ಜಾನಪದ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಇಂದವಾಡಿ ವೆಂಕಟೇಶ್ ಅಭಿಪ್ರಾಯ
ಗುಂಡ್ಲುಪೇಟೆ: ಜನಪದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಯಾವತ್ತೂ ಸಾವಿಲ್ಲ, ನಾಡಿನಾದ್ಯoತ ತಮ್ಮ ಕಲೆಯನ್ನು ಪಸರಿಸಿರುವ ತಂಬೂರಿ ಕಲಾವಿದ ಕೆ.ಬಿ.ರಾಚಯ್ಯ ಈ ಮಣ್ಣಿನ ವರಪ್ರಸಾದ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರೊ.ಇಂದುವಾಡಿ ವೆಂಕಟೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಚಪ್ಪಾಜಿ ಜಾನಪದ ಕಲಾಸಂಘದ ವತಿಯಿಂದ ಆಕಾಶವಾಣಿ ‘ಎ’ ಗ್ರೇಡ್ ತಂಬೂರಿ ಕಲಾವಿದರಾದ ದಿ.ಕೆ.ಬಿ. ರಾಚಯ್ಯ ಅವರ 25ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಮಣ್ಣಿನ ಪರಂಪರೆಯನ್ನು ಎತ್ತಿ ಹಿಡಿಯುತ್ತಿರುವ ಜನಪದ ಕಲಾವಿದರು ನಾಡಿನಾದ್ಯಂತ ಪಸರಿಸಬೇಕು. ಆಕಾಶವಾಣಿ ಎ ಗ್ರೇಡ್ ತಂಬೂರಿ ಹಿರಿಯ ಕಲಾವಿದರಾದ ದಿವಂಗತ ಕೆ.ಬಿ. ರಾಚಯ್ಯನವರಂತೆ ಅವರ ಮಗನಾದ ಸಿದ್ದರಾಜು ಕೂಡ ತಂಬೂರಿ ಕಲಾವಿದರಾಗಿ ಮುಂದುವರಿಯುತ್ತಿರುವುದು ನಿಜಕ್ಕೂ ಶ್ಲಾಘನಿಯ ಎಂದು ಹೇಳಿದರು.
ಈ ನೆಲದ ಮಣ್ಣಿನ ಸೊಗಡೇ ಹಾಗೇ, ಜನಪದವನ್ನು ಉತ್ತಿ ಬೆಳೆಸಿ, ಸಾಕಷ್ಟು ಕಲಾವಿದರನ್ನು ಹುಟ್ಟು ಹಾಕಿದೆ. ಇಂದಿನ ಆಧುನಿಕ ತಂತ್ರಜ್ಞಾನ ಯುಗದ ಭರಾಟೆಯಲ್ಲಿಯೂ ಜನಪದ ಕಲೆಯನ್ನು ಉಳಿಸಿ ಬೆಳೆಸುವಂತಹ ಕೆಲಸ ಹೀಗೆ ಮುಂದುವರಿಯಲಿ ಎಂದು ಹಾರೈಸಿದರು.
ಜಾನಪದ ಅಕಾಡೆಮಿ ಸದಸ್ಯ ಉಮೇಶ್ ಮಾತನಾಡಿ, ಪವಾಡ ಪುರುಷರಾದ ಮಂಟೇಸ್ವಾಮಿ, ಸಿದ್ದಪ್ಪಾಜಿ, ಮಹದೇಶ್ವರ ಸ್ವಾಮಿ ನೆಲೆ ನಿಂತಿರುವ ನಾಡು ಚಾಮರಾಜನಗರ, ಮಂಡ್ಯ, ಮೈಸೂರು ಈ ನೆಲವು ಸಾಕಷ್ಟು ಕಲಾವಿದರನ್ನು ಹುಟ್ಟು ಹಾಕಿ ರಾಷ್ಟ್ರದ್ಯoತ ಈ ನಾಡಿನ ಕಲೆ, ಸಂಸ್ಕೃತಿಯನ್ನು ಪಸರಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಚಿಕ್ಕಲ್ಲೂರು ಕ್ಷೇತ್ರದ ಭಾರತ್ ಪ್ರಭುರಾಜೇ ಅರಸು ಸ್ವಾಮೀಜಿ, ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಕೊಳ್ಳೇಗಾಲ ಉಪಖಜಾನಾಧಿಕಾರಿ ಪಿ.ನಾಗರತ್ನಮ್ಮ, ಬೆಂಗಳೂರಿನ ಜಾನಪದ ಸಿರಿ ಚಾನೆಲ್ ನ ಕಾಂತರಾಜು, ಜಾನಪದ ಅಕಾಡೆಮಿ ಸದಸ್ಯರಾದ ಉಮೇಶ್, ಸಮಾಜ ಸೇವಕ ಗಿರೀಶ್ ಬಾಬು, ಸರ್ಕಾರಿ ವೈದ್ಯಾಧಿಕಾರಿ ಸಿ.ಮಹೇಶ್, ಹಸಗೂಲಿ ಸಿದ್ದಯ್ಯ, ಗಾಯಕ ಆರ್. ರವಿಕುಮಾರ್, ರಾಚಪ್ಪಾಜಿ ಜಾನಪದ ಕಲಾ ಸಂಘದ ಅಧ್ಯಕ್ಷರಾದ ಆರ್. ಸಿದ್ದರಾಜು, ಕಾರ್ಯದರ್ಶಿ ಬಾಚಹಳ್ಳಿ ಸೋಮಣ್ಣ, ವಕೀಲರಾದ ಸಿದ್ದಯ್ಯ, ಸಿದ್ದೇಶ್, ಸುಭಾಸ್ ಮಾಡ್ರಹಳ್ಳಿ, ಸಾಹಿತಿ ಕಾಳಿಂಗಸ್ವಾಮಿ, ಉಪನ್ಯಾಸಕಿ ಎಸ್. ಶೃತಿ, ಸುರೇಶ ಕಂದೇಗಾಲ, ಎಸ್. ಬಿ. ನಾಗರಾಜ್, ತಂಬೂರಿ ಕಲಾವಿದರಾದ ಚಿಕ್ಕರಂಗಶೆಟ್ಟಿ, ಮಹಾದೇವಯ್ಯ, ಸೋಬಾನೆ ಕಲಾವಿದರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನಿತರು…
ರಾಜ್ಯ ಪ್ರಶಸ್ತಿ ವಿಜೇತರಾದ ದೊಡ್ಡ ಗವಿಬಸಪ್ಪ, ತಂಬೂರಿ ಕಲಾವಿದರಾದ ಸಿದ್ದರಾಜು, ಸಿದ್ದಶೆಟ್ಟಿ, ನಾಗಯ್ಯ, ಸಿದ್ದರಾಜು, ಸಿದ್ದಯ್ಯ, ಗುರುಸಿದ್ಧಯ್ಯ, ಮಹದೇವನಾಯಕ, ಸಿದ್ದರಾಜು, ರಘು, ಕೈಲಾಸಮೂರ್ತಿ, ಶಿವಕುಮಾರ್, ಶ್ರೀನಿವಾಸ, ಮಾದಯ್ಯ, ಹರಳುಕೂಟಯ್ಯ, ಬಸವರಾಜು, ಸೋಬಾನೆ ಕಲಾವಿದರಾದ ದೊಡ್ಡಮ್ಮ, ಬೆಳ್ಳಮ್ಮ, ವೆಂಕಟಮ್ಮ, ಲಕ್ಷ್ಮಮ್ಮ, ರಾಜಮ್ಮ ಅವರನ್ನು ಸನ್ಮಾನಿಸಲಾಯಿತು.
ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…
ಬೆಳಗಾವಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ…
ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ…
ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕನ್ನಡ ನುಡಿ ಜಾತ್ರೆಗೆ ನಾಳೆ ಅದ್ಧೂರಿ ಚಾಲನೆ ಸಿಗಲಿದ್ದು,…
ನವದೆಹಲಿ: ಬಾಬಾಸಾಹೇಬ್ ಅಂಬೇಡ್ಕರ್ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಯ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.…
ತುಮಕೂರು: 70 ಲಕ್ಷ ಕರೆಂಟ್ ಬಿಲ್ ಕಟ್ಟುವಂತೆ ಸಿದ್ಧಗಂಗಾ ಮಠಕ್ಕೆ ನೀಡಿದ್ದ ನೋಟಿಸನ್ನು ಸರ್ಕಾರ ಹಿಂಪಡೆದಿದೆ. ಸರ್ಕಾರಿ ನೀರಾವರಿ ಯೋಜನೆಗೆ…