ಚಾಮರಾಜನಗರ

ನಾಡ ಬಾಂಬ್‌ ಸ್ಫೋಟ: ಹಸುವಿನ ಮುಖ ಛಿದ್ರ

ಹನೂರು: ಜಮೀನುಗಳಲ್ಲಿ ಮೇವಿನ ನಡುವೆ ನಾಡ ಬಾಂಬ್ ಇಟ್ಟು ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಪ್ರಕರಣ ಕೆಲವು ದಿನಗಳ ಮಟ್ಟಿಗೆ ತಣ್ಣಗಾಗಿತ್ತು. ಇದೀಗ ಮತ್ತೆ ಸದ್ದು ಮಾಡುತ್ತಿದ್ದು, ನಾಡ ಬಾಂಬ್‌ ಸ್ಫೋಟಕ್ಕೆ ಒಂದು ಹಸುವಿನ ಮುಖ ಛಿದ್ರವಾಗಿರುವ ಘಟನೆ ಹನೂರು ತಾಲ್ಲೂಕು ವ್ಯಾಪ್ತಿಯ ಟಿಬೆಟಿಯನ್ ಕ್ಯಾಂಪ್ ಸಮೀಪ ಜರುಗಿದೆ.

ಹನೂರು ತಾಲ್ಲೂಕಿನ ಬೂದಬಾಳು, ಹನೂರು ಪಟ್ಟಣ, ಆರ್.ಎಸ್ ದೊಡ್ಡಿ, ಕುರಟ್ಟಿ ಹೊಸೂರು, ಕೌದಳ್ಳಿ ಗ್ರಾಮದ ಎರಡು ಕಡೆ ನಾಡ ಬಾಂಬ್ ಇಟ್ಟು ಸುಮಾರು ಹತ್ತಕ್ಕೂ ಹೆಚ್ಚು ಹಸುಗಳ ಮುಖ ಛಿದ್ರವಾಗಿತ್ತು.

ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ನಾಡ ಬಾಂಬ್ ಇಡುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದಾದ ನಂತರ ಸುಮಾರು ಮೂರು ತಿಂಗಳುಗಳ ಕಾಲ ಯಾವುದೇ ಸಿಡಿಮದ್ದು ಪ್ರಕರಣಗಳು ಪತ್ತೆಯಾಗಿರಲಿಲ್ಲ.

ಇದೀಗ ವಿ.ಎಸ್.ದೊಡ್ಡಿ ಗ್ರಾಮದ ಮಂಟೇಸ್ವಾಮಿ ಎಂಬುವವರಿಗೆ ಸೇರಿದ ಹಸುಗಳು ಟಿಬೆಟಿಯನ್ ಕ್ಯಾಂಪ್ ಸಮೀಪದ ಎನ್.ವಿಲೇಜ್ ಗ್ರಾಮದ ಖಾಲಿ ನಿವೇಶನದಲ್ಲಿ ಮೇವು ಮೇಯುತ್ತಿದ್ದವು. ಈ ವೇಳೆ ಒಂದು ಹಸು ಕಿಡಿಗೇಡಿಗಳು ಇಟ್ಟಿದ್ದ ನಾಡ ಬಾಂಬ್ ಜಿಗಿದ ಪರಿಣಾಮ ಅದರ ಮುಖ ಛಿದ್ರವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಡಬಾಂಬ್‌ ಇಟ್ಟಿದ್ದ ಕಿಡಿಗೇಡಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆಂದೋಲನ ಡೆಸ್ಕ್

Recent Posts

ಶಕ್ತಿ ಯೋಜನೆ ಟಿಕೆಟ್ ದುರ್ಬಳಕೆ : ಬಿಎಂಟಿಸಿ ಐವರು ಕಂಡಕ್ಟರ್‌ ಅಮಾನತು

ಬೆಂಗಳೂರು : ಶಕ್ತಿ ಯೋಜನೆಯ ಮಹಿಳಾ ಟಿಕೆಟ್‌ಗಳನ್ನು ಪುರುಷ ಪ್ರಯಾಣಿಕರಿಗೂ ನೀಡಿ ಹಣ ಸಂಗ್ರಹಿಸಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ…

23 mins ago

ಕೃಷಿ ಪದವಿ ಪಡೆಯಲು ಸುವರ್ಣ ಅವಕಾಶ : 50% ಮೀಸಲು, ಏಪ್ರಿಲ್ 29ಕ್ಕೆ ಪ್ರಾಯೋಗಿಕ ಪರೀಕ್ಷೆ

ಮೈಸೂರು : ರಾಜ್ಯದಲ್ಲಿ ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ಮತ್ತು ಅರಣ್ಯ ಶಾಸ್ತ್ರ ಪದವಿಗಳಿಗೆ ಕೃಷಿಕರ ಕೋಟಾದಡಿ (50%) ಅಡಿಯಲ್ಲಿ ವಿದ್ಯಾರ್ಥಿಗಳಿಗೆ…

35 mins ago

ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ

ಮುಂಬೈ : ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆಶಾ ಭೋಸ್ಲೆ ಅವರಿಗೆ…

1 hour ago

ಸಚಿವ ಸಂಪುಟ ಪುನರಾಚನೆಗೆ ಒತ್ತಡ ; ಕಾಂಗ್ರೆಸ್ ಶಾಸಕರು ಇಂದು ದೆಹಲಿಗೆ.

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನರಾಚನೆಗೆ ಒತ್ತಡ ಹೆಚ್ಚಾಗಿದ್ದು, 20ಕ್ಕೂ ಹೆಚ್ಚು ಶಾಸಕರು ಇಂದು (ಭಾನುವಾರ)…

1 hour ago

ಓದುಗರ ಪತ್ರ | ಕಿಕ್ಕೇರಿ ಕೆರೆಗೆ ಕೆಎಸ್‌ನ ಹೆಸರು ನಾಮಕರಣ ಶ್ಲಾಘನೀಯ

ಕನ್ನಡಕ್ಕೆ ಶ್ರೇಷ್ಠ ದಾಂಪತ್ಯ ಗೀತೆಗಳನ್ನು ನೀಡಿದ, ಪ್ರೇಮಕವಿಯೆಂದೇ ಹೆಸರಾದ ನಾಡಿನ ಹಿರಿಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಗೌರವಾರ್ಥವಾಗಿ ಹುಟ್ಟೂರಾದ ಕಿಕ್ಕೇರಿಯ…

2 hours ago

ಓದುಗರ ಪತ್ರ | ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಿ

ಮೈಸೂರಿನಲ್ಲಿ ಸ್ವಲ್ಪ ಮಳೆಯಾದರೂ ರೂಪಾನಗರ ಬಡಾವಣೆಯಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ. ರಾತ್ರಿ ವೇಳೆ ಮಳೆ ಬಂದರಂತೂ ವಿದ್ಯುತ್ ಸಂಪರ್ಕಕಲ್ಪಿಸುವುದು ಬೆಳಿಗ್ಗೆಯೇ.…

2 hours ago