ಚಾಮರಾಜನಗರ : ಆಕೆ ತುಂಬು ಗರ್ಭಿಣಿ ಹೇರಿಗೆ ನೋವು ಕಾಣಿಸಿಕೊಂಡು ದಟ್ಟಾರಣ್ಯದಲ್ಲಿ 8 ಕಿಲೊಮೀಟರ್ ಹೊತ್ತು ಆಸ್ಪತ್ರೆಗೆ ಗ್ರಾಮಸ್ಥರು ಕರೆತಂದಿರುವ ಘಟನೆ ಮಹದೇಶ್ವರಬೆಟ್ಟ ಅರಣ್ಯ ವ್ಯಾಪ್ತಿಯ ದೊಡ್ಡಾಣೆ ಗ್ರಾಮದಲ್ಲಿ ಕಂಡುಬಂದಿದೆ.
ಹೌದು, ತುಂಬು ಗರ್ಭಿ ಣಿ ಶಾಂತಲಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ಆಕೆಯನ್ನು ಆಸ್ಪತ್ರೆಗೆ ಕರೆತರುವ ಸಲುವಾಗಿ ಜನವನ ಸಾರಿಗೆ ಸೌಲಭ್ಯದಡಿ ಚಾಲಕನಿಗೆ ಆಂಬುಲೆನ್ಸ್ ಚಾಲಕನಿಗೆ ಕರೆ ಮಾಡಿದ್ದಾರೆ ಆದರೆ ಚಾಲಕರು ಅಧಿಕಾರಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕ ಸಾಧ್ಯವಾಗದೆ ಮತ್ತೆ ಡೋಲಿ ಮೊರೆಹೋದ ಗ್ರಾಮಸ್ಥರು ದೊಡ್ಡಾಣೆಯಿಂದ ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿ ಯನ್ನು ಹೊತ್ತು ತಂದಿದ್ದಾರೆ ಆದರೆ ಆರೋಗ್ಯ ಕೇಂದ್ರ ತಲುಪಲು ಇವರು ಪಟ್ಟಪಾಡು ಅಷ್ಟಿಸ್ಟಲ್ಲ, ದಟ್ಟಾರಣ್ಯದಲ್ಲಿ 8 ಕಿಲೊಮೀಟರ್ ದೂರ ಗರ್ಭಿಣಿಯನ್ನು ಹೊತ್ತು ಮದ್ಯರಾತ್ರಿ 2 ಗಂಟೆಗೆ ಹೊರಟು ಬೆಳಿಗ್ಗೆ 6 ಗಂಟೆಗೆ ಆಸ್ಪತ್ರೆ ಗೆ ತಲುಪಿದ್ದಾರೆ.
ಮಹದೇಶ್ವರಬೆಟ್ಟ ಅರಣ್ಯ ಗ್ರಾಮಸ್ಥರ ಅನುಕೂಲಕ್ಕಾಗಿ ಜನವನ ಸಾರಿಗೆ ವ್ಯವಸ್ಥೆ ಜಾರಿಗೆ ತಂದಿರುವ ಅರಣ್ಯ ಇಲಾಖೆ ಗರ್ಬಿಣಿಯರು, ಅನಾರೋಗ್ಯಪೀಡಿತರು, ಶಾಲಾ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರ ತುರ್ತು ಬಳಕೆಗೆ ಜಾರಿಗೆ ತಂದಿರುವ ಜನವನ ಸಾರಿಗೆ ಸೌಲಭ್ಯ ಇದ್ದೂ ಇಲ್ಲದಂತಾಗಿದೆ.
ಅಧಿಕಾರಿಗಳ ಈ ದಿವ್ಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.