್ಲಿ ಪೋಷಕರ ಮಾದರಿ ಕಾರ್ಯ

ಪ್ರೊ. ಬಿ. ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮಂಡ್ಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪಶಸ್ತಿ ಪ್ರೋತ್ಸಾಹ ಮಂಡ್ಯದ ಕರ್ನಾಟಕ…

4 hours ago

ಭತ್ತದ ಬೆಳೆಗೆ ಎಲೆ ಸುರುಳಿ-ಬೆಂಕಿ ರೋಗದ ಬಾಧೆ

ಸಿಂಗಿ ಸತೀಶ್ ತಾಕುಗಳನ್ನು ಪರಿಶೀಲಿಸಿದ ಕೃಷಿ ವಿಜ್ಞಾನಗಳು; ಮುನ್ನೆಚ್ಚರಿಕೆ ವಹಿಸಲು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಲಹೆ  ಗೋಣಿಕೊಪ್ಪ: ಕೊಡಗಿನಲ್ಲಿ ಭತ್ತ…

5 hours ago