ಚಾಮರಾಜನಗರ

ಹುಬ್ಬೆ ಹುಣಸೆ ಡ್ಯಾಂ ಭರ್ತಿ, ಇದು ಮಾದಪ್ಪನ ಕೃಪೆ ಎಂದ ಶಾಸಕ ಮಂಜುನಾಥ್

ಹನೂರು : ಕ್ಷೇತ್ರದ ಅಧಿದೇವತೆ ಮಲೆ ಮಾದೇಶ್ವರ ಸ್ವಾಮಿ ಕೃಪೆಯಿಂದಲೇ ಈ ಬಾರಿ ಉತ್ತಮ ಮಳೆಯಾಗಿ, ಬರಗಾಲದಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ಪಟ್ಟಣದ ಸಮೀಪದ ತುಂಬಿ ತುಳುಕುತ್ತಿರುವ ಹುಬ್ಬೆ ಹುಣಸೆ ಜಲಾಶಯದ ಬಳಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣಪತಿ ಹಬ್ಬದ ವೇಳೆಗೆ ರಾಜ್ಯದಲ್ಲೇ ಅತಿ ಕಡಿಮೆ ಮಳೆ ಬಿದ್ದಿದ್ದು ನಮ್ಮ ಹನೂರು ತಾಲೂಕಿನಲ್ಲಿ. ಬೋರ್‌ವೆಲ್‌ಗಳಲ್ಲಿ ನೀರು ಸಿಗದಂತಹ ಚಿಂತಾಜನಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕೇವಲ 2-3 ಗಂಟೆ ಸುರಿದ ಮಳೆಗೆ ಇಡೀ ಡ್ಯಾಂ ತುಂಬಿ ಹರಿಯುತ್ತಿದೆ. ಇದು ಮಾದಪ್ಪನ ಮಾಯೆ ಅಲ್ಲದೆ ಮತ್ತೇನು? ವರುಣ ದೇವನು ಕೃಪೆ ತೋರಿದ್ದರೆ ಅದು ಮಾದಪ್ಪನೇ ದಯೆ ತೋರಿದಂತೆ ಎಂದು ಬಣ್ಣಿಸಿದರು.

ಜಲಾಶಯವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಜಲಾಶಯದ ಬಲಭಾಗದಲ್ಲಿ ಸುಮಾರು 10 ರಿಂದ 12 ಎಕರೆ ಜಾಗವಿದ್ದು, ಅದನ್ನು ಅಭಿವೃದ್ಧಿಪಡಿಸಲಾಗುವುದು. ಡ್ಯಾಂ ಒಳಗಿರುವ ಆಲದ ಮರದ ದಿಣ್ಣೆಯನ್ನು ಐಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಬೋಟ್‌ನಲ್ಲಿ ತೆರಳಿ ಟೀ ಕುಡಿಯುವ ವ್ಯವಸ್ಥೆ ಕಲ್ಪಿಸಲಾಗುವುದು. ಸಂಜೆ ವೇಳೆ ಯುವ ಪೀಳಿಗೆ ಪ್ರಶಾಂತವಾಗಿ ಕುಳಿತು ಪ್ರಕೃತಿ ಸೌಂದರ್ಯ ಆಸ್ವಾದಿಸುವ ವಾತಾವರಣ ನಿರ್ಮಿಸಲಾಗುವುದು. ಜೊತೆಗೆ ರಿಂಗ್ ರಸ್ತೆ ಕಾಮಗಾರಿಯೂ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿಸಿದರು.

ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿ, ನಿರುದ್ಯೋಗಿ ಯುವಕರಿಗೆ ಹಾಗೂ ಕೂಲಿ ಕೆಲಸವಿಲ್ಲದೆ ಕಷ್ಟಪಡುತ್ತಿರುವ ಮಹಿಳೆಯರಿಗೆ ಉದ್ಯೋಗ ಸಿಗಲಿ ಎಂದು ಮಲೆ ಮಾದೇಶ್ವರ, ಬೆಟ್ಟದ ಮಾರಮ್ಮ, ಸಿದ್ದಪ್ಪಾಜಿ, ಮಂಟೇಸ್ವಾಮಿ ಮೊದಲಾದ ದೈವಗಳಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಈ ವೇಳೆ ನೀರಾವರಿ ಇಲಾಖೆಯ ಇಇ ಉಮೇಶ್ ಎಇಇ ಕರುಣಾಮಯಿ, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಹಾಲಿ ನಿರ್ದೇಶಕರಾದ ಉದ್ದನೂರು ಮಹದೇವಪ್ರಸಾದ್, ಗಿರೀಶ್ ಪ್ರಮೋದ್, ನಟರಾಜು, ದೇವರಾಜು ಬಾಬು, ಚಂಗಡಿ ಕರಿಯಪ್ಪ, ಮಾದಪ್ಪ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಸಿದ್ದರಾಜು, ಬಸವರಾಜು, ಮುಖಂಡರಾದ ವೆಂಕಟಾಚಲ, ಜೆಸಿಮ್ ಪಾಷಾ, ಗುರುಸ್ವಾಮಿ, ವೆಂಕಟೇಶ್, ಗೋವಿಂದ ಸೇರಿದಂತೆ ಇತರರು ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: 9 ಮಂದಿಗೆ ಗಾಯ

ಹನೂರು: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 9 ಜನರು ಗಾಯಗೊಂಡಿರುವ ಘಟನೆ ಹನೂರು ಪಟ್ಟಣದ ಹೊರವಲಯದ ಮಹದೇಶ್ವರ ಐಟಿಐ ಕಾಲೇಜು…

36 seconds ago

ಓದುಗರ ಪತ್ರ: ‘ಜಗವೆ ಕೊಂಡಾಡುವ ಹಾಗೆ’

‘ಜಗವೆ ಕೊಂಡಾಡುವ ಹಾಗೆ’ ಕರುನಾಡ ಕಂಬನಿ, ಜನಮನದ ನಾಡಿ ಅರ್ಜುನನಿಗೆ ಅಶ್ರುತರ್ಪಣೆ ಅಭಿಮಾನದ ಅಭಿಮನ್ಯುಗೆ ಹೃದಯದ ಅಭಿನಂದನೆ ಅಂಬಾರಿಯ ಹೊತ್ತು…

4 hours ago

ಓದುಗರ ಪತ್ರ: ಮೈಕ್ರೋ ಜೆರಾಕ್ಸ್ ಹಾವಳಿಗೆ ಕಡಿವಾಣ ಹಾಕಿ

ಪರೀಕ್ಷಾ ಸಮಯದಲ್ಲಿ ಬಹುತೇಕ ಜೆರಾಕ್ಸ್ ಅಂಗಡಿಗಳ ಮುಂದೆ ವಿದ್ಯಾರ್ಥಿಗಳ ದಂಡೇ ನೆರೆದಿರುತ್ತದೆ. ಪರೀಕ್ಷಾ ಸಮಯದಲ್ಲಿ ನೋಟ್ಸ್‌ಗಳನ್ನು ಜೆರಾಕ್ಸ್ ಮಾಡಿಸಲು ಬರುವವರಿಗಿಂತ…

4 hours ago

ಓದುಗರ ಪತ್ರ: ಅಂಬೇಡ್ಕರ್ ಪ್ರತಿಮೆಗೆ ದೀಪಾಲಂಕಾರ ವ್ಯವಸ್ಥೆಯಾಗಲಿ

ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿ ಕಳೆದ  ಕೆಲವು ದಿನಗಳಿಂದ ೨೦೨೬ರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಯುವ ಸಂಭ್ರಮ…

4 hours ago

ಓದುಗರ ಪತ್ರ: ಮಿತಿ ಹೆಚ್ಚಳ ಕಾರ್ಮಿಕ ಸ್ನೇಹಿ ನಿರ್ಧಾರ

ಸಾಮಾಜಿಕ ಭದ್ರತೆಯ ಒಂದು ಭಾಗವಾದ ನೌಕರರ ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ೧೫ ಸಾವಿರ ರೂಪಾಯಿಗಳಿಂದ…

4 hours ago

ಪೋಕ್ಸೋ ಪ್ರಕರಣ: ಬೇಕು ಮಕ್ಕಳ ಸ್ನೇಹಿ ವಾತಾವರಣ

ಒಡನಾಡಿ ಸ್ಟ್ಯಾನ್ಲಿ ಮಕ್ಕಳ ಮಾತನ್ನು ಆಲಿಸುವುದು ಕಾನೂನುಬದ್ಧ ಮೌಲ್ಯವೂ ಆಗಿದೆ ಮಕ್ಕಳನ್ನು ಒಳಗೊಂಡ ಬಹುತೇಕ ಪ್ರಕರಣಗಳಲ್ಲಿ ಆಕ್ರೋಶಗೊಂಡು, ತಾಳ್ಮೆಗೆಟ್ಟ ಪೋಷಕರು…

4 hours ago