ಹನೂರು : ತಾಲೂಕಿನ ಮಹದೇಶ್ವರ ಬೆಟ್ಟ ವನ್ಯಧಾಮದ ನಿಸರ್ಗದ ಮಡಿಲಿನಲ್ಲಿ ಹತ್ತಾರು ಎಕರೆ ಕೃಷಿ ಭೂಮಿಯಲ್ಲಿ ಕೃಷಿ, ತೋಟಗಾರಿಕೆ , ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಾಣೆ, ರೇಷ್ಮೆ, ಪುಷ್ಪ ಹಾಗೂ ಅರಣ್ಯ ಕೃಷಿಯನ್ನು ಮಾಡುವ ಮೂಲಕ ತಮ್ಮ ಜಮೀನನ್ನು ಕೃಷಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಿರುವ ಪ್ರಗತಿ ಪರ ರೈತರೊಬ್ಬರು ಲಂಡನ್‌ನಲ್ಲಿ ಕಾನೂನು ಪದವಿ ಪಡೆದಿರುವ ಪುತ್ರಿ ಮದುವೆಯನ್ನು ಹೊಲದಲ್ಲಿ ನಡೆಸಲಿದ್ದಾರೆ.
ರೈತ ಬರೀ ಬೆಳೆ ಬೆಳೆಯುತ್ತಾ ಕುಳಿತರೆ ಸಾಲದು, ತನ್ನ ಕೃಷಿ ಚಟುವಟಿಕೆಯನ್ನು ಪ್ರತಿಯೊಬ್ಬರಿಗೂ ಪರಿಚಯಿಸಬೇಕು. ಅದರ ಮೂಲಕ ರೈತನ ಕೃಷಿ ಭೂಮಿಯೂ ಕೃಷಿ ಪ್ರವಾಸೋದ್ಯಮ ತಾಣವಾಗಬೇಕು ಎಂಬ ಪರಿಕಲ್ಪನೆ ಹುಟ್ಟು ಹಾಕಿ, ಕಿಸಾನ್ ಅಗ್ರೋ ಟೂರಿಸಂ ಡೆವಲಪ್ಮೆಂಟ್ ಕಂಪನಿ ಮೂಲಕ ರೈತರನ್ನು ಕೃಷಿ
ಪ್ರವಾಸೋದ್ಯಮಿಗಳಾಗಿಸಲು ಹೊರಟಿರುವ ಗಡಿ ಜಿಲ್ಲೆ ಚಾಮರಾಜನಗರದ ಚಿಂಚಳ್ಳಿಯ ರೈತ ಪಿ. ದಯಾನಂದ್ ಅವರು ತಮ್ಮ ಪುತ್ರಿ ವಿವಾಹವನ್ನುತಮ್ಮ ಹೊಲದಲ್ಲೇ ಏರ್ಪಡಿಸಿದ್ದಾರೆ.
ತಮ್ಮ ಹೊಲವನ್ನು ನಿಸರ್ಗದ ಮಡಿಲಿನಂತೆ ಸೃಷ್ಠಿ ಮಾಡಿದ್ದು, ಅಲ್ಲಿ ಏನುಂಟು ಏನಿಲ್ಲ ಎಂಬುವಂತೆ ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ಎಲ್ಲೆಡೆಯಿಂದ ಸಂಗ್ರಹಿಸಿ ತಂದು, ಸಂರಕ್ಷಣೆ ಮಾಡುವ ಮೂಲಕ ಹೊಲದಲ್ಲೇ ಕಾಡನ್ನೇ ಬೆಳೆಸಿದ್ದಾರೆ. ಅಲ್ಲಿ ದುಂಬಿಗಳ ಜೈಂಕಾರ, ಚಿಟ್ಟೆ ಪಕ್ಷಿಗಳ ಕಲರವ ಕೇಳುವಂತಹ ವಾತವರಣ ನಿರ್ಮಾಣಮಾಡಿದ್ದು, ಅಲ್ಲೇ ತಮ್ಮ ದ್ವೀತಿಯ ಪುತ್ರಿ ರಶ್ಮಿ ದಯಾನಂದ್ ಅವರನ್ನು ಬೆಂಗಳೂರಿನ ಕುಬೇರ್ ಅವರಿಗೆ ಧಾರೆ ಎರೆದುಕೊಡಲಿದ್ದಾರೆ.
ಕೃಷಿ ಪ್ರವಾಸೋದ್ಯಮದಲ್ಲಿ ಅಸಕ್ತಿ ಹೊಂದಿರುವ ಪಿ. ದಯಾನಂದ್ ಅವರು ಹಿಂದೆ ಮದುವೆಗಳು ಹಳ್ಳಿಯ ಮನೆಗಳಲ್ಲಿ ನೆಂಟರಿಷ್ಟರ ಸಮ್ಮುಖದಲ್ಲಿ ನಡೆಸುತ್ತಿದ್ದವು. ಇದೀಗ ನಮ್ಮ ಮಗಳ ಮದುವೆ ನಾನು ಹತ್ತಾರು ವರ್ಷಗಳಿಂದ ಶ್ರಮಪಟ್ಟು ನೆಟ್ಟಿರುವ ಮರಗಿಡಗಳು, ಪಕ್ಷಿಗಳ ಕಲರವ, ದುಂಬಿಯ ಜೈಕಾರದೊಂದಿಗೆ ಇಲ್ಲೇ ಸಿಗುವ ಸ್ಧಳೀಯ ಸಸ್ಯಗಳ ಅಲಂಕಾರರೊಂದಿಗೆ ನಡೆಯಲಿ.
ಮದುವೆಗೆ ಬರುವ ಬಂಧುಬಾಂಧವರಿಗೆ ಕೃಷಿ ಪ್ರವಾಸೋದ್ಯಮವೂ ಆಗಲಿ, ತೋಟಗಾರಿಕೆ, ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಾಣೆ, ರೇಷ್ಮೆ, ಹಾಗೂ ಅರಣ್ಯ ಕೃಷಿಯನ್ನು ನೋಡಿ ಸಂಭ್ರಮಿಸುವ ಮೂಲಕ ಮದುವೆಯಲ್ಲಿ ಭಾಗಿಯಾಗಲಿ ಎಂಬ ಉದ್ದೇಶದಿಂದ ಹೊಲದಲ್ಲೇ ಮಾವು ಹಲಸಿನ ಮರದಡಿ ವಿವಾಹ ನಡೆಸುತ್ತಿದ್ದೇವೆ. ಇದೇ ನಮ್ಮ ಮಗಳು ಮತ್ತು ಅಳಿಯನ ಆಶಯವಾಗಿತ್ತು ಎನ್ನುತ್ತಾರೆ ದಯಾನಂದ್.
ಮದುವೆಗೆ ಬರುವವರು ಸಾವಿರಾರು ಸಸ್ಯ ವರ್ಗಗಳ ಜೊತೆಗೆ ಹತ್ತಾರು ಬೆಳೆ ನೋಡಬಹುದಾಗಿದ್ದು, ನೂರಾರು ಬಗೆ ಬಗೆಯ ಹಣ್ಣುಗಳನ್ನು ಸವಿಯಬಹುದಾಗಿದೆ. ಬರಗೂರ್, ಹಳ್ಳಿಕಾರ್, ತಳಿ ಹಸುಗಳು,ಕುರಿ ಕೋಳಿ, ಮೇಕೆ ಹಾಗೂ ಕತ್ತೆಗಳನ್ನು ಸಾಕುತ್ತಿರುವುದನ್ನು ನೋಡಬಹುದು.
ಎಣ್ಣೆ ಘಟಕ, ಸುಗಂಧ ತಯಾರಿಕಾ ಘಟಕವೂ ಇಲ್ಲಿದ್ದು, ತೋಟಕ್ಕೆ ಭೇಟಿ ನೀಡುವವರಿಗೆ ಕೃಷಿ ತಿಳುವಟಿಕೆ ಮೂಡಿಸಬೇಕು ಎಂಬ ಉದ್ದೇಶದಿಂದ ವಿವಿಧ ಬಗೆಯ ಪರಿಕರಗಳ ಜೊತೆಗೆ ಎತ್ತಿನ ಗಾಡಿ, ಕುದುರೆಗಾಡಿ, ವಿವಿಧ ಮಾದರಿಯ ಸ್ಕೂಟರ್ ಮತ್ತು ಕಾರುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.
ಹಳ್ಳಿಗಾಡಿನವರೇ ಸಾಲ ಸೋಲವಾದ್ರು ಸರಿ ಎಂದು ದೊಡ್ಡ ದೊಡ್ಡ ನಗರಿ, ವಿದೇಶದಲ್ಲಿ ಮದುವೆ ಮಾಡಿಸುವ ಈ ಕಾಲದಲ್ಲಿ ಲಂಡನ್‌ನಲ್ಲಿ ವ್ಯಾಸಂಗ ಮುಗಿಸಿರುವ ಪುತ್ರಿ ವಿವಾಹವನ್ನು ಹನೂರು ತಾಲೂಕಿನ ಚಿಂಚಹಳ್ಳಿ ಗ್ರಾಮದ ರೈತ ಪಿ. ದಯಾನಂದ್ ಅವರು ಶ್ರಮಪಟ್ಟು ಬೆಳೆಸಿರುವ ಸಾವಿರಾರು ಸಸ್ಯೆ ಕಾಶಿಯ ನಡುವೆ ಸಿಗುವ ಬಗೆ ಬಗೆಯ ಸೊಪ್ಪುಗಳಿಂದ ಅಲಂಕಾರಮಾವು, ಹಲಸಿನ ಮರದಡಿ ಚಪ್ಪರ ನಿರ್ಮಿಸಿ ಪುತ್ರಿ ವಿವಾಹಶಾಸ್ತ್ರಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.
ಹುಣಸೂರು: ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲ್ಲೂಕಿನ ಯಶೋಧರಪುರ ಗೇಟ್ ಬಳಿ…
ಮೈಸೂರು: ರಂಗವಲ್ಲಿ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ: 28.01.2026 ಮತ್ತು 29.01.2026ರ ಸಂಜೆ…
ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡರನ್ನು…
ವಾಷಿಂಗ್ಟನ್: ಅಮೇರಿಕಾದಾದ್ಯಂತ ಬೀಸುತ್ತಿರುವ ಭೀಕರ ಹಿಮಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹಿಮಪಾತ ಹಾಗೂ ಮೈಕೊರೆಯುವ ಚಳಿಗೆ ಇದುವರೆಗೆ ಸುಮಾರು 25ಕ್ಕೂ ಹೆಚ್ಚು…
ಬೆಂಗಳೂರು: ನಟಿ ಕಾವ್ಯಾಗೌಡ ಹಾಗೂ ಆಕೆಯ ಪತಿ ಸೋಮಶೇಖರ್ ಮೇಲೆ ಪತಿ ಸಂಬಂಧಿಕರೇ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ…
ಬೆಂಗಳೂರು: ಅರಬ್ಬಿ ಸಮುದ್ರದ ಮೇಲೆ ತೇವಾಂಶ ಭರಿತ ಮೋಡಗಳು ಹಾದು ಹೋಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಸೋಮವಾರ ಮಳೆಯಾಗಿದೆ. ರಾಜಧಾನಿ…