ಚಾಮರಾಜನಗರ

ಗುಂಡ್ಲುಪೇಟೆ ಪಟ್ಟಣದ ರಸ್ತೆಗೆ ನಾಗರತ್ನಮ್ಮ ಹೆಸರಿಡಿ ಪುತ್ಥಳಿ ನಿರ್ಮಿಸಿ : ವಾಟಾಲ್ ಆಗ್ರಹ

ಗುಂಡ್ಲುಪೇಟೆ: ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿ ಏಳು ಬಾರಿ ಶಾಸಕಿ ,ಸಚಿವೆಯಾಗಿ ಮೊದಲ ಮಹಿಳಾ ಸ್ಪೀಕರ್ ಆದಂತಹ ಗಟ್ಟಿಗಿತ್ತಿ ಕೆ.ಎಸ್.‌ನಾಗರತ್ನಮ್ಮ ಅವರ ಹೆಸರನ್ನು ಗುಂಡ್ಲುಪೇಟೆ ಪಟ್ಟಣದ ಯಾವುದಾದರೂ ಪ್ರಮುಖ ರಸ್ತೆಗೆ ಇಡಬೇಕು ಹಾಗೂ ನಾಗರತ್ನಮ್ಮ ಅವರ ಪುತ್ಥಳಿ ನಿರ್ಮಿಸಬೇಕು ಎಂದು  ಕನ್ನಡಪರ ಹೋರಾಟಗಾರ ವಾಟಾಲ್ ನಾಗರಾಜು ಒತ್ತಾಯಿಸಿದರು.

ಈ ಕುರಿತು ಆಂದೋಲನದೊಂದಿಗೆ ಮಾತನಾಡಿದ ಅವರು, ನಾನು ಈ ವಿಚಾರವಾಗಿ ಕಳೆದ ಒಂದು ವರ್ಷದ ಹಿಂದೆಯೇ ಪುರಸಭೆ ಮುಖ್ಯಾಧಿಕಾರಿಯವರಿಗೆ ಒತ್ತಾಯಿಸಿದ್ದೆ, ಆದರೆ ಹೆಸರಿಟ್ಟರು ಪುತ್ಥಳಿ ನಿರ್ಮಾಣ ಮಾಡಲು ರಾಜಕಾರಣಿಗಳ ಕೇಳಬೇಕು ಎಂಬ ಉಡಾಪೆ ಉತ್ತರ ನೀಡಿದ್ದರು. ಮುಂದಿನ ದಿನಗಳಲ್ಲಿ ರಸ್ತೆಗೆ ಅವರ ಹೆಸರಿಟ್ಟು ಪುತ್ಥಳಿ ನಿರ್ಮಿಸದಿದ್ದರೆ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಗುಂಡ್ಲುಪೇಟೆ ಗಡಿ ಭಾಗದಲ್ಲಿ ಪರಭಾಷಿಕರ ಹಾವಳಿ ಹೆಚ್ಚಿದ್ದು, ನಮ್ಮ ಗುಂಡ್ಲುಪೇಟೆ ತಾಲ್ಲೂಕಿನ ರೈತರು ಜಮೀನು ಮಾರಿಕೊಳ್ಳಬಾರದು, ಗುಂಡ್ಲುಪೇಟೆ ರಸ್ತೆಗಳಲ್ಲಿ ಮಲೆಯಾಳಿ ನಾಮಫಲಕಗಳೆ ಹೆಚ್ಚಿದ್ದು ಬೇಕರಿ, ಅಂಗಡಿ, ಹೋಂ ಸ್ಟೇ, ಕೇರಳಿಗರದೆ ಹೆಚ್ಚಿದ್ದು ಇದರ ವಿರುದ್ದ ಕೆಲವೇ ದಿನಗಳಲ್ಲಿ ಚಳುವಳಿ ನಡೆಸಲಾಗುವುದು ಎಂದರು.

ಆಂದೋಲನ ಡೆಸ್ಕ್

Recent Posts

ಸಮವಸ್ತ್ರದ ಆತ್ಮಸಾಕ್ಷಿ ಮತ್ತು ಮೂರು ಪ್ರಜ್ಞೆಗಳು

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್‌ ಅಕಾಡೆಮಿ ಮೈಸೂರು  ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…

33 seconds ago

ದಸರಾ ಕಾರ್ಯಕ್ರಮಕ್ಕೆ ಸವಾಲಾದ ಬಸ್ ಸೇವೆ

ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…

9 mins ago

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

16 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

17 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

18 hours ago