ಚಾಮರಾಜನಗರ: ವರದಕ್ಷಿಣೆ ನೀಡಿಲ್ಲ ಎಂಬ ಕಾರಣಕ್ಕೆ ಮಾವನ ಮನೆಯ ಮುಂದೆ ನಿಂತಿದ್ದ ಎರಡು ಬೈಕ್‌ಗಳಿಗೆ ಅಳಿಯ ಬೆಂಕಿ ಹಚ್ಚಿದ ಘಟನೆ ಚಾಮರಾಜನಗರದ ಗಾಳಿಪುರದ ಅಬ್ದುಲ್ ಕಲಾಂ ನಗರದಲ್ಲಿ ಜರುಗಿದೆ.
ಹತೀಜಾ ಖೂಬ್ರಳ ಹಾಗೂ ಮೊಹಮ್ಮದ್ ಷರೀಪ್ ಕಳೆದು ಏಳು ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು. ಮದುವೆ ಬಳಿಕ ಹಣ ಹಾಗೂ ಚಿನ್ನಭರಣಕ್ಕೆ ಮಾವ ಹಾಗೂ ಹೆಂಡತಿಯನ್ನು ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
ಈ ಹಿನ್ನಲೆ ತಡರಾತ್ರಿ ಮಾನವ ಮನೆಯ ಮುಂದೆ ಬಂದ ಅಳಿಯ ಮನೆಯ ಮುಂದಿದ್ದ ಬೈಕಿಗೆ ಬೆಂಕಿ ಹಚ್ಚಿದ್ದಾನೆ. ಅಲ್ಲದೇ ತಡೆಯಲು ಹೋದ ಅತ್ತೆಯ ಕೈಯನ್ನೂ ಮುರಿದು ಹಾಕಿದ್ದಾನೆ. ಸದ್ಯ ಬೈಕ್‌ಗಳು ಧಗಧಗ ಉರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಹಿಂದೆಯೇ ಅಳಿಯನ ಗೋಳು ಸಹಿಸಲಾಗದೇ ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ವಿಚಾರಣೆ ನಡೆಸಿರಲಿಲ್ಲ. ಈಗಲಾದರೂ ಪೊಲೀಸರು ಅಳಿಯರ ರಂಪಾಟವನ್ನು ತಡೆದು ಅವನಿಗೆ ಬುದ್ದಿ ಕಲಿಸಲಿ ಎಂದು ಕುಟುಂಬದವರು ಮನವಿ ಮಾಡಿದ್ದಾರೆ.
ಸಾಲಿಗ್ರಾಮ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಚಾಲಕ ಚಂದ್ರು ಆರೋಪ ಸಾಲಿಗ್ರಾಮ: ದಲಿತ ಮತ್ತು ಹಿಂದುಳಿದ…
ಕೃಷ್ಣ ಸಿದ್ದಾಪುರ ಸಂತೆಮಾಳದಲ್ಲಿ ತರಕಾರಿ ಜೊತೆ ಸಾಂಕ್ರಾಮಿಕ ರೋಗವೂ ಉಚಿತ ಕ್ರಮಕೈಗೊಳ್ಳದ ಗ್ರಾ.ಪಂ. ವಿರುದ್ಧ ಸಾರ್ವಜನಿಕರ ಅಸಮಾಧಾನ ಸಿದ್ದಾಪುರ: ಸಾರ್ವಜನಿಕ…
ಬೆಂಗಳೂರು ಡೈರಿ ಆರ್.ಟಿ.ವಿಠ್ಠಲಮೂರ್ತಿ ಘನತೆಯ ಬದುಕು ಬಯಸುವ ಮನುಷ್ಯನ ಹಕ್ಕನ್ನು ಎತ್ತಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ಬ್ರಿಟಿಷರ ಗುಲಾಮಗಿರಿಯಲ್ಲಿದ್ದ ಭಾರತಕ್ಕೆ…
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಘರ್ಷಣೆ ಸಂದರ್ಭದಲ್ಲಿ ಗುಂಡೇಟಿನಿಂದ ಕಾಂಗ್ರೆಸ್ ಕಾರ್ಯಕರ್ತ…
ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿವಿ ಅಶೋಕಪುರಂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ ೨,೦೦೦ ಇದ್ದ…