mahesh chandragurumahesh chandraguru
ಗುಂಡ್ಲುಪೇಟೆ : ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ, ಹೋರಾಟಗಾರ ಡಾ.ಮಹೇಶಚಂದ್ರ ಗುರು ಅವರ ಜನಪರ ಹೋರಾಟಗಳು ಸದಾ ಜೀವಂತವಾಗಿ ಇರುವಂತೆ ಅವರ ಸ್ಮಾರಕವನ್ನು ಉಳಿಸಿಕೊಳ್ಳಬೇಕಿದೆ ಎಂದು ಚಾಮರಾಜನಗರ ವಿವಿ ಕುಲಪತಿಗಳಾದ ಪ್ರೊ.ಗಂಗಾಧರ್ ಅವರು ಸಲಹೆ ನೀಡಿದರು.
ಪಟ್ಟಣದ ಹೊರವಲಯದ ಊಟಿ ರಸ್ತೆ ಬದಿಯಲ್ಲಿರುವ ಪ್ರೊ.ಗುರು ಸ್ಮಾರಕದಲ್ಲಿ ನಡೆದ ಪ್ರೊ.ಮಹೇಶ ಚಂದ್ರ ಗುರು ಅವರ ಪ್ರಥಮ ವರ್ಷದ ಪುಣ್ಯಾನುಮೋದನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೌದ್ಧ ಧಮ್ಮವನ್ನು ಚಾಮರಾಜನಗರ ಜಿಲ್ಲೆಯಿಂದ ಪುನರುಜ್ಜೀವನ ಮಾಡುತ್ತಿರುವ ಪ್ರೊ.ಗುರು ಅವರ ಸ್ಮಾರಕ ಸಮಾಜಕ್ಕೆ ಮಾದರಿಯಾಗಿದೆ. ಅವರು ನಡೆಸಿದ ಹೋರಾಟಗಳನ್ನು ಮನನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಡಾ.ಶಿವಕುಮಾರ್ ಮಾತನಾಡಿ, ಪ್ರೊ.ಗುರು ಅವರು ನಿಷ್ಠುರವಾದಿ ಆಗಿರದಿದ್ದರೆ ೪ ವಿವಿಗಳಿಗೆ ಕುಲಪತಿ ಆಗಬಹುದಿತ್ತು. ಸತ್ತ ನಂತರವೂ ಅವರು ಜೀವಂತವಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಅವರ ಶಿಷ್ಯರದಾಗಿದೆ. ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಗುರು ಅವರು ಬೆಳಕಾಗಿದ್ಧಾರೆ ಎಂದು ಸ್ಮರಿಸಿದರು.
ಮೈಸೂರು ವಿವಿಯ ಇಎನ್‌ಎಂಆರ್‌ಸಿ ನಿರ್ದೇಶಕರಾದ ಡಾ.ಸಪ್ನಾ ಅವರು ಮಾತನಾಡಿ, ಗುರು ಅವರು ತಮ್ಮ ವಿದ್ಯಾರ್ಥಿಗಳನ್ನು ಶೈಕ್ಷಣಿಕ ತಂದೆಯಂತೆ ಸಲಹಿದ್ದಾರೆ. ನಮ್ಮಂತಹವರು ಪ್ರಾಧ್ಯಾಪಕರಾಗಲು ಗುರು ಅವರ ಕೊಡುಗೆ ದೊಡ್ಡದು. ಅವರ ಕುಟುಂಬದವರು ಮತು ಶಿಷ್ಯಂದಿರು ಅವರ ಸ್ಮಾರಕವನ್ನು ನಿರ್ಮಿಸಿ ಶಾಶ್ವತವಾಗಿ ಇರುವಂತೆ ಮಾಡಬೇಕಿದೆ ಎಂದರು.
ದಸಂಸ ಮುಖಂಡರಾದ ಚೋರನಹಳ್ಳಿ ಶಿವಣ್ಣ ಮಾತನಾಡಿ, ಗುರು ಅವರು ದಲಿತ ಹೋರಾಟಗಾರರಿಗೆ ಚೈತನ್ಯ ತುಂಬುತ್ತಿದ್ದರು. ಅವರ ಅಗಲಿಕೆಯಿಂದ ಸಮಾಜ ಸೈದ್ಧಾಂತಿಕ ಹಾಗೂ ಸಾಮಾಜಿಕವಾಗಿ ಬಡವಾಗಿದೆ. ಅವರಿಲ್ಲದ ಹೋರಾಟಗಳು ಗುರಿ ಇಲ್ಲದೆ ಸಪ್ಪೆಯಾಗಿದೆ ಎಂದರು.
ದಲಿತ ಹೋರಾಟಗಾರರಾದ ಜವರಯ್ಯ ಮಾತನಾಡಿ, ಗುರು ಅವರ ಅಗಲಿಕೆಯಿಂದ ಹೋರಾಟಗಳಿಗೆ ಜೀವ ಇಲ್ಲದಂತಾಗಿದೆ. ಮನುವಾದಿಗಳು ಮತ್ತು ಹಿಂದುತ್ವವಾದಿಗಳ ನಿದ್ದೆಗೆಡಿಸುತ್ತಿದ್ದರು. ಅವರ ವಿದ್ವತ್ತು ಪ್ರಶಂಸನೀಯ. ಅವರೊಂದಿಗೆ ಬೆಳೆದ ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದರು.
ಶೋಭನ ಬಂತೇಜಿ ಸೇರಿದಂತೆ ೯ ಬಂತೇಜಿಗಳ ಸಮ್ಮುಖದಲ್ಲಿ ಪುಣ್ಯಾನುಮೋದನೆ ನೆರವೇರಿತು.
ಡಾ.ಗುರು ಅವರ ಪತ್ನಿ ಪ್ರೊ.ಸಿ.ಹೇಮಾವತಿ, ಸಾಂಖ್ಯಿಕ ಇಲಾಖೆಯ ಜಂಟಿ ನಿರ್ದೇಶಕರಾದ ಡಿ.ಚಂದ್ರಶೇಖರಯ್ಯ, ಪತ್ರಕರ್ತ ಶಿವಕುಮಾರ್, ಪರಿಸರವಾದಿ ಜಗನ್ನಾಥ್, ಸರಗೂರಿನ ಉಪ ತಹಸೀಲ್ದಾರ್ ಪರಶಿವಮೂರ್ತಿ, ಸಾಹಿತಿ ಸಿದ್ದಸ್ವಾಮಿ, ಪ್ರೊ.ರಾಜೇಶ್ವರಿ, ಪ್ರೊ. ಕೋಮಲಾ, ಕಂದಾಯ ಇಲಾಖೆ ಅಧಿಕಾರಿ ಶಾಂತಕುಮಾರಿ, ವೈದ್ಯರಾದ ಡಾ.ದೇವಿಕಾ, ಮಾದಯ್ಯ, ಮಲ್ಕುಂಡಿ ಮಹದೇವಸ್ವಾಮಿ, ಶಿವಸ್ವಾಮಿ, ಕೆನರಾ ಬ್ಯಾಂಕ್ ಶಿವರಾಜು, ಡಾ.ರಾಘವೇಂದ್ರ, ಡಾ. ಶಿವರಾಜು, ಡಾ.ದಿಲೀಪ್ ನರಸಯ್ಯ, ಡಾ.ಸಂಜಯ್, ಡಾ.ಗೌತಮ್ ದೇವನೂರು, ಡಾ.ಗೋಪಾಲ್, ಡಾ.ಕುಮಾರಸ್ವಾಮಿ, ಡಾ.ನಿಂಗರಾಜು, ಡಾ.ಮಧುಸೂದನ್, ಡಾ.ಲೋಕೇಶ್, ಕೊಳ್ಳೇಗಾಲ ಡಾ.ಗುರುಮೂರ್ತಿ, ಡಾ.ಕೃಷ್ಣಮೂರ್ತಿ ಚಮರಂ, ಮಹೇಶ್ ಸೋಸ್ಲೆ, ಅಭಿಮಾನಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಬೆಂಗಳೂರು: ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್‌ಗೆ ಬೆನ್ನುನೋವು ಮಾಯವಾಯ್ತಾ ಎಂಬ ಕುತೂಹಲ ಮನೆ ಮಾಡಿದೆ. ದರ್ಶನ್…
ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬೆಂಗಳೂರಿನ ಪಬ್‌ನಲ್ಲಿ ಮಿಡಲ್ ಫಿಂಗಲ್ ತೋರಿಸಿ ದುರ್ವತನೆ ಮೆರೆದಿದ್ದು,…
ನವದೆಹಲಿ: ಶನಿವಾರ ಐದನೇ ದಿನವೂ ಇಂಡಿಗೋ ವಿಮಾನ ಹಾರಾಟ ಅಡಚಣೆಗಳು ಮುಂದುವರೆದಿದ್ದು, ದೇಶಾದ್ಯಂತ ಹಲವಾರು ವಿಮಾನಗಳು ರದ್ದಾಗಿವೆ. ಕಳೆದ ನಾಲ್ಕು…
ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…
ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…